Site icon Vistara News

Shivarajkumar: ʻಜವಾನ್‌ʼ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌?

shivarajkumar In Jawan Movie

ಬೆಂಗಳೂರು: ಶಾರುಖ್‌ ಖಾನ್‌ ಅಭಿನಯದ ʻಪಠಾಣ್‌ʼ ಸಿನಿಮಾ ಗೆಲುವಿನ ಬೆನ್ನಲ್ಲೇ ಮುಂದಿನ ಚಿತ್ರ ʻಜವಾನ್‌ʼ ಸಿನಿಮಾ (Jawan Movie) ನಿರೀಕ್ಷೆಗಳು ಗಗನಕ್ಕೇರಿವೆ. ಇದೀಗ ಶಿವರಾಜ್‌ಕುಮಾರ್‌ ಮತ್ತು ಶಾರುಖ್‌ ಎಸ್‌ಆರ್‌ಕೆ ಜತೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. `ಜವಾನ್’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೊ ಶಿವಣ್ಣ (Shivarajkumar) ಎಂಟ್ರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವರಾಜ್‌ಕುಮಾರ್‌ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಇತ್ತಿಚೆಗಷ್ಟೇ ರಜನಿಕಾಂತ್‌ ಸಿನಿಮಾದ ʻಜೈಲರ್‌ʼ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. ಶಾರುಖ್ ಖಾನ್ ಚಿತ್ರದಲ್ಲಿ ಶಿವಣ್ಣ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಟ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Kabzaa Movie: ʻಕಬ್ಜʼ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌: ಹೊಸ ಪೋಸ್ಟರ್‌ ಔಟ್‌!

ಗೌರಿ ಖಾನ್ (Gowri Khan Productions) ನಿರ್ಮಾಣದ ಈ ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರನ್ನ ಈ ಚಿತ್ರದಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಜವಾನ್‌ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ವಿಜಯ್‌ ದಳಪತಿ ಜವಾನ್‌ ಸಿನಿಮಾ ಭಾಗವಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಅಟ್ಲೀ ಜವಾನ್‌ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ದಕ್ಷಿಣ ಭಾರತದ ಪ್ರಮುಖ ತಾರೆಯರನ್ನು ಈ ಸಿನಿಮಾಗೆ ಕರೆತರಲಿದ್ದಾರೆ ಎನ್ನಲಾಗುತ್ತಿದೆ. ಜವಾನ್‌ ಸಿನಿಮಾದಲ್ಲಿ ನಯನತಾರಾ ಅವರು ಶಾರುಖ್‌ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹೆಸರುಗಳನ್ನು ಹೊರತುಪಡಿಸಿ, ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version