ಬೆಂಗಳೂರು: ಶ್ರುತಿ ಹಾಸನ್ (Shruti Haasan) ಅವರು ಇದೀಗ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ನಟಿ ಸುದ್ದಿಯಲ್ಲಿದ್ದಾರೆ. ಈ ಬಾರಿ ತಮಿಳಿನಲ್ಲಿ ಅವರ ಹೆಸರನ್ನು ಭಗವಾನ್ ಮುರುಗನ್ ವೇಲ್ (ದೇವರ ಕೈಲ್ಲಿರುವ ಭರ್ಜಿಯಾಕಾರದ ಆಯುಧ) ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶ್ರುತಿ ಈ ಹಿಂದೆ ಅನೇಕ ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ, ಹೊಸ ಟ್ಯಾಟೂ ಅವರ ಧಾರ್ಮಿಕ ನಂಬಿಕೆ ಮತ್ತು ಸ್ವಯಂ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.
ಹೊಸ ಟ್ಯಾಟೂ ಬಗ್ಗೆ ಮಾತನಾಡಿದ ಶ್ರುತಿ, ʻʻನಾನು ಆಧ್ಯಾತ್ಮಿಕ ಒಲವು ಹೊಂದಿದ್ದೇನೆ. ಮುರುಗನ್ ದೇವರ ವೇಲ್ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ. ಈಗ ಹಚ್ಚೆ ಮೂಲಕ ನನ್ನ ಭಕ್ತಿ ಪ್ರದರ್ಶಿಸಲು ನಾನು ಬಯಸುತ್ತೇನೆ,ʼʼಎಂದಿದ್ದಾರೆ.
ನಟಿ ತನ್ನ ಹೊಸ ಟ್ಯಾಟೂ ಫೋಟೊವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಗಮನ ಸೆಳೆದಿದೆ. ಶ್ರುತಿ ಹಾಸನ್ ಅವರ ಪ್ರತಿಯೊಂದು ಟ್ಯಾಟೂಗಳು ವಿಶೇಷ ಅರ್ಥ ಹೊಂದಿವೆ. ಶ್ರುತಿ ಹಾಸನ್ ‘ಸಾಲಾರ್’ ಚಿತ್ರದಲ್ಲಿ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ʻಸಲಾರ್’ನಲ್ಲಿ ಶ್ರುತಿ ಹಾಸನ್ ಅವರು ಆದ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಪ್ರಭಾಸ್ ಜತೆ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Shruti Haasan: ಬಾಯ್‌ಫ್ರೆಂಡ್ ಜತೆ ಜನುಮದಿನ ಆಚರಿಸಿಕೊಂಡ ಶ್ರುತಿ ಹಾಸನ್
ಶ್ರುತಿ ಹಾಸನ್ ಈ ಹಿಂದೆ ಸಿನಿಮಾ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ʻʻಸಲಾರ್‌ನಲ್ಲಿ ನನ್ನ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಈ ವಿಶೇಷ ತಂಡದೊಂದಿಗೆ ಕೆಲಸ ಮಾಡಿರುವುದು ತುಂಬಾ ಸಂತೋಷಕರವಾಗಿತ್ತು, ಅದು ಸಕಾರಾತ್ಮಕತೆಯಿಂದ ತುಂಬಿತ್ತು ಮತ್ತು ಕೊನೆಯಲ್ಲಿ ಕುಟುಂಬದಂತೆ ಭಾಸವಾಗಿದೆ,ʼʼಎಂದು ಬರೆದುಕೊಂಡಿದ್ದರು.