ಬೆಂಗಳೂರು: ಸ್ಯಾಂಡಲ್‌ವುಡ್ ನಟ ರಮೇಶ್ ಅರವಿಂದ್ ಅವರಿಗೆ ಶನಿವಾರ (ಸೆ.೧೦) ಜನುಮದಿನದ ಸಂಭ್ರಮದ ಖುಷಿಯಲ್ಲಿ ಶಿವಾಜಿ ಸುರತ್ಕಲ್ 2 (Shivaji Surathkal-2) ಚಿತ್ರತಂಡ ಸಿನಿಮಾದ ಟೀಸರ್ ರಿಲೀಸ್ ಮಾಡಿದೆ.
ಒಬ್ಬ ರಾಕ್ಷಸನ ಕಥೆಯನ್ನು ಹೇಳಲು ಹೊರಟಿರುವಂತಿದೆ ಚಿತ್ರಂಡ. ಇದೀಗ ಟೀಸರ್ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ʻಮಾಯಾವಿಯ ನಿಗೂಢ ಪ್ರಕರಣ’ (The Mysterious Case Of Maayavi) ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದು, ಶಿವಾಜಿ ಸುರತ್ಕಲ್ ಹೊಸ ಕೇಸ್ ಹಿಂದೆ ಬಿದ್ದಿದ್ದಾರೆ.
ಟೀಸರ್ ಮೂಲಕ ರಿವೀಲ್ ಆಯ್ತು ಹೊಸ ಕೇಸ್ ನಂಬರ್!
ಈಗಾಗಲೇ ಶೇಕಡಾ 85ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ತಂಡ ಮುಂದಿನ ವರ್ಷ ಜನವರಿಯಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಎಂದು ಹೇಳಿಕೊಂಡಿದೆ. ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಈ ಸಲ ಬರುವ ಕೇಸ್ ಬೇರೆ ಇದೆ. ಕಳೆದ ಬಾರಿಯ ಕೇಸ್ ನಂಬರ್-102 ಆಗಿತ್ತು. ಈ ಬಾರಿ 131 ನಂಬರ್ ಕೇಸನ್ನು ಎಸಿಪಿ ಶಿವಾಜಿ ಸುರತ್ಕಲ್ ಭೇದಿಸಲಿದ್ದಾರೆ.
ಇದನ್ನೂ ಓದಿ | Shivaji Surathkal-2 | ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2 ಟೀಸರ್ ರಿಲೀಸ್ ಡೇಟ್ ರಿವೀಲ್!
ಕುತೂಹಲ ಹುಟ್ಟಿಸಿದೆ ಶಿವಾಜಿ ಸುರತ್ಕಲ್ 2 ಟೀಸರ್
ರಮೇಶ್ ಅರವಿಂದ್ ನಟಿಸಿರುವ ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಸಿನಿಮಾ ಶಿವಾಜಿ ಸುರತ್ಕಲ್-2 ಟೀಸರ್ ಬಿಡುಗಡೆಗೊಂಡಿದ್ದು ಜನಮನ್ನಣೆ ಪಡೆದುಕೊಳ್ಳುತ್ತಿದೆ. ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್ ಅನ್ನು ಉಡುಗೊರೆಯಾಗಿ ಚಿತ್ರತಂಡ ನೀಡಿದೆ.
ಶಿವಾಜಿ ಸುರತ್ಕಲ್-2ನಲ್ಲಿ ಮೇಘನಾ ಗಾಂವ್ಕರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತ ಪೋಟೊಗಳನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು. ಪಾತ್ರದಲ್ಲಿ ವಿನಾಯಕ ಜೋಶಿ, ಪೂರ್ಣಚಂದ್ರ ಮೈಸೂರು, ನಟಿ ನಿಧಿ ಹೆಗಡೆ, ಸುಮಂತ್ ಭಟ್ ನಟಿಸಿಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಹಿಂದೆ ಮೊದಲ ಭಾಗದ ಪಾತ್ರಗಳು ಇಲ್ಲಿ ರೀ ಕನೆಕ್ಟ್ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ | Kannada New Movies | ಸೆಪ್ಟೆಂಬರ್‌ನಲ್ಲಿ ತೆರೆಗೆ ಸಾಲು ಸಾಲು ಸಿನಿಮಾ: ನಿಮಗಿಷ್ಟದ ಚಿತ್ರ ಇದೆಯೇ?