Site icon Vistara News

Shivarajkumar | ‘ವೇದ’ ಬಿಡುಗಡೆಯಾದ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟ ಶಿವರಾಜ್‌ ಕುಮಾರ್‌!

Shivarajkumar

ಬೆಂಗಳೂರು : ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ (Shivarajkumar) ಅಭಿನಯದ ವೇದ ಸಿನಿಮಾ ಬಿಡುಗಡೆ ಬೆನ್ನಲ್ಲೇ ಹೊಸ ಸಿನಿಮಾ ಒಂದರ ಪೋಸ್ಟ್‌ರ್‌ ಬಿಡುಗಡೆಗೊಳಿಸಿದ್ದಾರೆ. ಈ ಪೋಸ್ಟರ್ ನಲ್ಲಿ ಶಿವರಾಜ್ ಕುಮಾರ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ವಿಶೇಷ ಅಂದರೆ ಕನ್ನಡ ಕಿರುತೆರೆ ಹೆಸರಾಂತ ನಿರ್ದೇಶಕ ಹಾಗೂ ‘ಎಲ್ಲಿದ್ದೇ ಇಲ್ಲೀತನಕ’ ಸಿನಿಮಾ ನಿರ್ದೇಶನ ಮಾಡಿರುವ ತೇಜಸ್ವಿ ಕೆ ನಾಗ್‌ ಅವರು ಶಿವಣ್ಣ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಮಜಾ ಟಾಕೀಸ್ ಶೋನ ನಿರ್ದೇಶಕರು ಕೂಡ ಇವರಾಗಿದ್ದರು. ಸೃಜನ್ ಲೋಕೇಶ್ ಅವರ ಚಿತ್ರದ ಮೂಲಕ ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದವರು. ಇದೀಗ ಶಿವಣ್ಣಗೆ ನಿರ್ದೇಶನ ಮಾಡಲು ಹೊರಟಿದ್ದಾರೆ. ಇನ್ನು ತಾರಾಗಣ, ಸಿನಿಮಾ ಶೀರ್ಷಿಕೆ ಯಾವುದರ ಬಗ್ಗೆಯೂ ಮಾಹಿತಿ ಹಂಚಿಕೊಂಡಿಲ್ಲ. ಈ ಸಿನಿಮಾಗೆ ಮಂಜುಳಾ ಶಿವಾರ್ಜುನ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ | Vedha Movie | ಜೋರಾಗಿದೆ ʻವೇದʼ ಅಬ್ಬರ: ಮಸ್ತ್‌ ಸಿನಿಮಾ ಅಂದ್ರು ಫ್ಯಾನ್ಸ್‌, ಇಲ್ಲಿದೆ ಟ್ವಿಟರ್ ವಿಮರ್ಶೆ!

ಇನ್ನು ಶಿವಣ್ಣನ ವೇದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಾಂಗು, ಮಚ್ಚು ಹಿಡಿದು ಈಗಾಗಲೇ ಶಿವರಾಜ್​ಕುಮಾರ್ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಹೊಸದೇನಲ್ಲ. ಆದರೂ ವೇದ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರ ಲುಕ್ ಗಮನ ಸೆಳೆದಿದೆ.

ಇದನ್ನೂ ಓದಿ | Vedha Movie | ಎಲ್ಲಾ ಹುಡ್ಗೀರ್ ‘ವೇದ’ ಸಿನಿಮಾ ನೋಡ್ಲೇಬೇಕಂತೆ!

Exit mobile version