ಬೆಂಗಳೂರು: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಜುಲೈ 21ರಂದು ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ ಬಗ್ಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ಶಿವರಾಜಕುಮಾರ್ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಬಗ್ಗೆ ಮೆಚ್ಚುಗೆ ಮಾತನ್ನು ಹೇಳಿದ್ದಾರೆ ಹ್ಯಾಟ್ರಿಕ್ ಹೀರೊ. ಹಾಸ್ಟೆಲ್ ಹುಡುಗರ ಜೀವನದ ಕಥೆಯನ್ನು ತೆರೆದಿಡುವ ಸಿನಿಮಾ ಇದಾಗಿದೆ. ರಮ್ಯಾ, ರಿಷಬ್ ಶೆಟ್ಟಿ ಮೊದಲಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ
ಶಿವರಾಜ್‌ಕುಮಾರ್ ಈ ಬಗ್ಗೆ ಮಾತನಾಡಿ ʻʻಹಾಸ್ಟೆಲ್ ಹುಡುಗರು ಸಿನಿಮಾ ನೋಡಬೇಕಿತ್ತು ನಾನು. ಆದರೆ ಆಗಲಿಲ್ಲ. ನನ್ನ ಪರವಾಗಿ ಗೀತಾ ಸಿನಿಮಾ ನೋಡಿದ್ದಾರೆ. ಸಿನಿಮಾ ಟೀಂ ಕ್ರಿಯೇಟಿವಿಟಿ ಸಖತ್ ಇದೆ. ನಮ್ಮ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ. ಸುದೀಪ್, ರಿಷಬ್ ಶೆಟ್ಟಿ, ಪವನ್, ರಮ್ಯಾ ಸೇರಿದಂತೆ ಹಲವರು ಸಪೋರ್ಟ್ ಮಾಡಿದ್ದಾರೆ. ನ್ಯಾಯವಾಗಿ ಸಿನಿಮಾ ಮಾಡಿದರೆ ಹಿಟ್ ಆಗುತ್ತದೆ. ಅಭಿಮಾನಿ ದೇವರುಗಳು ಎಂದು ಅಪ್ಪಾಜಿ ಹೇಳುವುದು ಸತ್ಯ. ಕನ್ನಡ ಚಿತ್ರರಂಗದಲ್ಲಿ ಯಾಕೆ ಹೊಸ ಪ್ರತಿಭೆಗಳು ಬೆಳೆಯುತ್ತಿಲ್ಲ ಎನ್ನುವ ನೋವಿತ್ತು. ಪ್ರೇಮ್, ಪ್ರಶಾಂತ್ ನೀಲ್, ಓಂ ಪ್ರಕಾಶ್, ಎಸ್ ನಾರಾಯಣ್, ರಕ್ಷಿತ್ ಶೆಟ್ಟಿ ಹೀಗೆ ಇವೆರಲ್ಲರೂ ಸೂಪರ್ ನಿರ್ದೇಶಕರು. ಫ್ರೆಂಡ್ ಶಿಪ್‌ಗೆ ಯಾವಾಗಲೂ ಬೆಲೆ ಇರಬೇಕುʼʼಎಂದರು.
ಹಾಸ್ಟೆಲ್ ಹುಡುಗರ ವಿರುದ್ಧ ರಮ್ಯಾ ನೀಡಿದ ನೋಟಿಸ್ ಬಗ್ಗೆ ಶಿವಣ್ಣ ಮಾತನಾಡಿ ʻʻಯಾರ ಬಗ್ಗೆಯೂ ಏನು ಕಮೆಂಟ್ ಮಾಡುವುದು ಬೇಡ. ಸಿನಿಮಾ ರಿಸಲ್ಟ್ ನೋಡಬೇಕು ಅಷ್ಟೇ. ಸತ್ಯ ಎಲ್ಲಿ ಇರುತ್ತದೆ ಜಯ ಅಲ್ಲಿ ಇರುತ್ತದೆ. ನಮ್ಮ ಚಿತ್ರರಂಗ ಬೆಳೆಯಬೇಕು. ಇಶ್ಯೂ ಮಾಡುವುದು ಬೇಡʼʼಎಂದರು.
ಇದನ್ನೂ ಓದಿ: Hostel Hudugaru Bekagiddare: ಸೋಷಿಯಲ್ ಮೀಡಿಯಾದಲ್ಲಿ `ಹಾಸ್ಟೆಲ್ ಹುಡುಗರಿ’ಗೆ ಮೆಚ್ಚುಗೆಯ ಸುರಿಮಳೆ!
ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನವಿದೆ.
ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜತೆಗೆ ಸೇರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸಿದೆ.