Site icon Vistara News

Shivaji Surathkal-2 | ರಮೇಶ್‌ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2 ಟೀಸರ್‌ ರಿಲೀಸ್‌ ಡೇಟ್‌ ರಿವೀಲ್‌!

Shivaji Surathkal

ಬೆಂಗಳೂರು: ಶಿವಾಜಿ ಸುರತ್ಕಲ್ ಸಿನಿಮಾ (Shivaji Surathkal-2 ) ನಟ ರಮೇಶ್‌ ಅರವಿಂದ್‌ ಬದುಕಿನ ವಿಶೇಷ ಸಿನಿಮಾ. ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಹಿನ್ನೆಲೆಯಲ್ಲಿ ಇದೀಗ ಪಾರ್ಟ್ 2 ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ. ಚಿತ್ರದ ಟೀಸರ್ ರಿಲೀಸ್ ಪ್ಲಾನ್ ಮಾಡಿರುವ ಚಿತ್ರ ತಂಡ ಸೆ.10ರಂದು ಟೀಸರ್ ಅನ್ನು ಬೆಳಗ್ಗೆ 10.01ಕ್ಕೆ ರಿಲೀಸ್ ಮಾಡುತ್ತಿದೆ.

ಈಗಾಗಲೇ 85% ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ತಂಡ ಮುಂದಿನ ವರ್ಷ ಜನವರಿಯಲ್ಲಿ ಸಿನಿಮಾ ತೆರೆಗೆ ತರುವ ಯೋಜನೆಯಲ್ಲಿದೆ ಎಂದು ಹೇಳಿಕೊಂಡಿದೆ. ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಈ ಸಲ ಬರುವ ಕೇಸ್ ಬೇರೆ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿಯ ಕೇಸ್ ನಂಬರ್-102 ಆಗಿತ್ತು. ಆದರೆ, ಈ ಬಾರಿ ಎಸಿಪಿ ಶಿವಾಜಿ ಸುರತ್ಕಲ್ ಯಾವ ಕೇಸ್‌ ಅನ್ನು ಬೆನ್ನೆಟ್ಟಿ ಹೋಗುತ್ತಾರೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ | Apthamitra | ಆಪ್ತಮಿತ್ರ ಚಿತ್ರಕ್ಕೆ 18 ವರ್ಷ: ಖುಷಿ ಹಂಚಿಕೊಂಡ ರಮೇಶ್‌ ಅರವಿಂದ್‌

ಶಿವಾಜಿ ಸುರತ್ಕಲ್‌-2ನಲ್ಲಿ ಮೇಘನಾ ಗಾಂವ್ಕರ್ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತ ಪೋಟೋಗಳನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು.

ಪಾತ್ರದಲ್ಲಿ ವಿನಾಯಕ ಜೋಶಿ, ಪೂರ್ಣಚಂದ್ರ ಮೈಸೂರು, ನಟಿ ನಿಧಿ ಹೆಗಡೆ, ಸುಮಂತ್ ಭಟ್ ನಟಿಸಿಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಹಿಂದೆ ಮೊದಲ ಭಾಗದ ಪಾತ್ರಗಳು ಇಲ್ಲಿ ರೀ ಕನೆಕ್ಟ್ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ


Exit mobile version