Site icon Vistara News

Shree Rapaka: ಮದುವೆಗೂ ಮುಂಚೆ ಸೆಕ್ಸ್ ಮಾಡಿ, ಸಲಿಂಗಕಾಮಿಯೋ, ಇಲ್ಲವೋ ಗೊತ್ತಾಗತ್ತೆ ಎಂದ ʻನಗ್ನಂʼ ಸುಂದರಿ!

Shree rapaka In saree Bold

ಬೆಂಗಳೂರು: ವಿವಾದಿತ ನಿರ್ದೇಶಕರೆಂದೇ ಖ್ಯಾತಿಯಾಗಿರುವ ರಾಮ್​ ಗೋಪಾಲ್​​ ವರ್ಮಾ (shree rapaka RGV) ಅವರ `ನಗ್ನಂ’ ಸಿನಿಮಾದಲ್ಲಿ (shree rapaka nagnam Film) ನಟಿಸಿರುವ ನಟಿ ಶ್ರೀ ರಾಪಕಾ (Shree Rapaka) ಇದೀಗ ತಮ್ಮ ಹೇಳಿಕೆಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಾಗಿದ್ದಾರೆ. ಸಂದರ್ಶನದಲ್ಲಿ ರಾಪಕಾ ಅವರು ಮದುವೆ (shree rapaka hot) ಹಾಗೂ ಸೆಕ್ಸ್​ ಬಗ್ಗೆ ಮುಕ್ತವಾಗಿ (shree rapaka bold statement) ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆಕ್ಸ್​ ಮಾಡುವುದರಲ್ಲಿ (shree rapaka sensational statemen) ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.

ಶ್ರೀ ರಾಪಕಾ ಯಾರು?

ಶ್ರೀ ರಾಪಕಾ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಹಲವು ಸ್ಟಾರ್ ನಟ ಹಾಗೂ ನಟಿಯರಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸಹ ಭಾಗವಹಿಸಿದ್ದಾರೆ. ಇದನ್ನು ನೋಡಿದ ರಾಮ್ ಗೋಪಾಲ್ ವರ್ಮಾ, ನಗ್ನಂ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ಇದೀಗ ಸಂದರ್ಶನವೊಂದರಲ್ಲಿ ಮದುವೆ ಹಾಗೂ ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಟಿ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ಇದೇನೂ ಮೊದಲಲ್ಲ. ಸಿನಿಮಾದಲ್ಲಿ ಹೆಚ್ಚು ಆ್ಯಕ್ಟಿವ್‌ ಇಲ್ಲವಾದರೂ ನಟಿ ಈ ರೀತಿಯ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

ಮದುವೆಗೂ ಮುಂಚೆ ಸೆಕ್ಸ್​ ಮಾಡೋದು ತಪ್ಪಲ್ಲ!

ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆಕ್ಸ್​ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ರಾಪಕಾ, ಮದುವೆಯಾದ ಬಳಿಕ ನಿಮ್ಮ ಸಂಗಾತಿ ಗಂಡಸಲ್ಲ ಎಂದು ಗೊತ್ತಾದರೆ ನಿಮ್ಮ ಇಡೀ ಜೀವನವನ್ನು ಕಣ್ಣೀರಿನಲ್ಲಿ ಕಳೆಯಬೇಕಾಗುತ್ತದೆ ಎಂದರು. ಇಷ್ಟೇ ಅಲ್ಲದೆ, ತನ್ನ ಸ್ನೇಹಿತೆಯ ಜೀವನದಲ್ಲಿ ನಡೆದ ಘಟನೆಯನ್ನು ವಿವರಿಸಿ, ಉದಾಹರಣೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: Vanitha Vijaykumar: ಪ್ರಭುದೇವರನ್ನ ಹುಚ್ಚಿಯಂತೆ ಪ್ರೀತಿಸುತ್ತಿದ್ದೆ, ನಾನ್‌ವೆಜ್‌ ಕೂಡ ಬಿಟ್ಟೆ ಎಂದ ನಟಿ ವನಿತಾ ವಿಜಯಕುಮಾರ್!

ಸಲಿಂಗಕಾಮಿಯೋ, ಇಲ್ಲವೋ ಎಂಬುದು ತಿಳಿಯುತ್ತೆ!

ʻʻನನ್ನ ಸ್ನೇಹಿತೆ ವೈದ್ಯರೊಬ್ಬರನ್ನು ಮದುವೆ ಆಗಿದ್ದಳು. ಆಕೆಯ ಮೊದಲ ರಾತ್ರಿಯ ಸಮಯದಲ್ಲಿ ತನ್ನ ಗಂಡ ಓರ್ವ ಸಲಿಂಗಕಾಮಿ ಎಂಬುದು ಆಕೆಗೆ ತಿಳಿದು ಬಹಳ ದುಃಖವಾಯಿತು. ಹೀಗಾಗಿ ಮದುವೆಗೂ ಮುಂಚೆ ಸೆಕ್ಸ್​ ಮಾಡಿದರೆ ತನ್ನ ಸಂಗಾತಿ ಸಲಿಂಗಕಾಮಿಯೋ, ಇಲ್ಲವೋ ಎಂಬುದು ತಿಳಿಯುತ್ತದೆ. ನನ್ನ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸೆಕ್ಸ್​ ತುಂಬಾ ಮುಖ್ಯ. ಅದನ್ನು ಕೊಡಲಾಗದವನನ್ನು ಮದುವೆಯಾಗಿ ಪಶ್ಚಾತ್ತಾಪ ಪಡುವುದು ಸರಿಯಲ್ಲʼʼ ಎಂದು ರಾಪಕಾ ಹೇಳಿದ್ದಾರೆ. ಇದೀಗ ನಟಿಯ ಈ ಬೋಲ್ಡ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Exit mobile version