Site icon Vistara News

Shivarajkumar | ಪತ್ನಿ ಗೀತಾ ತಲೆ ಬಾಚಿದ ಶಿವಣ್ಣ! ವಿಡಿಯೊ ವೈರಲ್ ಮಾಡಿದ ಮಧು ಬಂಗಾರಪ್ಪ

Shivarajkumar

ಶಿವಮೊಗ್ಗ : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shivarajkumar) ಅಭಿನಯದ ʻವೇದʼ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಗೀತಾ ಮತ್ತು ಶಿವಣ್ಣ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಶಿವಣ್ಣನ ಪತ್ನಿ ಗೀತಾ ಅವರ ತಲೆ ಬಾಚಿದ ವಿಡಿಯೊವನ್ನು ಮಧು ಬಂಗಾರಪ್ಪ ಅವರು ವೈರಲ್‌ ಮಾಡಿದ್ದಾರೆ. ಡಿವಿಎಸ್ ಸಿಂಗಾರ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ವಿಡಿಯೊ ವೈರಲ್ ಆಗಿದ್ದು, ತಲೆ ಬಾಚಿದ ವಿಡಿಯೊ ಮೊದಲ ಬಾರಿಗೆ ಶಿವಣ್ಣ ದಂಪತಿ ವೀಕ್ಷಿಸಿದ್ದಾರೆ.

ಈ ವೇಳೆ ಪುಟ್ಟ ಪೋರಿಯೊಂದಿಗೆ ಹೆಜ್ಜೆ ಹಾಕಿದ ಶಿವಣ್ಣ, ನೋ ಪ್ರಾಬ್ಲಂ ನನ್ನ ಹೈಟು ಸ್ವಲ್ಪ ಜಾಸ್ತಿನೇ ಎಂಬ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದಾರೆ. ಅದಿತಿ ಸಾಗರ್‌ ಗಿಲ್ಲಕ್ಕೋ ಗಿಲ್ಲಕ್ಕೋ ಹಾಡು ಹಾಡಿದ್ದಾರೆ. ವಿದ್ಯಾರ್ಥಿನಿಯರು, ಮಹಿಳೆಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ್ದಾರೆ.

ಇದನ್ನೂ ಓದಿ | Shivarajkumar | ‘ವೇದ’ ಬಿಡುಗಡೆಯಾದ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟ ಶಿವರಾಜ್‌ ಕುಮಾರ್‌!

ʻವೇದʼ ಸಿನಿಮಾ (Vedha Movie) ರಾಜ್ಯಾದ್ಯಂತ ಡಿಸೆಂಬರ್‌ 23ರಂದು ಬಿಡುಗಡೆಯಾಗಿತ್ತು. ವೇದನಾಗಿ ಶಿವರಾಜ್‌ ಕುಮಾರ್ ಅಬ್ಬರಿಸಿದರೆ, ಶಿವಣ್ಣನ ಮಗಳಾಗಿ ಅದಿತಿ ಸಾಗರ್ ಮೈನವಿರೇಳಿಸುವಂತೆ ನಟಿಸಿದ್ದಾರೆ. ಈ ಬಗ್ಗೆ ಸಿನಿರಸಿಕರು ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻವೇದʼ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೂ ಸಹ ಡಬ್ ಆಗಿ ಬಿಡುಗಡೆಗೊಂಡಿದೆ. ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿಯೂ ಸಹ ಸಿನಿ ರಸಿಕರಿಂದ ವೇದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರಕ್ಕೆ ಝೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದೆ.

ಇದನ್ನೂ ಓದಿ | Shivarajkumar | ಶಿವರಾಜಕುಮಾರ್ ಅಭಿನಯದ ʻಘೋಸ್ಟ್‌ʼ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್‌!

Exit mobile version