Site icon Vistara News

Short Films | ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಶಾರ್ಟ್‌ ಫಿಲಂಗಳಿವು…

ದು ಯೂಟ್ಯೂಬ್‌ ಯುಗ. ಪ್ರತಿಯೊಬ್ಬರಿಗೂ ಸಿನಿಮಾ ರಂಗಕ್ಕೆ ಸೇರುವ ಆಸೆ, ತೆರೆ ಮೇಲೆ ಕಾಣಿಸಿಕೊಳ್ಳುವ ಬಯಕೆ. ಅದೇ ನಿಟ್ಟಿನಲ್ಲಿ ಶಾರ್ಟ್‌ ಫಿಲಂಗಳ (Short Films) ಸಂಖ್ಯೆಯಂತೂ ವಿಪರೀತವಾಗಿ ಹೆಚ್ಚಿವೆ. ನಿರ್ದೇಶಕರಾಗುವ ಕನಸು ಕಾಣುವವರಲ್ಲೆರೂ ಶಾರ್ಟ್‌ ಫಿಲಂಗಳ ಮೂಲಕ ತಮ್ಮ ಕನಸನ್ನು ಸಣ್ಣ ಪ್ರಮಾಣದಲ್ಲಿ ನನಸು ಮಾಡಿಕೊಂಡರೆ ತೆರೆ ಮೇಲೆ ಕಾಣಿಸಿಕೊಳ್ಳುವ ಬಯಕೆಯಿರುವವರು ಈ ಶಾರ್ಟ್‌ ಫಿಲಂಗಳಲ್ಲಿ ಮಿಂಚಿ ಸೈ ಎನಿಸಿಕೊಳ್ಳುತ್ತಾರೆ. ಶಾರ್ಟ್‌ಫಿಲಂಗಳಿಗೆ ಇಂಗ್ಲಿಷ್‌ನಲ್ಲಿ 100ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿವೆ. ನೀವು ಒಮ್ಮೆಯಾದರೂ ನೋಡಲೇಬೇಕಾದ ಹಲವು ಅದ್ಭುತ ಶಾರ್ಟ್‌ ಫಿಲಂಗಳಿವೆ. ಅಂತಹ ಕೆಲವು ಅದ್ಭುತ ಚಿತ್ರಗಳ ಮಾಹಿತಿ ಇಲ್ಲಿದೆ.

ಎ ಟ್ರಿಪ್‌ ಟು ದಿ ಮೂನ್‌ (A Trip To The Moon)
ಈ ಸಿನಿಮಾ 1902ರಲ್ಲಿ ಬಿಡುಗಡೆಯಾದದ್ದು. ಜಾರ್ಜಸ್‌ ಮೆಲೀಸ್‌ ಅವರು ಬರೆದು, ನಿರ್ದೇಶನ ಮಾಡಿದ್ದಾರೆ. ರಾಕೆಟ್‌ ಚಂದ್ರನ ಮೇಲಿಳಿಯುವ ಕಥೆಯಿರುವ ಇದು ಒಂದು ರೀತಿಯಲ್ಲಿ ವೈಜ್ಞಾನಿಕವಾಗಿಯೂ ವೀಕ್ಷಕರನ್ನು ಸೆಳೆಯುವಂತಹ ಸಿನಿಮಾ. ಬಿಡುಗಡೆಯಾಗಿ 100ಕ್ಕೂ ಅಧಿಕ ವರ್ಷಗಳಾಗಿದ್ದರೂ ಇಂದಿಗೂ ಇದರ ರಂಗು ಮಾಸಿಲ್ಲ. ಈ ಸಿನಿಮಾ 14 ನಿಮಿಷಗಳಷ್ಟಿದೆ.

ದಿ ಇಮ್ಮಿಗ್ರಂಟ್‌

ದಿ ಇಮ್ಮಿಗ್ರಂಟ್‌ (The Immigrant)
ಚಾರ್ಲಿ ಚಾಂಪಿಯನ್‌ ಅವರ ಸೀರಿಸ್‌ನಲ್ಲಿ ಇದೂ ಒಂದಾಗಿದೆ. ಸ್ವತಃ ಚಾರ್ಲಿ ಚಾಪ್ಲಿನ್ ಅವರು ಅಮೆರಿಕಕ್ಕೆ ವಲಸೆ ಬಂದಿದ್ದ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಆಕ್ಷನ್‌ ಕಟ್‌ ಹೇಳಿರುವ ಚಾರ್ಲಿ ಚಾಪ್ಲಿನ್ ಅವರೇ ಪ್ರಮುಖ ಪಾತ್ರದಲ್ಲಿದ್ದಾರೆ. 1917ರಲ್ಲಿ ಬಂದ ಈ ಸಿನಿಮಾ 30 ನಿಮಿಷಗಳಷ್ಟಿದೆ.

ಆನ್‌ ಅಂಡಲೂಸಿಯನ್‌ ಡಾಗ್‌ (An Andalusian Dog)
ಈ ಸಿನಿಮಾವನ್ನು ಲೂಯಿಸ್ ಬುನ್ಯುಯೆಲ್ ಅವರು ನಿರ್ದೇಶಿಸಿದ್ದಾರೆ. 1929ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಮೊದಲಿಗೆ ಕೆಲವೇ ನಗರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. 20 ನಿಮಿಷಗಳಷ್ಟು ಸಮಯವಿರುವ ಈ ಚಿತ್ರ ಹೆಚ್ಚು ಜನಪ್ರಿಯತೆ ಪಡೆದು ಹಲವಾರು ನಗರಗಳಲ್ಲಿ 8 ತಿಂಗಳ ಕಾಲ ಪ್ರದರ್ಶನಗೊಂಡಿತು.

ದಿ ಮ್ಯೂಸಿಕ್‌ ಬಾಕ್ಸ್‌ (The Music Box)
1932ರಲ್ಲಿ ಬಿಡುಗಡೆಯಾದ ಈ ಚಿತ್ರ ಹಾಸ್ಯಮಯ ಚಿತ್ರವಾಗಿದೆ. ಇಬ್ಬರು ಯುವಕರು ಪಿಯಾನೋ ಅನ್ನು ಮಹಡಿ ಮೇಲೆ ತೆಗೆದುಕೊಂಡು ಹೋಗಲು ಮಾಡುವ ಹರಸಾಹಸ ಇದರಲ್ಲಿದೆ. ಜೇಮ್ಸ್‌ ಪರೋಟ್‌ ಅವರು ನಿರ್ದೇಶಿಸಿರುವ ಈ ಚಿತ್ರ 29 ನಿಮಿಷಗಳಷ್ಟಿದೆ.

ಜೀರೋ ಡಿ ಕಂಡ್ವೈಟ್

ಜೀರೋ ಡಿ ಕಂಡ್ವೈಟ್ (Zero De Conduit)
ಈ ಸಿನಿಮಾ ಶಾಲೆ, ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ. ನಿರ್ದೇಶಕ ಜೀನ್‌ ವಿಗೋ ಅವರು ನಿರ್ದೇಶಿಸಿರುವ ನಾಲ್ಕೇ ನಾಲ್ಕು ಚಿತ್ರಗಳಲ್ಲಿ ಇದು ಮೂರನೆಯದು. ಈ ಶಾರ್ಟ್ ಫಿಲಂ 41 ನಿಮಿಷಗಳಿದೆ. 1934ರಲ್ಲಿ ಬಿಡುಗಡೆಯಾಗಿತ್ತು.

ಪಾರ್ಟಿ ಡಿ ಕಂಪೇನ್‌ (Partie De Campagne)
ಇದು ಒಂದೇ ದಿನದಲ್ಲಿ ನಡೆಯುವ ಪ್ರೇಮಕಥೆ. ಒಂದು ರೀತಿಯಲ್ಲಿ ಅದ್ಭುತವಾದ ಕಾವ್ಯಮಯ ಚಿತ್ರ ಎನ್ನಬಹುದು. ಜೀನ್‌ ರಿನಾಯ್ರ್‌ ಅವರು ನಿರ್ದೇಶಿಸಿರುವ ಈ ಚಿತ್ರ 1946ರಲ್ಲಿ ತೆರೆ ಕಂಡಿತು. 40 ನಿಮಿಷದ ಶಾರ್ಟ್ ಫಿಲಂ ಇದು.

ಲ ಜಟೀ (La Jetee)
ಇದು ಮೂರನೇ ವಿಶ್ವಯುದ್ಧದ ಸುತ್ತ ಹೆಣೆದ ಕಥೆಯಾಗಿದೆ. ಪ್ರಪಂಚದ ಹಣೆಬರಹದಿಂದ ಮುಕ್ತಿ ಕಂಡುಕೊಳ್ಳಲು ವ್ಯಕ್ತಿಯೊಬ್ಬ ಮಾಡುವ ಕೆಲಸವನ್ನು ಇಲ್ಲಿ ತೋರಿಸಲಾಗಿದೆ. ಕ್ರಿಸ್‌ ಮಾರ್ಕರ್‌ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 1962ರಲ್ಲಿ ಬಿಡುಗಡೆಯಾದ ಈ ಸಿನಿಮಾ 28 ನಿಮಿಷಗಳಷ್ಟಿದೆ.

ಫಿಲಂ

ಫಿಲಂ (Film)
ಈ ಚಿತ್ರದ ಒಂದು ರೀತಿಯಲ್ಲಿ ಏಕಪಾತ್ರಭಿನಯ ಎಂದರೆ ತಪ್ಪಾಗಲಾರದು. ನಟ ಬಸ್ಟರ್‌ ಕೀಟನ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾವಿದು.

ಎಲೆಕ್ಟ್ರಾನಿಕ್‌ ಲಿಬ್ರಿನಿತ್ (Electronic Labyrinth: THX 1138 4EB)
ಇದು ಸಾಮಾಜಿಕ ಮತ್ತು ವಿಜ್ಞಾನದ ಫಿಕ್ಷನ್‌ ಇರುವಂತಹ ಸಿನಿಮಾ. ನಿರ್ದೇಶಕ ಜಾರ್ಜ್‌ ಲುಕಾಸ್‌ ಅವರು ಕ್ಯಾಲಿಫೋರ್ನಿಯಾದ ಫಿಲಂ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾಗ ಈ ಸಿನಿಮಾ ನಿರ್ದೇಶಿಸಿದರು. 1967ರಲ್ಲಿ ಬಿಡುಗಡೆಯಾದ ಈ ಸಿನಿಮಾ 15 ನಿಮಿಷಗಳಷ್ಟಿದೆ.

ದಿ ರಾಂಗ್‌ ಟ್ರೋಶರ್ಸ್‌ (The Wrong Trousers)
ವ್ಯಕ್ತಿಯೊಬ್ಬ ತನ್ನ ಮನೆಯನ್ನು ಇನ್ನೊಬ್ಬನಿಗೆ ಬಾಡಿಗೆಗೆ ಕೊಡುತ್ತಾನೆ. ನಂತರ ಆತ ಕ್ರಿಮಿನಲ್‌ ಎನ್ನುವ ವಿಚಾರ ತಿಳಿದುಬರುತ್ತದೆ. ಈ ವಿಚಾರವನ್ನಿಟ್ಟುಕೊಂಡು ಈ ಕಥೆ ಮಾಡಲಾಗಿದೆ. 1993ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಪಾರ್ಕ್‌ ಅವರು ನಿರ್ದೇಶಿಸಿದ್ದಾರೆ. ಈ ಶಾರ್ಟ್ ಫಿಲಂ 29 ನಿಮಿಷಗಳಷ್ಟಿದೆ.

Exit mobile version