Site icon Vistara News

Shiva Rajkumar: ಗ್ರೌಂಡ್‌ಗೆ ಇಳಿದ ಶಿವಣ್ಣ; ಕೆಸಿಸಿ ಕಪ್‌ಗೆ ತಯಾರಿ ಶುರು

Shiva Rajkumar started practice for KCC part IV

ಬೆಂಗಳೂರು: ಚಿತ್ರರಂಗದ ಗಣ್ಯರ ಕ್ರಿಕೆಟ್‌ ಪಂದ್ಯಾಟ ಸರಣಿ ಕೆಸಿಸಿ ಕಪ್‌ ಸೀಸನ್‌ 4ರ (KCC 4- Kannada Chalanachitra Cup) ಪಂದ್ಯಾವಳಿಗಳು ಡಿಸೆಂಬರ್ 23,24, 25 ರಂದು ನಡೆಯಲಿದೆ. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಅವರು ಟೂರ್ನಿಯ ವಿಶೇಷತೆಗಳನ್ನು ಪ್ರಕಟಿಸಿದ್ದರು. ಶಿವರಾಜ್​ಕುಮಾರ್ (Shiva Rajkumar) ಅವರು ಇಂದು (ಡಿಸೆಂಬರ್ 15) ಮುಂಜಾನೆಯೇ ಮೈದಾನಕ್ಕೆ ಇಳಿದಿದ್ದಾರೆ. ಅವರು ಕ್ರಿಕೆಟ್ ಪ್ರಾಕ್ಟಿಸ್ ಮಾಡಿದ್ದಾರೆ. ಗೇಮ್ ಬಗ್ಗೆ ಒಂದಷ್ಟು ವಿಚಾರಗಳನ್ನು ಅವರು ವಿಸ್ತಾರ ನ್ಯೂಸ್‌ ಜತೆ ಹಂಚಿಕೊಂಡರು.

ಶಿವಣ್ಣ ಮಾತನಾಡಿ ʻʻಶೂಟಿಂಗ್‌ ಎಲ್ಲ ಇರುತ್ತೆ. ಅದರ ಮಧ್ಯೆ ಬಿಡುವು ಮಾಡಿಕೊಂಡು ಪ್ರಾಕ್ಟಿಸ್ ಮಾಡುತ್ತಿದ್ದೇವೆ. ಎಲ್ಲರನ್ನೂ ಲವಲವಿಕೆಯಲ್ಲಿ ಇಟ್ಟುಕೊಳ್ಳಬೇಕು. ಬೌಲಿಂಗ್‌ ಈಗ ಚೆನ್ನಾಗಿ ಬರ್ತಿದೆ. ನನಗೆ ಇಂಡಿಯಾದಲ್ಲಿ ಎಲ್ಲ ಅಟಗಾರರು ಇಷ್ಟ. ಸಚಿನ್‌, ಧೋನಿ, ವಿರಾಟ್‌ ಹೀಗೆ ಎಲ್ಲರೂ ಇಷ್ಟ. ವರ್ಲ್ಡ್‌ ಕಪ್‌ ಗೆಲ್ಲದೇ ಇದ್ದಿದ್ದು ಬೇಸರ ಆಯ್ತು. ಆದರೆ ಆಟ ಎಂದರೆ ಗೆಲುವು ಸೋಲು ಇದ್ದಿದ್ದೆ. ಸಿನಿಮಾ ಮಾಡುವಾಗ ಕೂಡ ಹಾಗೇʼʼ ಎಂದರು.

ಕೆಸಿಸಿ ನಡೆಯುವಾಗ ಒಂದಷ್ಟು ಹೀರೊಗಳು ಬರುವುದಿಲ್ಲ ಎಂಬ ಮಾತುಗಳು ಇವೆ. ಈ ಬಗ್ಗೆ ಶಿವಣ್ಣ ಮಾತನಾಡಿ ʻʻಎಲ್ಲರಿಗೂ ಅವರದ್ದೇ ಆದ ಕೆಲಸಗಳು ಇರುತ್ತವೆ. ಅವರಿಗೆ ಒತ್ತಾಯ ಮಾಡೋಕೆ ಆಗಲ್ಲ. ಹಿರಿಯ ನಟನಾಗಿ ನಾವು ಸಪೋರ್ಟ್ ಮಾಡಬೇಕು. ನಾನು ಹಾಗಾಗಿ ಬಂದಿದ್ದೇನೆ. ಕೆಲವರಿಗೆ ಶೂಟಿಂಗ್‌ ಅದೆಲ್ಲ ಇದ್ದ ಕಾರಣ ಬರುವುದಕ್ಕೆ ಆಗುವುದಿಲ್ಲʼʼ ಎಂದರು.

ಇದನ್ನೂ ಓದಿ: ಸ್ಪೆಷಲ್​ ಆಗಿರಲಿದೆ ಈ ಬಾರಿಯ ಕೆಸಿಸಿ ಸೀಸನ್ 4; ಮಾಹಿತಿ ನೀಡಿದ ಕಿಚ್ಚ ಸುದೀಪ್​

ಶಿವಣ್ಣ ಹಾಗೂ ಸುದೀಪ್ ಮ್ಯಾಚ್‌ನಲ್ಲಿ ಎದುರು ಬದುರಾಗುತ್ತಿದ್ದಾರೆ. ಈ ಬಗ್ಗೆ ಶಿವಣ್ಣ ಮಾತನಾಡಿ ʻʻಇದು ಮ್ಯಾಚ್‌ ಅಷ್ಟೇ. ಗೇಮ್ ಎಂದು ಬಂದಾಗ ಎಲ್ಲರೂ ಎಲ್ಲರ ಜತೆ ಆಡಬೇಕು. ಇದು ಫೈಟ್​ ಅಲ್ಲʼʼ ಎಂದರು.

ಟಾಕ್ಸಿಕ್ ಟೈಟಲ್‌ ಬಗ್ಗೆ ಶಿವಣ್ಣ ಹೇಳಿದ್ದೇನು?

ಯಶ್‌ ಅವರ ʼಟಾಕ್ಸಿಕ್‌ʼ ಸಿನಿಮಾ ಬಗ್ಗೆ ಶಿವಣ್ಣ ಮಾತನಾಡಿ ʻʻಟೈಟಲ್‌ ಚೆನ್ನಾಗಿದೆ. ಟೈಟಲ್‌ನಲ್ಲಿಯೇ ಒಂದು ನಶೆ, ಕಿಕ್‌ ಇದೆ. ಯಶ್‌ ಅವರ ಬಗ್ಗೆ ಹೆಮ್ಮೆ ಇದೆ. ಕೆಜಿಎಫ್‌ ಸಿನಿಮಾ ಮೂಲಕ ಯಶ್‌ ಖ್ಯಾತಿ ಪಡೆದರು. ಅವರು ನನಗೆ ಬ್ರದರ್‌ ತರಹ. ನನಗೆ ಯಶ್‌ ಅವರನ್ನು ನೋಡುವಾಗ, ನನ್ನ ತಮ್ಮ ಬೆಳೆಯುತ್ತಿದ್ದಾನೆ ಅನ್ನಿಸುತ್ತೆʼʼ ಎಂದರು.

ಡಿಸೆಂಬರ್​ನಲ್ಲಿಯೇ ಟೂರ್ನಿ

22ರಂದು ಪ್ರಾಕ್ಟೀಸ್ ಮ್ಯಾಚ್ ನಡೆಯಲಿದ್ದು, ಇದರ ಕವರೇಜ್​ಗೆ ಮಾಧ್ಯಮಕ್ಕೆ ವಿಶೇಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

ಅದ್ಧೂರಿ ಚಾಲನೆ

ಮೂರು ದಿನಗಳ ಕಾಲ ನಡೆಯುವ ಈ ಟೂರ್ನಿಗೆ 23ರ ಸಂಜೆ ಅದ್ಧೂರಿ ಚಾಲನೆ ಸಿಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಕಿಚ್ಚ ಸುದೀಪ್, ಶಿವಣ್ಣ. ಡಾಲಿ ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್​ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಪಂದ್ಯವಾವಳಿಗೆ ಸಪರೇಟ್ ಟಿಕೆಟ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೂಡ ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿಯ ಕೆಸಿಸಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಭಾಗಿಗಳಾಗಲಿದ್ದಾರೆ. ಎಸ್ ಭದ್ರಿನಾಥ್, ಸುರೇಶ್ ರೈನಾ, ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ. ಗಿಫ್ಸ್ ಆಡಲಿದ್ದಾರೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.

ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್‌, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ. ಕಳೆದ ಸೀಸನ್‌ ಅಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕತ್ವದ ‘ಗಂಗಾ ವಾರಿಯರ್ಸ್’ ತಂಡ ಚಾಂಪಿಯನ್ ಆಗಿತ್ತು.

Exit mobile version