Site icon Vistara News

Shivarajkumar | ಶಿವರಾಜಕುಮಾರ್ ಅಭಿನಯದ ʻಘೋಸ್ಟ್‌ʼ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್‌!

Shivarajkumar

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್ (Shivarajkumar) ಅಭಿನಯದ ಘೋಸ್ಟ್‌ ಚಿತ್ರದ ಮೋಷನ್ ಪೋಸ್ಟರ್ ನೂತನ ವರ್ಷದ ಮೊದಲ ದಿನ ಬಿಡುಗಡೆಯಾಗಿದೆ‌. ಬಹು ನಿರೀಕ್ಷಿತ ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮೈಸೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೂರನೇ ಹಂತದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭವಾಗಲಿದೆ‌. ನಾಯಕ ಶಿವರಾಜಕುಮಾರ್ ಸೇರಿದಂತೆ ಅನೇಕ ಕಲಾವಿದರು ದ್ವಿತೀಯ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಹಾಗೂ ಪ್ರಸನ್ನ ಅವರ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್‌ ” ಚಿತ್ರಕ್ಕಿದೆ.

ಇದನ್ನೂ ಓದಿ | Anil Kapoor | ಅನಿಲ್‌ ಕಪೂರ್‌ ಜನುಮ ದಿನಕ್ಕೆ ಸ್ಪೆಷಲ್‌ ಫೋಟೊಗಳನ್ನು ಹಂಚಿಕೊಂಡ ಸೋನಂ ಕಪೂರ್‌!

ಶಿವರಾಜಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ | Shiva Rajkumar | ಶಿವರಾಜ್‌ಕುಮಾರ್‌ ನಟನೆಯ ಘೋಸ್ಟ್‌ ಚಿತ್ರಕ್ಕೆ ಮಾಲಿವುಡ್‌ ನಟ ಜಯರಾಮ್‌ ಎಂಟ್ರಿ: ವಿಡಿಯೊ ವೈರಲ್‌!

Exit mobile version