Site icon Vistara News

Shruti Haasan: ಬಾಯ್‌ಫ್ರೆಂಡ್‌ ಜತೆ ಜನುಮದಿನ ಆಚರಿಸಿಕೊಂಡ ಶ್ರುತಿ ಹಾಸನ್‌

Shruti Haasan shared an adorable picture with her beau Santanu Hazarika

ಬೆಂಗಳೂರು : ಬಹುಭಾಷಾ ನಟಿ ಶ್ರುತಿ ಹಾಸನ್‌ (Shruti Haasan) ಅವರಿಗೆ ಜನುಮದಿನದ ಸಂಭ್ರಮ. ಜನವರಿ 27 ಶುಕ್ರವಾರ ರಾತ್ರಿ ತಮ್ಮ ಹುಟ್ಟುಹಬ್ಬವನ್ನು ತಮ್ಮ ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ ಹಾಗೂ ಸ್ನೇಹಿತರೊಂದಿಗೆ ಆಚರಿಸಿದ್ದಾರೆ. ಇದೀಗ ಸಂಭ್ರಮಾಚರಣೆಯ ಫೋಟೊ ಹಾಗೂ ವಿಡಿಯೊಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ನಟಿ ಹಂಚಿಕೊಂಡಿದ್ದಾರೆ.

ಶ್ರುತಿ ಹಾಸನ್‌ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ, ಶಾಂತನು ಮತ್ತು ಆಕೆ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದನ್ನು ಪೋಸ್ಟ್‌ ಮಾಡಿದ್ದಾರೆ. ಶ್ರುತಿ ಹಾಸನ್‌ ಆಗಾಗ ಶಾಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಶ್ರುತಿ ಹಾಸನ್ ಅವರು ಶಾಂತನು ಹಜಾರಿಕಾ (Santanu Hazarika) ಜತೆ ನಟಿ ಡೇಟಿಂಗ್ ಮಾಡುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಇದನ್ನೂ ಓದಿ: Shruti Haasan | ಮಾನಸಿಕ ಸಮಸ್ಯೆಯಿದೆ ಎಂದವರಿಗೆ ಶ್ರುತಿ ಹಾಸನ್ ಖಡಕ್‌ ಪ್ರತಿಕ್ರಿಯೆ

ಇದನ್ನೂ ಓದಿ: Shruti Haasan | ನನ್ನ ಹೈಟ್‌ ನನಗೆ ಮೈನಸ್‌ ಅನ್ನುತ್ತಿದ್ದರು, ಅದೇ ಪ್ಲಸ್‌ ಆಯಿತು: ಶ್ರುತಿ ಹಾಸನ್‌

ಪ್ರಸ್ತುತ ನಟಿ ಪ್ರಭಾಸ್ ಅವರ ಸಲಾರ್, ಬಾಬಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಲಾರ್‌ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡುತ್ತಿದ್ದಾರೆ. ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು.

Exit mobile version