Site icon Vistara News

Shweta Tiwari : ಹಾಟ್‌ ಲುಕ್‌ನಲ್ಲಿ ಮಿಂಚಿದ ನಟಿ ಶ್ವೇತಾ ತಿವಾರಿ; ನಿಮಗೆ ವಯಸ್ಸೆಷ್ಟೆಂದು ಕೇಳಿದ ನೆಟ್ಟಿಗರು

#image_title

ಮುಂಬೈ: ಬಾಲಿವುಡ್‌ ನಟಿಯರು ಆಗಾಗ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ 42 ವರ್ಷದ ನಟಿ ಶ್ವೇತಾ ತಿವಾರಿ (Shweta Tiwari) ಕೂಡ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿ ವೈರಲ್‌ ಆಗಿವೆ.


ಚರ್ಮದ ಬಣ್ಣದ ಲೆಹಂಗಾದಲ್ಲಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಬ್ಯಾಕ್‌ಲೆಸ್‌ ಇರುವ ಬ್ಲೌಸ್‌ ಅವರನ್ನು ಇನ್ನಷ್ಟು ಹಾಟ್‌ ಆಗಿ ತೋರುವಂತೆ ಮಾಡಿದೆ. ನಟಿ ತನ್ನ ಉಡುಗೆಗೆ ಮ್ಯಾಚ್‌ ಆಗುವಂತೆ ವಜ್ರದ ನೆಕ್ಲೇಸ್‌ ಅನ್ನು ತೊಟ್ಟಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ನಟಿ “ನೆವರ್‌ ಕಂಪ್ಲೇನ್‌, ನೆವರ್‌ ಎಕ್ಸ್‌ಪ್ಲೇನ್‌” ಎಂದು ಕ್ಯಾಪ್ಶನ್‌ ಅನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: Viral News : ಅಮ್ಮನಿಗೆ ಬುದ್ಧಿ ಕಲಿಸಲು ಊರಿಗೇ ಬೆಂಕಿ ಇಟ್ಟ ಮಗಳು! ಇದರ ಹಿಂದಿದೆ ಅಕ್ರಮ ಸಂಬಂಧದ ಕತೆ
ನಟಿಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ ಆಗಿವೆ. “ಅದೆಷ್ಟು ಹಾಟ್‌ ಆಗಿದ್ದೀರಿ” ಎಂದು ನಟಿ ದಿವ್ಯ ಅಗರ್ವಾಲ್‌ ಅವರು ಕಾಮೆಂಟ್‌ ಮಾಡಿದ್ದಾರೆ. ಹಾಗೆಯೇ ಅಭಿಮಾನಿಗಳು ಕೂಡ ನಟಿಯ ಹಾಟ್‌ನೆಸ್‌ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. “ನಿಜಕ್ಕೂ ನಿಮಗೆ ರಿವರ್ಸ್‌ ಆಗಿ ವಯಸ್ಸಾಗುತ್ತಿದೆ. ಬರುಬರುತ್ತಾ ನಿಮ್ಮ ವಯಸ್ಸು ಕಡಿಮೆಯಾಗುತ್ತಿದೆ” ಎಂದು ಅನೇಕರು ಹೇಳಲಾರಂಭಿಸಿದ್ದಾರೆ. “ಬಾಲಿವುಡ್‌ನಲ್ಲಿ ವಯಸ್ಸು ಕೇವಲ ಅಂಕಿ ಮಾತ್ರ ಎನ್ನುವುದಕ್ಕೆ ನೀವೇ ಉದಾಹರಣೆ” ಎಂದೂ ಕೆಲವರು ಹೇಳಿದ್ದಾರೆ.


ಶ್ವೇತಾ ಅವರು ಇತ್ತೀಚೆಗೆ ಇನ್ನೊಂದು ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಬಿಳಿ ಬಣ್ಣದ ಶರ್ಟ್‌, ಶಾರ್ಟ್‌ ಸ್ಕರ್ಟ್‌ ಮತ್ತು ಕಪ್ಪು ಬಣ್ಣದ ಕೋಟ್‌ ಅನ್ನು ನಟಿ ತೊಟ್ಟಿದ್ದರು. ಆ ಫೋಟೋಗಳಿಗೂ ಕೂಡ ಸಾಕಷ್ಟು ಜನರು ಫಿದಾ ಆಗಿದ್ದರು.

Exit mobile version