Site icon Vistara News

Shiva Rajkumar: ನಿಖಿಲ್‌ ಸಿನಿಮಾ ಸೆಟ್‌ಗೆ ಸಡನ್‌ ಭೇಟಿ ಕೊಟ್ಟ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌!

Shiva Rajkumar Nikhil Kumaraswamy

ಬೆಂಗಳೂರು: ಕಮಲ್ ಹಾಸನ್, ರಜನಿಕಾಂತ್, ಅಜಿತ್‌, ವಿಜಯ್‌ ಸೇರಿದಂತೆ ಅನೇಕ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಬಂಡವಾಳ ಹಾಕಿರುವ ಲೈಕಾ ಸಂಸ್ಥೆ ನಿಖಿಲ್ ಕುಮಾರ್ (Nikhil Kumaraswamy) ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದೀಗ ನಿಖಿಲ್‌ ಹೊಸ ಸಿನಿಮಾ ಸೆಟ್‌ಗೆ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಭೇಟಿ ಕೊಟ್ಟಿದ್ದಾರೆ. ಬಹಳ ದಿನಗಳ ನಂತರ ಶಿವರಾಜ್ ಕುಮಾರ್ (Shiva Rajkumar) ಹಾಗೂ ನಿಖಿಲ್ ಕುಮಾರ್‌ಸ್ವಾಮಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಇತ್ತೀಚಿಗಷ್ಟೇ ವಿದೇಶ ಪ್ರವಾಸ ಮುಗಿಸಿ ಬಂದಿದ್ದರು. ವಿದೇಶದಿಂದ ಬಂದ ನಂತರ ನಿಖಿಲ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಿಖಿಲ್ ಹೊಸ ಸಿನಿಮಾದ ಚಿತ್ರೀಕರಣ ನೆಡೆಯುತ್ತಿದ್ದು, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದಾರೆ. ಸಿನಿಮಾ ವಿಚಾರ ಹೊರತುಪಡಿಸಿ ಒಂದಿಷ್ಟು ವಯಕ್ತಿಕ ವಿಚಾರವಾಗಿಯೂ ಶಿವಣ್ಣ ಹಾಗೂ ನಿಖಿಲ್ ಚರ್ಚೆ ಮಾಡಿದ್ದಾರೆ. ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರವನ್ನು ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಶುರುವಾಗಿದೆ. ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ; Nikhil Kumaraswamy: ನಿಖಿಲ್‌ಗೆ ಹಿಂದಿ ಮಂದಿ ಫಿದಾ: ದಾಖಲೆ ವೀಕ್ಷಣೆ ಕಂಡ ‘ರೈಡರ್‌’!

ತಮಿಳಿನಲ್ಲಿ ‘ಕತ್ತಿ’, ‘2.0’, ‘ದರ್ಬಾರ್’, ‘ಪೊನ್ನಿyನ್ ಸೆಲ್ವನ್’ ಸೇರಿದಂತೆ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ. ಕೆಲವೇ ದಿನಗಳ ಹಿಂದೆಯಷ್ಟೆ ಖಾಸಗಿ ಹೋಟೆಲ್‌ನಲ್ಲಿ ಪ್ರೊಡಕ್ಷನ್ ನಂ. 28 ಸಿನಿಮಾ ಮುಹೂರ್ತ ನೆರವೇರಿತ್ತು. ಮಾಜಿ ಪ್ರಧಾನಿ ಎಚ್‌. ಡಿ ದೇವಗೌಡರು, ಮಾಜಿ ಸಿಎಂ ಎಚ್‌. ಡಿ ಕುಮಾರಸ್ವಾಮಿ ಈ ಸಮಾರಂಭದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಕೋರಿದ್ದರು. ‘ಜಾಗ್ವಾರ್’ ಸಿನಿಮಾ ಮೂಲಕ ನಿಖಿಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

Exit mobile version