Site icon Vistara News

Shivarajkumar: ‘ವೇದ’ ಸಿನಿಮಾದ ಹೊಸ ರೆಕಾರ್ಡ್: ಹೇಗಿತ್ತು ಅಭಿಮಾನಿಗಳ ಅಭಿಮಾನದ ಸೆಲೆಬ್ರೇಶನ್‌?

Shivarajkumar 'Veda' movie's new record How was the fan's fan celebration

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shivarajkumar) ಅಭಿನಯದ 125ನೇ ಸಿನಿಮಾ ‘ವೇದ’ ಚಿತ್ರಮಂದಿರದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದು ಗೊತ್ತೇ ಇದೆ. ಚಿತ್ರಮಂದಿರದಲ್ಲಿ ಸೂಪರ್ ಸಕ್ಸೆಸ್‌ ಕಂಡ ಸಿನಿಮಾ ಫೆಬ್ರವರಿ 10ರಂದು ಜೀ5ನಲ್ಲಿ ಬಿಡುಗಡೆಗೊಂಡು ಇಲ್ಲಿಯೂ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಕೆಲವೇ ದಿನದಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡು ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇದೇ ಖುಷಿಯಲ್ಲಿ ಜೀ5 ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮ ಆಚರಿಸಿದೆ.

ಸಂತೋಷ್ ಚಿತ್ರಮಂದಿರದಲ್ಲಿ ‘ವೇದ’ ಚಿತ್ರದ ಶಿವಣ್ಣ ಕಟೌಟ್ ನಿಲ್ಲಿಸಿ ಜೀ5 ಸಂಭ್ರಮ ಆಚರಣೆ ಮಾಡಿದೆ. ಈ ಸಂಭ್ರಮಾಚರಣೆಯಲ್ಲಿ ದೊಡ್ಮನೆ ಅಭಿಮಾನಿಗಳು ಭಾಗಿಯಾಗಿ ಸಂತಸ ಪಟ್ಟಿದ್ದಾರೆ. ಒಟಿಟಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡಿದ್ದು ಜೀ5ನಲ್ಲಿ ದಾಖಲೆ ಬರೆದಿದೆ. ಈ ಮೂಲಕ ಚಿತ್ರಮಂದಿರದ ಜತೆಗೆ ಜೀ5 ಒಟಿಟಿಯಲ್ಲೂ ಸಿನಿಮಾ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ | ಚಲನಚಿತ್ರಗಳು ಹಾಗೂ ಧಾರಾವಾಹಿಗಳು ಅವಲೋಕನ ಮಾಡಿಕೊಳ್ಳಬೇಕು: ಹಿರಿಯ ನಟ ದತ್ತಣ್ಣ ಅಭಿಪ್ರಾಯ

‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಬಿಡುಗಡೆಗೊಂಡಿತ್ತು. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಾಗಿರುವ ಈ ಚಿತ್ರ ಶಿವಣ್ಣ ಅಭಿನಯದ 125ನೇ ಸಿನಿಮಾ ಎನ್ನುವುದು ಚಿತ್ರದ ವಿಶೇಷ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

Exit mobile version