ಬೆಂಗಳೂರು : ನಟಿ ಶ್ರುತಿ ಹಾಸನ್ (Shruti Haasan) ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ ಶ್ರುತಿ ಹಾಸನ್ ನಟನೆಯ ಎರಡು ತೆಲುಗು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿರುವುದು ವಿಶೇಷ. ಚಿರಂಜೀವಿ ಜತೆ ನಟಿಸಿದ್ದ ʻವಾಲ್ತೇರ್ ವೀರಯ್ಯ’ ಮತ್ತು ಬಾಲಯ್ಯ ಜತೆ ನಟಿಸಿದ್ದ ʻವೀರ ಸಿಂಹ ರೆಡ್ಡಿʼ ಸಿನಿಮಾಗಳು ಜನವರಿ 13 ರಂದು ರಿಲೀಸ್ ಆಗಿವೆ.
ಈ ಚಿತ್ರದ ಪ್ರಿ ರಿಲೀಸ್ ಇವೆಂಟ್‌ಗೆ ಶ್ರುತಿ ಗೈರಾಗಿದ್ದರು. ಇದನ್ನ ಗಮನಿಸಿ ನೆಟ್ಟಿಗರು ಶ್ರುತಿಗೆ ಮಾನಸಿಕ ಸಮಸ್ಯೆಯಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಟಿ ತಿರುಗೇಟು ಕೊಟ್ಟಿದ್ದಾರೆ. ಚಿರಂಜೀವಿ ಜತೆಗೆ ʻವಾಲ್ತೇರ್ ವೀರಯ್ಯ’ ಮತ್ತು ಬಾಲಯ್ಯಗೆ ನಾಯಕಿಯಾಗಿ ʻವೀರ ಸಿಂಹ ರೆಡ್ಡಿ’ಚಿತ್ರಗಳಲ್ಲಿ ಶ್ರುತಿ ನಟಿಸಿದ್ದರು. ಈ ಸಿನಿಮಾ ಇದೀಗ ತೆರೆ ಕಂಡಿದೆ. ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಗೈರಾಗಿದ್ದರು.
ಇದನ್ನೂ ಓದಿ | Shruti Haasan | ನನ್ನ ಹೈಟ್ ನನಗೆ ಮೈನಸ್ ಅನ್ನುತ್ತಿದ್ದರು, ಅದೇ ಪ್ಲಸ್ ಆಯಿತು: ಶ್ರುತಿ ಹಾಸನ್
ʻʻನನಗೆ ಜ್ವರ ಇತ್ತು ಅಷ್ಟೇ. ನಾನು ಯಾವಾಗಲೂ ಮಾನಸಿಕ ಆರೋಗ್ಯ ವಕೀಲೆಯಾಗಿ ಇರುತ್ತೇನೆ. ಗುಣಮುಖಳಾದ ಮೇಲೆ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗುತ್ತೇನೆʼʼ ಎಂದು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Actress Shruti Haasan | ʻನShruti Haasanನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲʼ: ಶ್ರುತಿ ಹಾಸನ್!