ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಿರ್ದೇಶಿಸಿ, ನಟಿಸುತ್ತಿರುವ ʻಎಮರ್ಜೆನ್ಸಿʼ(emergency) ಸಿನಿಮಾದಲ್ಲಿ ಕಂಗನಾ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇದೀಗ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಾಡೆ ನಿರ್ವಹಿಸಲಿದ್ದಾರೆ. ಇದರ ಮೊದಲ ಲುಕ್ ಅನ್ನು ಕಂಗನಾ ಪೋಸ್ಟ್ ಮಾಡಿದ್ದಾರೆ.
ಚಿತ್ರದಲ್ಲಿ ಶ್ರೇಯಸ್ ಅವರ ಲುಕ್ ಅನ್ನು ರಿವೀಲ್ ಮಾಡುವ ಮೂಲಕ ಪೋಸ್ಟ್ ಮಾಡಿದ್ದಾರೆ. ʻಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯಾಗಿ ನಿಮ್ಮ ಮುಂದೆ ತೋರಿಸುತ್ತಿದ್ದೇವೆ. ನಿಜವಾದ ರಾಷ್ಟ್ರೀಯತಾವಾದಿ, ಅವರ ರಾಷ್ಟ್ರದ ಮೇಲಿನ ಪ್ರೀತಿ ಮತ್ತು ಹೆಮ್ಮೆ ಅಪ್ರತಿಮವಾಗಿತ್ತು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಾಗಿದ್ದರುʼ ಎಂದು ಬರೆದುಕೊಂಡಿದ್ದಾರೆ ಕಂಗನಾ.
ಇದನ್ನೂ ಓದಿ | Kangana Ranaut | ಎಮರ್ಜೆನ್ಸಿ ಚಿತ್ರಕ್ಕೆ ಡೈರೆಕ್ಷನ್ ಕ್ಯಾಪ್ ತೊಟ್ಟ ಕಂಗನಾ: ಆರ್ ಜಿ ವಿ ಬಹುಪರಾಕ್
ಈ ಹಿಂದೆ ಚಿತ್ರತಂಡ ಅನುಪಮ್ ಖೇರ್ ಅವರ “ಲುಕ್ʼ ಬಿಡುಗಡೆಗೊಳಿಸಿತ್ತು. ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದಲ್ಲಿ ಅನುಪಮ್ ಅವರು ಕಾಶ್ಮೀರಿ ಪಂಡಿತನ ಪಾತ್ರ ನಿಭಾಯಿಸಿ ಸುದ್ದಿಯಲ್ಲಿದ್ದರು. ಇದೀಗ ಎಮರ್ಜೆನ್ಸಿ ಸಿನಿಮಾದಲ್ಲಿ ಕೂಡ ವಿಭಿನ್ನ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಯಪ್ರಕಾಶ್ ನಾರಾಯಣ್ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಈ ಚಿತ್ರ ಅನುಪಮ್ ಖೇರ್ ಅವರ 527ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ.
ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಕಂಗನಾ ನಿರ್ದೇಶಕಿಯ ಹೊಣೆಯನ್ನೂ ಹೊತ್ತಿದ್ದಾರೆ. ಕಂಗನಾ ರಣಾವತ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೇಳುವಷ್ಟು ಗೆಲುವು ಸಿಕ್ಕಿರಲಿಲ್ಲ. ಸಿನಿಮಾಗಿಂತಲೂ ವಿವಾದದ ಸುದ್ದಿಯಲ್ಲಿಯೇ ಹೆಚ್ಚಾಗಿ ಸದ್ದು ಮಾಡುತ್ತಿದ್ದರು. ʻಮೆಂಟಲ್ ಹೈ ಕ್ಯಾʼ, ʻಪಂಗಾʼ, ʻತಲೈವಿʼ ಮತ್ತು ʻಧಾಕಡ್ʼ ಸಿನಿಮಾಗಳಲ್ಲಿ ಕಂಗನಾ ಸೋತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಗೆಲ್ಲುವ ವಿಶ್ವಾಸ ಅವರದಾಗಿದೆ.
ಇದನ್ನೂ ಓದಿ | Emergency Teaser | ಇಂದಿರಾ ಗಾಂಧಿ ಲುಕ್ನಲ್ಲಿ ಖಡಕ್ ಆಗಿ ಮಿಂಚಿದ ಕಂಗನಾ, ಅವರೇ ನಾಯಕಿ, ಅವರೇ ನಿರ್ದೇಶಕಿ