ಬೆಂಗಳೂರು: ಕನ್ನಡದ ‘ಯೂ ಟರ್ನ್’, ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ (Shraddha Srinath) ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ʻಮಿಲಿಂದ್ ಧೈಮಡೆʼ ನಿರ್ದೇಶನದ ʻಲೆಟರ್ಸ್ ಟು ಮಿಸ್ಟರ್ ಖನ್ನಾ’ ಚಿತ್ರದಲ್ಲಿ ರಣ್ಬೀರ್ ಕಪೂರ್ ತಾಯಿ ನೀತು ಕಪೂರ್, ಸನ್ನಿ ಕೌಶಲ್ ಜತೆ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ಇದ್ದ ಚಿತ್ರವನ್ನು ನೀತು ಕಪೂರ್ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಸ್ರಾಣಿ ಕೂಡ ಕಾಣಿಸಿಕೊಂಡಿದ್ದು, 47 ವರ್ಷಗಳ ನಂತರ ಸಿನಿರಂಗಕ್ಕೆ ಮತ್ತೆ ಮರಳಿದ್ದಾರೆ. ʻರಾಜ್ ಮಹಲ್ʼ, ʻಅಬ್ ಕ್ಯಾ ಹೋಗಾʼ, ʻಢೋಂಗಿʼ ಮತ್ತು ʻಪ್ರಿಯತಮಾʼ ಮುಂತಾದ 70 ಮತ್ತು 80ರ ದಶಕದ ಆರಂಭದಲ್ಲಿ ಈ ಜೋಡಿಯು ಒಂದೆರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಇದನ್ನೂ ಓದಿ | Kantara Movie | ಕಾಂತಾರ ಕಳಪೆ ಎಂದ ಬಾಲಿವುಡ್ ನಿರ್ದೇಶಕ ಅಭಿರೂಪ್ ಬಸು, ಜಾಡಿಸಿದ ನೆಟ್ಟಿಗರು
ಲಯನ್ಸ್ಗೇಟ್ ಇಂಡಿಯಾ ಸ್ಟುಡಿಯೋಸ್ ಮೊದಲ ಚಲನಚಿತ್ರ ಇದಾಗಿದೆ. ತಾಯಿ ಮಗನ ಬಂಧನ ಸಾರುವ ಕಥಾ ಹಂದರ ಈ ಸಿನಿಮಾ ಹೊಂದಿದ್ದು, ನೀತು ಕಪೂರ್ ಜತೆ ಶ್ರಧ್ಧಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ | Kantara Movie | ಥಿಯೇಟರ್ನಲ್ಲಿ ಕಾಂತಾರ ಸಿನಿಮಾ ನೋಡುವಾಗಲೇ ʼಮೈ ಮೇಲೆ ಬಂದ ದೇವರುʼ!