Site icon Vistara News

Shraddha Kapoor: ಕೂದಲಿಗೆ ಕತ್ತರಿ ಹಾಕಿದ ಶ್ರದ್ಧಾ ಕಪೂರ್‌; ಗಗನಯಾತ್ರಿ ಪಾತ್ರದಲ್ಲಿ ಸ್ಟಾರ್‌ ನಟಿ?

Shraddha Kapoor Starring As Kalpana Chawla

ಬೆಂಗಳೂರು: ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ (Shraddha Kapoor) ಇತ್ತೀಚೆಗೆಷ್ಟೇ ಶಾರ್ಟ್‌ ಹೇರ್‌ನಲ್ಲಿರುವ ಫೋಟೊವನ್ನು ಪೋಸ್ಟ್‌ ಮಾಡಿದ್ದರು. ಇದ್ದಕ್ಕಿದ್ದಂತೆ ನಟಿ ಕೂದಲಿಗೆ ಕತ್ತರಿ ಹಾಕಿದ್ದೇಕೆ ಎಂಬ ಅನುಮಾನ ಅವರ ಫ್ಯಾನ್ಸ್‌ನಲ್ಲಿತ್ತು. ಹೊಸ ಸಿನಿಮಾದ ಪ್ರಾಜೆಕ್ಟ್‌ಗಾಗಿ ಹೊಸ ಲುಕ್‌ಅಲ್ಲಿ ಕಂಡಿದ್ದಾರೆ ಎಂಬ ಊಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಆಗುತ್ತಿದ್ದು, ನಟಿ ಕಲ್ಪನಾ ಚಾವ್ಲಾ ಬಯೋಪಿಕ್‌ಗೆ ಸಜ್ಜಾಗುತ್ತಿರುವಂತೆ ತೋರುತ್ತಿದೆ ಎನ್ನಲಾಗುತ್ತಿದೆ.

ಆರ್‌ಎಸ್‌ವಿಪಿ ನಿರ್ಮಾಣ ಮತ್ತು ಆನಂದ್ ಎಲ್ ರೈ ಅವರು ನಿರ್ದೇಶಿಸಲಿರುವ ಸಿನಿಮಾದ ಹೊಸ ಪೋಸ್ಟರ್‌ ಲೀಕ್‌ ಆಗಿದೆ. ಈ ಪೋಸ್ಟರ್‌ನಲ್ಲಿ ಎ ಆರ್ ರೆಹಮಾನ್ ಹೆಸರೂ ಎದ್ದು ಕಾಣುತ್ತಿದೆ. ಚಿತ್ರದ ಶೀರ್ಷಿಕೆಯಲ್ಲಿ ʻʻದಿ ಅನ್‌ಟೋಲ್ಡ್ ಸ್ಟೋರಿ ಆಫ್ ಕಲ್ಪನಾ ಚಾವ್ಲಾʼʼ ಎಂದು ಬರೆಯಲಾಗಿದೆ. ಚಿತ್ರದಲ್ಲಿ ಆಮೀರ್ ಖಾನ್, ಅಭಿಷೇಕ್ ಬಚ್ಚನ್ ಮತ್ತು ಫಾಹಿಮ್ ಖಾನ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆದುಕೊಂಡಿದೆ.

ಆದರೆ, ಈ ಪೋಸ್ಟರ್‌ನ ಸತ್ಯಾಸತ್ಯತೆ ಏನು ಎಂಬುದು ತಿಳಿದು ಬಂದಿಲ್ಲ.  ಹರಿದಾಡುತ್ತಿರುವ ಪೋಸ್ಟರ್ ಅಧಿಕೃತನ ಅಥವಾ ಎಡಿಟೆಡ್ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ ಕಲ್ಪನಾ ಚಾವ್ಲಾ ಆಗಿ ಶ್ರದ್ಧಾ ಕಾಣಿಸಿಕೊಳ್ಳುತ್ತಿರುವುದು ಬಹುತೇಕ ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ.  ಶ್ರದ್ಧಾ ಕಪೂರ್ ಪ್ರಸ್ತುತ ಸ್ಟ್ರೀ 2 ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Lionel Messi | ಚಾಂಪಿಯನ್​ ಲಿಯೋನೆಲ್​ ಮೆಸ್ಸಿ ಜತೆ ನಟಿ ಶ್ರದ್ಧಾ ಕಪೂರ್​ ಮಾಜಿ ಬಾಯ್​ಫ್ರೆಂಡ್​; ಫೋಟೊ ವೈರಲ್​

ನಟಿ ಇತ್ತೀಚೆಗೆ ತೂ ಜೂಟಿ ಮೇ ಮಕ್ಕರ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ನಟಿ ರಣಬೀರ್ ಕಪೂರ್ ಅವರ ಜತೆ ನಟಿಸಿದ್ದಾರೆ. ಈ ಮೂವಿ ಸಕ್ಸಸ್ ಆಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ತೂ ಜೂಟಿ ಮೇ ಮಕ್ಕರ್ ಸಿನಿಮಾದಲ್ಲಿ ಸ್ಟ್ಯಾಂಡಪ್ ಕಾಮೆಡಿಯನ್ ಅನುಭವ್ ಸಿಂಗ್ ಬಾಸಿ, ಬೋನಿ ಕಪೂರ್, ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Exit mobile version