Site icon Vistara News

Shruti Haasan: ಗುಟ್ಟಾಗಿ ಮದುವೆಯಾದ್ರಾ ಶ್ರುತಿ ಹಾಸನ್; ನಟಿಯ ಸ್ಪಷ್ಟನೆ ಏನು?

Shruti Haasan

ಬೆಂಗಳೂರು: ಶ್ರುತಿ ಹಾಸನ್ (Shruti Haasan) ಮತ್ತು ಅವರ ಬಾಯ್‌ಫ್ರೆಂಡ್‌ ಶಂತನು ಹಜಾರಿಕಾ (Santanu Hazarika) ಆಗಾಗ ಒಟ್ಟಿಗೆ ಇರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಬಾಲಿವುಡ್​ ಸೆಲೆಬ್ರಿಟಿಗಳ ಸ್ನೇಹಿತ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ (Orhan Awatramani) ಅವರು ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದರು. ʻಶ್ರುತಿ ಹಾಸನ್​ ಗಂಡನ ಜತೆ ನನಗೆ ಸ್ನೇಹ ಇದೆ’ ಎಂದು ಒರಿ ಹೇಳಿದರು. ಅಲ್ಲಿಂದ ಶ್ರುತಿ ಹಾಸನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಯಿತು. ಇದೀಗ ನಟಿ ಹಾಗೂ ಶಂತನು ಹಜಾರಿಕಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಶ್ರುತಿ ಹಾಸನ್ ಮುಂಬೈನಲ್ಲಿ ತನ್ನ ಗೆಳೆಯ ಶಂತನು ಹಜಾರಿಕಾ ಜತೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ. ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದರು. ʻಶ್ರುತಿ ಹಾಸನ್​ ಗಂಡನ ಜತೆ ನನಗೆ ಸ್ನೇಹ ಇದೆ’ ಎಂದು ಒರಿ ಹೇಳಿದರು. ಅಲ್ಲಿಂದ ಶ್ರುತಿ ಹಾಸನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಯಿತು. ಇದೀಗ ಜೋಡಿ ಪೋಸ್ಟ್‌ ಮೂಲಕ ಹೇಳಿಕೆ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.

ಶ್ರುತಿ ಹಾಸನ್ ತಮ್ಮ ಇನ್‌ಸ್ಟಾದಲ್ಲಿ ʻʻನಾನು ಮದುವೆಯಾಗಿಲ್ಲ. ಪ್ರತಿಯೊಂದು ವಿಷಯದ ಬಗ್ಗೆಯೂ ಮುಕ್ತವಾಗಿ ಹಂಚಿಕೊಳ್ಳುವ ನಾನು ಈ ವಿಚಾರ ಯಾಕೆ ಮುಚ್ಚಿಡಲಿ? ಗೊತ್ತಿಲ್ಲದೇ ಇರುವವರು ಸುಮ್ಮನೆ ಇರಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shruti Haasan: ಬಾಯ್‌ಫ್ರೆಂಡ್‌ಗೆ ಧನ್ಯವಾದ ಅರ್ಪಿಸಿದ್ದೇಕೆ ನಟಿ ಶ್ರುತಿ ಹಾಸನ್‌?

ಶಂತನು ಹಜಾರಿಕಾ ಕೂಡ ʻನಾವು ಮದುವೆಯಾಗಿಲ್ಲ! ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿʼʼಎಂದು ಬರೆದುಕೊಂಡಿದ್ದಾರೆ.

ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈಗ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಆಗಾಗ ಶ್ರುತಿ ಹಾಸನ್‌ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್‌ ಅಂತೆ. ನಟಿ ಶ್ರುತಿ ಹಾಸನ್ (Shruti Haasan) ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್‌ಫ್ರೆಂಡ್‌ ಶಂತನು ಹಜಾರಿಕಾ (Santanu Hazarika) ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. 

ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಮತ್ತು ವಾಲ್ತೇರ್‌ ವೀರಯ್ಯ ಜನವರಿ ತಿಂಗಳಲ್ಲಿ ಒಟ್ಟಿಗೆ ತೆರೆಗೆ ಬಂತು. ವೀರಸಿಂಹ ರೆಡ್ಡಿ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ.ಶ್ರುತಿ ಹಾಸನ್ ಕೊನೆಯದಾಗಿ ಪ್ರಭಾಸ್ ಅವರ ಸಲಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಲಾರ್‌ ವಿಶ್ವದಾದ್ಯಂತ 500 ಕೋಟಿ ರೂ. ಬಾಚಿಕೊಂಡಿದೆ.

Exit mobile version