ಬೆಂಗಳೂರು: ಕಾಲಿವುಡ್ ನಟ ಸಿದ್ಧಾರ್ಥ್ (Actor Siddharth) ತಮ್ಮ ಇತ್ತೀಚಿನ ಚಿತ್ರ ‘ಚಿತ್ತ’ (Chithha Film) ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಸೆಪ್ಟೆಂಬರ್ 28ರಂದು ಕನ್ನಡ ಪರ ಸಂಘಟನೆಯ ಸದಸ್ಯರು (Siddharth walked out press conference in Bengaluru ) ನಟನ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ನಟ ಪತ್ರಿಕಾಗೋಷ್ಠಿಯಿಂದ ಹೊರನಡೆದರು. ಇದಾದ ಬಳಿಕ ನಟ ಪ್ರಕಾಶ್ ರಾಜ್, ಶಿವರಾಜ್ ಕುಮಾರ್ (Prakash Raj, Shiva Rajkumar) ಮುಂತಾದ ಗಣ್ಯರು ಅವರಲ್ಲಿ ಕ್ಷಮೆಯನ್ನೂ ಯಾಚಿಸಿದ್ದರು. ನಟ ಸಿದ್ಧಾರ್ಥ್ ಇತ್ತೀಚೆಗೆ ಈ ವಿಷಯವನ್ನು ಪ್ರಸ್ತಾಪಿಸಿ ಊಹಾಪೋಹಗಳಿಗೆ ತೆರೆ ಎಳೆದರು. ಶಿವರಾಜ್‌ಕುಮಾರ್ ಮತ್ತು ನಟ ಪ್ರಕಾಶ್ ರಾಜ್ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅವರಿಗೂ ಈ ಘಟನೆಗೂ ಸಂಬಂಧವಿಲ್ಲ ನಟ ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದು ‘ಚಿತ್ತ’ ಚಿತ್ರದ ನಿರ್ಮಾಪಕರೂ ಆಗಿರುವ ಸಿದ್ಧಾರ್ಥ್, ತನಗೆ ಅಪಾರ ನಷ್ಟವಾಗಿದೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ʻʻನಿರ್ಮಾಪಕನಾಗಿ ಇದೇ ಮೊದಲ ಬಾರಿಗೆ ನನ್ನ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಮುನ್ನ ಹಲವರಿಗೆ ಪ್ರದರ್ಶಿಸಿದ್ದೇನೆ. ಚೆನ್ನೈ ಹಾಗೂ ಕೊಚ್ಚಿಯಲ್ಲಿ ಸಿನಿಮಾ ಪ್ರದರ್ಶಿಸಿದ್ದೆ. .ಬೆಂಗಳೂರಿನಲ್ಲಿಯೂ ಇಂತಹ ಪ್ರದರ್ಶನ ಮಾಡುವ ಯೋಜನೆ ಇತ್ತು. ಬಿಡುಗಡೆಗೂ ಮುನ್ನ ಸುಮಾರು 2,000 ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸುವ ಯೋಜನೆ ಹಾಕಿಕೊಂಡಿದ್ದೆ. ಇಲ್ಲಿಯವರೆಗೆ ಈ ರೀತಿ ಯಾರೂ ಮಾಡಿರಲಿಲ್ಲ. ಆದರೆ ಬಂದ್ ಇದ್ದ ಕಾರಣ ಗೌರವಾರ್ಥವಾಗಿ ನಾವು ಎಲ್ಲವನ್ನೂ ರದ್ದುಗೊಳಿಸಿದ್ದೇವೆ. ನಮಗೆ ಭಾರಿ ನಷ್ಟವಾಗಿದೆ. ಅದನ್ನು ಮೀರಿ ಉತ್ತಮ ಚಿತ್ರವನ್ನು ಅಲ್ಲಿನ ಜನರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದಿರುವುದು ನಿರಾಸೆ ತಂದಿದೆʼʼಎಂದು ಬೇಸರ ಹೊರ ಹಾಕಿದ್ದರು.
ಇದನ್ನೂ ಓದಿ: Actor Siddharth: ‘ಚಿಕ್ಕು’ ಸುದ್ದಿಗೋಷ್ಠಿಗೆ ತಡೆ; ಭಾರಿ ನಷ್ಟವಾಗಿದೆ, ನಿರಾಸೆ ತಂದಿದೆ ಎಂದ ನಟ ಸಿದ್ಧಾರ್ಥ್
ಈ ಘಟನೆಗೆ ಸಂಬಂಧಿಸಿದಂತೆ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಪ್ರಕಾಶ್ ರಾಜ್ ಅವರು ಸಿದ್ಧಾರ್ಥ್ ಅವರಿಗೆ ಕ್ಷಮೆಯಾಚಿಸಿದ್ದರು. ಇದೀಗ ನಟ ಈ ಬಗ್ಗೆ ಮಾತನಾಡಿ ʻʻಶಿವರಾಜ್‌ಕುಮಾರ್ ಮತ್ತು ನಟ ಪ್ರಕಾಶ್ ರಾಜ್ ಅವರು ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅವರಿಗೂ ಈ ಘಟನೆಗೂ ಸಂಬಂಧವಿಲ್ಲ.ನನ್ನ ಸಿನಿಮಾವನ್ನು ಕನ್ನಡಿಗರು ಕೂಡ ಇಷ್ಟ ಪಡುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಕೇವಲ ಸಂಘಟನೆಯ 10 ಮಂದಿ ಬಂದು ಬೆದರಿಕೆ ಹಾಕಿದ್ದಾರೆ. ಅದು ಅವರ ಸಮಸ್ಯೆ ಹೊರತು ಬೇರೇನೂ ಅಲ್ಲ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಏತಕಿ ಎಂಟರ್‌ಟೇನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಚಿಕ್ಕು’ ಚಿತ್ರದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಆರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದೆ. ‘ಚಿಕ್ಕು’ ಚಿತ್ರದಲ್ಲಿ ಸಿದ್ಧಾರ್ಥ್ (Actor Siddharth) ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಷ್ಟೇ ಅಲ್ಲ, ಇದೊಂದು ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.