Site icon Vistara News

Shivaraj Kumar Birthday |ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಶಿವರಾಜ್‌ ಕುಮಾರ್‌

Shivaraj Kumar Birthday

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರಿಗೆ ಮಂಗಳವಾರ (ಜು.12) ಹುಟ್ಟುಹಬ್ಬದ (Shivaraj Kumar Birthday) ಸಂಭ್ರಮ. 60ನೇ ವಸಂತಕ್ಕೆ ಕಾಲಿಟ್ಟ‌ ಹ್ಯಾಟ್ರಿಕ್‌ ಹೀರೋ ಶಿವಣ್ಣನಿಗೆ ಕನ್ನಡಿಗರು ಪ್ರೀತಿಯಿಂದ ಶುಭ ಹಾರೈಸಿದ್ದಾರೆ. ಅಪ್ಪು ಇಲ್ಲವೆಂಬ ಬೇಸರದ ನಡುವೆ ನಟ ಶಿವಣ್ಣ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

60ನೇ ವಸಂತಕ್ಕೆ ಕಾಲಿಟ್ಟರೂ ಶಿವಣ್ಣ ಈಗಲೂ ಯಂಗ್ ಆಂಡ್‌ ಎನರ್ಜೆಟಿಕ್.‌ ಯಾವ ಸೀನ್‌ ಇರಲಿ, ಎಂತಹದ್ದೇ ಕಷ್ಟದ ಫೈಟ್‌ ಇರಲಿ‌, ಶಿವಣ್ಣ ನೀರು ಕುಡಿದಂತೆ ನಟಿಸಿಬಿಡುತ್ತಾರೆ. ಅವರ ಡಾನ್ಸ್‌ ನೋಡಲು ಕನ್ನಡಿಗರು ಕಾದು ಕುಳಿತಿರುತ್ತಾರೆ.

ಇದನ್ನೂ ಓದಿ | Shivaraj Kumar Birthday | ಜನುಮದಿನದ ಸಂಭ್ರಮದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌

‘ಬೈರಾಗಿ’ ಸಂಭ್ರಮ

ಶಿವಣ್ಣ ಅಭಿನಯದ ‘ಬೈರಾಗಿ’ ಇತ್ತೀಚೆಗಷ್ಟೇ ಅದ್ಧೂರಿಯಾಗಿ ರಿಲೀಸ್‌ ಆಗಿತ್ತು. ನೂರಾರು ಥಿಯೇಟರ್‌ಗಳಲ್ಲಿ ‘ಬೈರಾಗಿ’ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಹೊತ್ತಲ್ಲೇ ಶಿವಣ್ಣ ಬರ್ತ್‌ ಡೇ ಸಂಭ್ರಮ ಫ್ಯಾನ್ಸ್‌ಗಳಿಗೆ ಡಬಲ್‌ ಧಮಾಖಾ ಕೊಟ್ಟಂತಾಗಿದೆ.

ಶುಭಾಶಯ ಕೋರಿದ UI ತಂಡ

ಉಪ್ಪಿ ಚಿತ್ರ UI ತಂಡದಿಂದ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲಾಯಿತು.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್‌ ರಿಲೀಸ್‌

Exit mobile version