ಬಹುಭಾಷಾ ನಟಿ, ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ʻಶಿವ ಶಂಕರ್ʼ ಸಿನಿಮಾದಲ್ಲಿ ನಟಿಸಿರುವ ʻಶೋಭನಾʼ (Shobana Actress) ಮನೆಯಲ್ಲಿ ನಗದು ಕಳುವಾಗಿದೆ. ಮನೆ ಕೆಲಸದಾಕೆಯೇ ಹಣ ಕದ್ದು ಸಿಕ್ಕಿಬಿದ್ದಿದ್ದಾಳೆ. ಆದರೆ ಈ ವಿಚಾರ ತಿಳಿದು ನಟಿ ಶೋಭನಾ ಆಕೆಯನ್ನು ಕ್ಷಮಿಸಿ ಬಿಟ್ಟಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ನಟಿಸಿ ನಟಿ ಸೈ ಎನೆಸಿಕೊಂಡಿದ್ದರು ನಟಿ. ಶೋಭನಾ ಕಳ್ಳತನದ ದೂರು ನೀಡಿದ ನಂತರ ಪೊಲೀಸರು ಮನೆಕೆಲಸದಾಕೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಆದರೆ, ವಿಚಾರಣೆಯ ಸಮಯದಲ್ಲಿ ಆಕೆ ಅಪರಾಧವನ್ನು ಒಪ್ಪಿಕೊಂಡ ನಂತರ, ಭರತನಾಟ್ಯ ನರ್ತಕಿಯಾಗಿರುವ ಶೋಭನಾ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ.
ನಟಿ ಕ್ಷಮಿಸಿದ್ಯಾಕೆ?
ಜುಲೈ 27 ರಂದು ನಟಿ ಶೋಭನಾ ಅವರು ತಮ್ಮ ನಿವಾಸದಲ್ಲಿ ಕಳ್ಳತನವಾಗಿತ್ತು. ನಟಿ ಚೆನ್ನೈನ ತೆನಾಂಪೇಟೆ ಪೊಲೀಸರಿಗೆ ದೂರು ನೀಡಿದ್ದರು. ತೆನಾಂಪೇಟೆಯ ಶ್ರೀಮನ್ ಶ್ರೀನಿವಾಸ ರಸ್ತೆಯಲ್ಲಿರುವ ನಿವಾಸದಲ್ಲಿ ನಟಿ ವಾಸಿಸುತ್ತಿದ್ದಾರೆ. ಕಡಲೂರು ಜಿಲ್ಲೆಯ ಕೋವಿಲ್‌ನ ವಿಜಯಾ ಎಂಬ ಮಹಿಳೆ ವರ್ಷದ ಹಿಂದೆ ಮನೆ ಕೆಲಸಕ್ಕೆ ಸೇರಿದ್ದಳು. ವಿಜಯಾ ಮನೆಗೆ ಬಂದಾಗಿನಿಂದ ಆಗಾಗ ಮನೆಯಲ್ಲಿ ಹಣ ಮಾಯವಾಗುತ್ತಿತ್ತು. ಇದರಿಂದ ಅನುಮಾನಗೊಂಡ ಶೋಭನಾ ಅವರು ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋಭನಾ ದೂರಿನನ್ವಯ ವಿಜಯಾ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ವಿಜಯಾ ತಾನು ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕಳೆದ ಮಾರ್ಚ್‌ನಿಂದ ಜೂನ್‌ವರೆಗೆ ರೂ. 41 ಸಾವಿರ ಕದ್ದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. “ಬಡತನದಿಂದ ಈ ತಪ್ಪು ಮಾಡಿದೆ” ಎಂದು ವಿಜಯಾ ಶೋಭನ ಅವರ ಬಳಿ ವಿಜಯಾ ಕ್ಷಮಿಸುವಂತೆ ಕೇಳಿಕೊಂಡಿದ್ದಾಳೆ. ಆಕೆಯ ದೀನ ಸ್ಥಿತಿ ಕಂಡು ಶೋಭನಾ ದೂರು ವಾಪಸ್ಸು ಪಡೆದಿದ್ದಾರೆ. ಮತ್ತೆ ತಮ್ಮ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಮನೆ ಕೆಲಸಗಾರ್ತಿ ಕದ್ದ ಹಣವನ್ನು ಡ್ರೈವರ್ ಸಹಾಯದಿಂದ ತನ್ನ ಮಗಳ ಖಾತೆಗೆ ಕಳುಹಿಸುತ್ತಿದ್ದಳು ಎಂದು ಮೂಲಗಳು ಪೋರ್ಟಲ್‌ಗೆ ತಿಳಿಸಿವೆ.
ಇದನ್ನೂ ಓದಿ: Achar And Co Movie: ʻಆಚಾರ್ ಆ್ಯಂಡ್ ಕೋʼ ಸಕ್ಸೆಸ್ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದೇನು?
ಈ ವಿಚಾರ ಅಭಿಮಾನಿಗಳು ನಟಿಯ ಒಳ್ಳೆ ಮನಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಖ್ಯಾತಿ ಹೊಂದಿದ್ದಾರೆ.
ರುದ್ರವೀಣ (1988), ನಾಡೋಡಿಕ್ಕಟ್ಟು (1987), ವೆಲ್ಲನಕಳುಡೆ ನಾಡು (1988), ಇದು ನಮ್ಮ ಆಳು (1988), ಶಿವ (1989), ಇನ್ನಲೆ (1990), ಕಲಿಕಾಲಂ (1990), ದಳಪತಿ (1991), ಪಪ್ಪಾಯುಡೆ ಸ್ವಂತಂ ಅಪ್ಪೂಸ್ (1992), ಮತ್ತು ಮಣಿಚಿತ್ರತಾಝು (1993) ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಭರತನಾಟ್ಯ ಡ್ಯಾನ್ಸರ್ ಆಗಿ ಸಾಕಷ್ಟು ವೇದಿಕೆಗಳಲ್ಲಿ ಶೋಭನಾ ಹೆಚ್ಚೆ ಹಾಕಿದ್ದಾರೆ. ‘ಕಳಿಪಿಣ್ಯ’ ಎಂಬ ಡ್ಯಾನ್ಸ್ ಸ್ಕೂಲ್ ಕೂಡ ನಡೆಸಿದ್ದರು. ಬಳಿಕ ಚೆನ್ನೈನಲ್ಲಿ ಪಲಾರ್ಪಣ ಎನ್ನುವ ಭರತನಾಟ್ಯ ಶಾಲೆ ಕೂಡ ಆರಂಭಿಸಿದರು. ವಯಸ್ಸು 50 ದಾಟಿದರೂ ಶೋಭನಾ ಮದುವೆ ಆಗಿಲ್ಲ. ಆದರೆ ಹೆಣ್ಣು ಮಗುವನ್ನು ದತ್ತು ಪಡೆದು ಸಿಂಗಲ್ ಪೇರೆಂಟ್ ಆಗಿ ಸಾಕುತ್ತಿದ್ದಾರೆ. ಮಗಳಿಗೆ ಅನಂತ ನಾರಾಯಣಿ ಎಂದು ಹೆಸರಿಟ್ಟಿದ್ದಾರೆ. 2006 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.