Site icon Vistara News

Shivarajkumar: ಮತ್ತೆ ಬಂದ ‌ʻಭೈರತಿ ರಣಗಲ್ʼ: ನರ್ತನ್‌ ಆ್ಯಕ್ಷನ್‌ ಕಟ್‌!

Shivarajkumar Bhairathi Ranagal First Look

ಬೆಂಗಳೂರು: ʻವೇದʼ ಸಿನಿಮಾ ಬಳಿಕ ‘ಗೀತಾ ಪಿಕ್ಚರ್ಸ್​’ನಲ್ಲಿ ಇದೀಗ ಶಿವರಾತ್ರಿಗೆ ಹೊಸ ಸಿನಿಮಾ ಅನೌನ್ಸ್‌ ಮಾಡಿದೆ. ಮಪ್ತಿ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ (Shivarajkumar) ಅವರು ಭೈರತಿ ರಣಗಲ್ ಆಗಿ ಮಿಂಚಿದ್ದರು. ಅದೇ ಹೆಸರಿನಲ್ಲಿ ಇದೀಗ ಶಿವಣ್ಣ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಶಿವರಾತ್ರಿ ಪ್ರಯುಕ್ತ ಈ ಸಿನಿಮಾ ಘೋಷಣೆ ಆಗಿದ್ದು, ಅವರ ಲುಕ್ ಗಮನ ಸೆಳೆದಿದೆ. ನರ್ತನ್ ಅವರ ಎರಡನೇ ಸಿನಿಮಾ ಇದಾಗಿದೆ.

‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ. ಶಿವಣ್ಣ ಅವರ ಹೋಂ ಬ್ಯಾನರ್​ನಲ್ಲಿ ಚಿತ್ರ ಮೂಡಿ ಬರುತ್ತಿದೆ. ‘ಗೀತಾ ಪಿಕ್ಚರ್ಸ್​’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಆಗಿಲ್ಲರಲಿಲ್ಲ.

ಇದನ್ನೂ ಓದಿ: Vedha Movie | ನಾಳೆ ವೇದ ಸಿನಿಮಾ ಆರ್ಭಟ ಶುರು: ರಾಜ್ಯಾದ್ಯಂತ ಶಿವಣ್ಣನ ಅಬ್ಬರ!

ಶಿವಣ್ಣ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭೈರತಿ ರಣಗಲ್ ಪ್ರೀಕ್ವೆಲ್‌ ಆಗಿ ಮೂಡಿಬರಲಿದೆ ಎನ್ನಲಾಗುತ್ತಿದೆ. ‘ವೇದ’ ಫೆಬ್ರವರಿ 10ರಂದು ಜೀ 5 ಒಟಿಟಿಗೆ ಬಂದಿದೆ. ಶಿವಣ್ಣ ಸಿನಿ ಕೆರಿಯರ್‌ನ 125ನೇ ಸಿನಿಮಾ ಹಾಗೂ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿರುವ ‘ವೇದ’ ಒಟಿಟಿಯಲ್ಲೂ ದಾಖಲೆ ಬರೆದಿದೆ.

Exit mobile version