Site icon Vistara News

Yashoda Film | ಸಮಂತಾ ನಟನೆಯ ಯಶೋದ ಸಿನಿಮಾದ ಚಿತ್ರೀಕರಣ ಮುಕ್ತಾಯ

Yashoda Film

ಬೆಂಗಳೂರು : ಸಮಂತಾ ‌ನಟನೆಯ ಯಶೋದ ಸಿನಿಮಾ(Yashoda Film) ಸದ್ದಿಲ್ಲದೆ ಶೂಟಿಂಗ್‌ ಮುಗಿಸಿದೆ. ಹಾಡಿನ ಚಿತ್ರೀಕರಣವೊಂದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ನಿರ್ದೇಶನ ಮಾಡಿದ್ದಾರೆ. ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ.

ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿದ್ದು, ಸಿಜೆ ಕೆಲಸಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ ಡಬ್ಬಿಂಗ್‌ ಕೆಲಸ ಶುರುವಾಗಲಿದೆ. ಇದರ ಜತೆಗೆ ಬೇರೆ ಭಾಷೆಯ ಡಬ್ಬಿಂಗ್‌ ಸಹ ಮುಗಿಸಿಕೊಳ್ಳುವ ಪ್ಲಾನ್‌ನಲ್ಲಿದೆ ಚಿತ್ರತಂಡ. ಇದೆಲ್ಲದರ ಜತೆಗೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವ ಇದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್‌ ಮತ್ತು ಹಾಡನ್ನು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ | Samantha Ruth Prabhu: ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಸಮಂತಾ ಹೇಳಿದ್ದು ಯಾಕೆ?

ಯಶೋದಾ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ, ಪ್ರಿಯಾಂಕಾ ಶರ್ಮಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kushi Movie : ಶೂಟಿಂಗ್‌ ವೇಳೆ ಅವಘಡದಲ್ಲಿ ವಿಜಯ್‌ ದೇವರಕೊಂಡ -ಸಮಂತಾಗೆ ಗಾಯ

Exit mobile version