ಬೆಂಗಳೂರು: ನಟಿ ಶ್ರಿಯಾ ಶರಣ್ (Shriya Saran) ಇದೀಗ ತಮ್ಮ ಡ್ರೆಸ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ಉಡುಪಿನಲ್ಲಿ ಶ್ರಿಯಾ ತನ್ನ ಕಂಫರ್ಟ್ ಝೋನ್‌ನಿಂದ ಹೊರಬಂದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಶ್ರಿಯಾ ಆಫ್ ಶೋಲ್ಡರ್ ಡೆನಿಮ್ ಡ್ರೆಸ್‌ನಲ್ಲಿ ಈವೆಂಟ್‌ಗೆ ಹೋಗುತ್ತಿರುವುದು ಕಂಡುಬಂದಿದೆ. ಶ್ರಿಯಾ ಡೆನಿಮ್ ಉಡುಪನ್ನು ಸ್ಟೇಟ್‌ಮೆಂಟ್ ನೆಕ್ಲೇಸ್‌ನೊಂದಿಗೆ ಸ್ಟೈಲ್ ಆಗಿ ಕಂಡಿದ್ದಾರೆ. ಇಷ್ಟು ಬೋಲ್ಡ್ ಆಗಿ ಕಂಡಿದ್ದೇ ತಡ ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಅನೇಕರು ನಟಿಯನ್ನು ಉರ್ಫಿ ಜಾವೇದ್‌ಗೆ ಹೋಲಿಸಿದ್ದಾರೆ.
ಶ್ರಿಯಾ ಬೋಲ್ಡ್ ಲುಕ್ ಇದ್ದರೂ, ಅನೇಕ ಜನರಿಗೆ ಇದು ಇಷ್ಟವಾಗಲಿಲ್ಲ. ಕೆಲವರು ಉರ್ಫಿ ಜಾವೇದ್‌ಗೆ ಹೋಲಿಸಿದರೆ, ಇನ್ನೂ ಕೆಲವರು ಶ್ರಿಯಾಗೆ ಇಂತಹ ಉಡುಗೆ ಸರಿಹೊಂದುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬರು ʻʻಈ ಉಡುಗೆ ನಟಿಗೆ ತುಂಬಾ ಕೆಟ್ಟದಾಗಿ ಕಾಣುತ್ತಿದೆ” ಎಂದು ಬರೆದಿದ್ದಾರೆ. “ಇಂದಿನ ದಿನಗಳಲ್ಲಿ ಎಲ್ಲರೂ ಏಕೆ ಉರ್ಫಿ ಸ್ಟೈಲ್ ಫಾಲೋ ಮಾಡುತ್ತಿದ್ದಾರೆʼʼಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Shriya Saran: ಇಲ್ಲಿವೆ ಮಗಳು ರಾಧಾ ಜತೆ ಫೋಟೋಶೂಟ್ ಮಾಡಿಕೊಂಡ ಶ್ರಿಯಾ ಸರನ್ ಲೇಟೆಸ್ಟ್ ಫೋಟೊಗಳು
ಶ್ರಿಯಾ 2001ರಲ್ಲಿ ತೆಲುಗು ಚಿತ್ರ ʻಇಷ್ಟಂʼ ಸಿನಿಮಾ ಮೂಲಕ ನಟನಗೆ ಪದಾರ್ಪಣೆ ಮಾಡಿದರು. 2002ರ ʻಸಂತೋಷಂʼ ಸಿನಿಮಾ ಮೂಲಕ ಯಶಸ್ಸನ್ನು ಪಡೆದರು. ಛತ್ರಪತಿ, ಶಿವಾಜಿ: ದಿ ಬಾಸ್, ಮಿಷನ್ ಇಸ್ತಾನ್‌ಬುಲ್, ಆರ್‌ಆರ್‌ಆರ್ ಮತ್ತು ದೃಶ್ಯಂ ಹೀಗೆ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಟಾಲಿವುಡ್ ನಟಿ ಶ್ರಿಯಾ ಶರಣ್, ಕನ್ನಡದ ಕಬ್ಜ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಕನ್ನಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅದ್ಭುವಾಗಿ ನಟಿಸಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಶ್ರಿಯಾ ನಟನೆಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.