ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ (Shivarajkumar) ಅಭಿನಯದ ಘೋಸ್ಟ್ ಚಿತ್ರದ ಪೋಸ್ಟರ್ ಟ್ರೋಲ್‌ಗೆ ಒಳಗಾಗಿದೆ. ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದೀಗ ಸಿನಿಮಾ ಪೋಸ್ಟರ್ 1983ರಲ್ಲಿ ತೆರೆ ಕಂಡ ಸ್ಕಾರ್‌ಫೇಸ್ ಕಾಪಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಆಗದಂತೆ ಎಚ್ಚರವಹಿಸುತ್ತೇನೆ ಎಂದರ ನಿರ್ದೇಶಕ ಶ್ರೀನಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಬಹು ನಿರೀಕ್ಷಿತ ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಘೋಸ್ಟ್ ಪೋಸ್ಟರ್ ಮೂಲಕವೇ ಸಾಕಷ್ಟು ಸುದ್ದಿ ಮಾಡಿತ್ತು. ವೈರಲ್ ಆಗಿದ್ದ ಘೋಸ್ಟ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು ಈ ಪೋಸ್ಟರ್ 1983ರಲ್ಲಿ ತೆರೆಕಂಡಿದ್ದ ಚಿತ್ರ ಸ್ಕಾರ್‌ಫೇಸ್‌ನ ಕಾಪಿ ಎಂದು ಟ್ವೀಟ್ ಮಾಡಿದ್ದಾರೆ. ಶಿವಣ್ಣನ ಈ ವಿಶಿಷ್ಟ ಪೋಸ್ಟರ್‌ಗೆ ಬಳಸಲಾಗಿರುವ ಫೋಟೊ 1983ರಲ್ಲಿ ಬಿಡುಗಡೆಯಾಗಿದ್ದ ಸ್ಕಾರ್‌ಫೇಸ್ ಚಿತ್ರದಲ್ಲಿ ಅಲ್ ಫೆಸಿನೊ ಎಂಬ ನಟ ನಿರ್ವಹಿಸಿದ್ದ ಟೋನಿ ಮೊಂಟಾನಾ ಎಂಬ ಪಾತ್ರದ ಫೋಟೊವಾಗಿದೆ.
ಇದನ್ನೂ ಓದಿ: Shiva Rajkumar | ಶಿವರಾಜ್‌ಕುಮಾರ್ ನಟನೆಯ ಘೋಸ್ಟ್ ಚಿತ್ರಕ್ಕೆ ಮಾಲಿವುಡ್ ನಟ ಜಯರಾಮ್ ಎಂಟ್ರಿ: ವಿಡಿಯೊ ವೈರಲ್!
ಈ ಬಗ್ಗೆ ನಿರ್ದೇಶಕ ಶ್ರೀನಿ ಟ್ವೀಟ್ ಮೂಲಕ ʻʻಇಂತಹ ತಪ್ಪನ್ನು ತನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ಲುಕ್ ಟೆಸ್ಟ್‌ಗಾಗಿ ಯತೀಶ್ ಎಂಬ ಎಡಿಟರ್ ಚಿತ್ರ ಬಿಡಿಸಿ, ಹಲವು ತಂತ್ರಜ್ಙಾನ ಬಳಸಿ ತಯಾರಿಸಿದ ಪೋಸ್ಟರ್ ಆಗಿದೆ, ಆದರೆ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಿರುವ ಹಾಗೆ ಎಚ್ಚರವಹಿಸಲಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.ಮಾಸ್ತಿ ಹಾಗೂ ಪ್ರಸನ್ನ ಅವರ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್ ” ಚಿತ್ರಕ್ಕಿದೆ.
ಇದನ್ನೂ ಓದಿ: Shivarajkumar | ಶಿವರಾಜಕುಮಾರ್ ಅಭಿನಯದ ʻಘೋಸ್ಟ್ʼ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್!
ಶಿವರಾಜಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮುಖ ಪಾತ್ರಕ್ಕೆ ನಟಿ ಅರ್ಚನಾ ಜೋಯಿಸ್ ನಟಿಸಲಿದ್ದಾರೆ.