Site icon Vistara News

Masoom Sawaal | ಸ್ಯಾನಿಟರಿ ಪ್ಯಾಡ್‌ ಮೇಲೆ ಶ್ರೀಕೃಷ್ಣ: ವಿವಾದ ಸೃಷ್ಟಿಸಿದ ಮಾಸೂಮ್‌ ಸವಾಲ್‌!

Masoom Sawaal

ಬೆಂಗಳೂರು: ʻಮಾಸೂಮ್‌ ಸವಾಲ್‌ʼ(Masoom Sawaal) ಸಿನಿಮಾ ಪೋಸ್ಟರ್‌ ಇದೀಗ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಸ್ಯಾನಿಟರಿ ಪ್ಯಾಡ್‌ ಮೇಲೆ ಶ್ರೀಕ್ಷಷ್ಣನ ಫೋಟೊ ಇದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರ ಇದರ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದು, ಸಿನಿತಂಡ ಸ್ಪಷ್ಟೀಕರಣವನ್ನೂ ನೀಡಿದೆ.

ಸ್ಯಾನಿಟರಿ ಪ್ಯಾಡ್‌ ಮೇಲೆ ಶ್ರೀಕೃಷ್ಣನ ಫೋಟೊವನ್ನು ಹಾಕಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಸಿನಿಮಾ ನಟಿ ಹಾಗೂ ನಿರ್ದೇಶಕರು ‘ಯಾರ ಭಾವನೆಗೆ ಧಕ್ಕೆ ತರುವ ಅಥವಾ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಕೀಲೆಯಾಗಿ ಏಕವಲಿ ಖನ್ನಾ
ಚಿತ್ರದಲ್ಲಿ ವಕೀಲೆಯ ಪಾತ್ರದಲ್ಲಿ ನಟಿಸಿರುವ ಏಕವಲಿ ಖನ್ನಾ ಅವರು ಈ ಬಗ್ಗೆ ಮಾತನಾಡಿ, “ಮೊದಲನೆಯದಾಗಿ, ಪೋಸ್ಟರ್‌ ಬಗ್ಗೆ ಬಂದಿರುವ ನೆಗೆಟಿವ್‌ ಕಮೆಂಟ್‌ಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ನಮಗೆ ಯಾರ ಭಾವನೆಗಳಿಗೂ ದಕ್ಕೆ ಉಂಟು ಮಾಡುವ ಉದ್ದೇಶ ಇರಲಿಲ್ಲʼʼ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | Kannada Movies | ಒಗ್ಗಟ್ಟಿಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ಇದು ತಾರೆಗಳ ಸಮಾಗಮ!

ಸಿನಿಮಾದಲ್ಲಿ ಏನಿದೆ?
ʻʻಮುಟ್ಟಿನ ಬಗ್ಗೆ ಏನೆಲ್ಲ ನಿಷೇಧವಿದೆ. ಆ ಪದ್ಧತಿಯನ್ನು ಹೋಗಲಾಡಿಸುವುದು ಹಾಗೂ ನಿರೂಪಣೆಯನ್ನು ಬದಲಾಯಿಸುವುದು ಇದರ ಏಕೈಕ ಉದ್ದೇಶವಾಗಿತ್ತು. ಈ ಪೀಳಿಗೆಯಲ್ಲಿ, ಅನಗತ್ಯವಾಗಿ ಮಹಿಳೆಯರ ಮೇಲೆ ಬಲವಂತವಾಗಿ ಹೇರುವ ಮೂಢನಂಬಿಕೆಗಳು ಮತ್ತು ಕೆಟ್ಟ ಅಭ್ಯಾಸಗಳಿಗೆ ಅವಕಾಶವಿಲ್ಲ ಎಂದು ಪೋಸ್ಟರ್‌ನಲ್ಲಿ ಹೇಳಬೇಕಿತ್ತುʼʼ ಎಂದು ನಿರ್ದೇಶಕ ಸಂತೋಷ್‌ ಉಪಾಧ್ಯಾಯ ಹೇಳಿದ್ದಾರೆ.

ಕೆಲವೊಮ್ಮೆ “ನಾವು ನೋಡುವ ನಮ್ಮ ದೃಷ್ಟಿಕೋನವು ತಪ್ಪಾಗಿರುತ್ತದೆ, ಮತ್ತು ಅದು ತಪ್ಪು ಕಲ್ಪನೆಗೆ ಕಾರಣವಾಗುತ್ತದೆ” ಎಂದು ಹೇಳಿದರು. ʻʻಇಡೀ ಚಿತ್ರವು ಮುಟ್ಟಿನ ಮೇಲೆ ಆಧಾರಿತವಾಗಿದೆ, ಆದ್ದರಿಂದ ಪ್ಯಾಡ್ ಅನ್ನು ತೋರಿಸುವುದು ಕಡ್ಡಾಯವಾಗಿದೆ. ಅದಕ್ಕಾಗಿಯೇ ಪೋಸ್ಟರ್‌ನಲ್ಲಿ ಪ್ಯಾಡ್ ಇದೆ ಮತ್ತು ಪ್ಯಾಡ್‌ನಲ್ಲಿ ಭಗವಾನ್‌ ಶ್ರೀಕೃಷ್ಣ ಒಬ್ಬನನ್ನೇ ಹಾಕಿಲ್ಲ. ಅಲ್ಲಿ ಕಥೆಯಲ್ಲಿ ಅವಶ್ಯ ಇರುವ ಎಲ್ಲವನ್ನೂ ಚಿತ್ರಿಸಲಾಗಿದೆ. ಈ ಕಾರಣದಿಂದಾಗಿ, ಈ ಚಿತ್ರದ ಪ್ರಚಾರಕ್ಕಾಗಿ ನಮಗೆ ಕಡಿಮೆ ಬೆಂಬಲ ಸಿಗುತ್ತಿದೆʼʼ ಎಂದು ಹೇಳಿಕೆ ನೀಡಿದ್ದಾರೆ.

ವಕೀಲೆ ಹಾಗೂ ಮಗುವಿನ ನಡುವೆ ಆಗುವ ಕಥೆ
ಈ ಚಿತ್ರದಲ್ಲಿ ಏಕವಲ್ಲಿ ಖನ್ನಾ ವಕೀಲೆಯ ಪಾತ್ರ ನಿಭಾಯಿಸುತ್ತಿದ್ದು, ಭಾವನೆಗಳನ್ನು ಅರ್ಥಮಾಡಿಕೊಳ್ಳದ ಕುಟುಂಬದ ಮಗುವಿನ ಮೇಲೆ ಸಮಾಜ ಹೇರಿರುವ ನಿಯಮಗಳ ವಿರುದ್ಧ ಹೋರಾಡುವುದಾಗಿದೆ. ವಕೀಲೆ ಮತ್ತು ಮಗುವಿನ ನಡುವಿನ ಕಥಾ ಹಂದರ ಹೊಂದಿದ್ದು, ಜಾಗೃತಿ ಮೂಡಿಸುವ ಸಿನಿಮಾ ಆಗಿದೆ.

ಆಗಸ್ಟ್‌ 5 ತೆರೆಗೆ
ʼಮಾಸೂಮ್ ಸವಾಲ್’ ಎಂದರೆ ಮುಟ್ಟಿನ ಮತ್ತು ಅದಕ್ಕೆ ಸಂಬಂಧಿಸಿದ ಅವಮಾನದ ಬಗ್ಗೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ನಿತಾಂಶಿ ಗೋಯಲ್, ಏಕವಲಿ ಖನ್ನಾ, ಶಿಶಿರ್ ಶರ್ಮಾ, ಮಧು ಸಚ್‌ದೇವ, ರೋಹಿತ್ ತಿವಾರಿ, ಬೃಂದಾ ತ್ರಿವೇದಿ, ರಾಮ್‌ಜಿ ಬಾಲಿ, ಶಶಿ ವರ್ಮಾ ಮತ್ತು ಇತರರು ನಟಿಸಿದ್ದಾರೆ.

ಕಮಲೇಶ್ ಕೆ. ಮಿಶ್ರಾ ಕಥೆ ಬರೆದಿದ್ದಾರೆ ಮತ್ತು ನಕ್ಷತ್ರ 27 ಪ್ರೊಡಕ್ಷನ್ಸ್‌ನ ರಂಜನಾ ಉಪಾಧ್ಯಾಯ ನಿರ್ಮಿಸಿದ್ದಾರೆ. ಈ ಚಿತ್ರ ಆಗಸ್ಟ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Kangana Ranaut | ಎಮರ್ಜೆನ್ಸಿ ಸಿನಿಮಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆಗಿ ಶ್ರೇಯಸ್ ತಲ್ಪಾಡೆ

Exit mobile version