Site icon Vistara News

Shyam Benegal: ತಂದೆ ಕ್ಷೇಮ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದ ಶ್ಯಾಮ್ ಬೆನಗಲ್ ಮಗಳು

Shyam Benegal Director Shyam Benegal's daughter says he is 'fine'

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಶ್ಯಾಮ್ ಬೆನಗಲ್ (Shyam Benegal) ಅವರ ಎರಡೂ ಕಿಡ್ನಿಗಳೂ ಫೇಲ್‌ ಆಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭಿರಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಶ್ಯಾಮ್ ಬೆನಗಲ್ ಅವರ ಮಗಳು ಪಿಯಾ (Pia) ʻʻಈ ಸುದ್ದಿ ಸುಳ್ಳು, ತಂದೆ ಕ್ಷೇಮವಾಗಿದ್ದಾರೆ. ರಬ್ಬಿಶ್‌ ರೂಮರ್ಸ್‌ಗಳಿಗೆ ಕಿವಿಗೊಡಬೇಡಿʼʼ ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ಹೇಳಿಕೆ ನೀಡಿದ್ದಾರೆ.

ಟೈಮ್ಸ್ ನೌ ವರದಿ ಮಾಡಿದಂತೆ, ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ಮನೆಯಲ್ಲಿಯೇ ಡಯಾಲಿಸಿಸ್‌ಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಕಚೇರಿಗೆ ಭೇಟಿ ನೀಡುತ್ತಿಲ್ಲ ಎಂದು ಸಿಬ್ಬಂದಿ ಹೇಳಿರುವುದು ವರದಿಯಾಗಿತ್ತು. ಇದೀಗ ಹಿಂದೂಸ್ತಾನ್ ಟೈಮ್ಸ್‌ಗೆ ಅವರ ಮಗಳು ಪಿಯಾ ಈ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ʻʻತನ್ನ ತಂದೆ ಕ್ಷೇಮವಾಗಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಸುಳ್ಳು. ಕೆಲವೇ ದಿನಗಳಲ್ಲಿ ಅವರು ಆರೋಗ್ಯ ಸುಧಾರಿಸಿಕೊಳ್ಳುತ್ತಾರೆ. ವೈದ್ಯರು ಮನೆಗೆ ಬರುತ್ತಿದ್ದಾರೆ. ತಂದೆ ಮನೆಯಲ್ಲಿಯೇ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಹೋಗಲಾರದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ಸುಳ್ಳುʼʼಎಂದಿದ್ದಾರೆ.

ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ ಪಿಯಾ ಅವರು ʻʻನಾನು ಈಗ ನಿಮಗೆ ಏನು ಹೇಳಲು ಸಾಧ್ಯವಿಲ್ಲ. ಸದ್ಯದಲ್ಲೇ ಅವರು ಕಚೇರಿಗೆ ಹಿಂದಿರುಗುತ್ತಾರೆ. ಅವರಿಗೆ ಸ್ವಲ್ಪ ವಿಶ್ರಾಂತಿ ಬೇಕು. 88ನೇ ವಯಸ್ಸಿನಲ್ಲಿ ಅವರಿಗೆ ನಿವೃತ್ತಿಯ ಸಮಯ. ಇದನ್ನು ಈ ರೀತಿ ಏಕೆ ಯೋಚಿಸುತ್ತಿಲ್ಲ?ಎಂದು ಹೇಳಿದ್ದಾರೆ.

Shyam Benegal

ಶ್ಯಾಮ್ ಅವರು ʻʻಮುಜೀಬ್: ದಿ ಮೇಕಿಂಗ್ ಆಫ್ ಎ ನೇಷನ್ʼʼ (Mujeeb: The Making of a Nation) ಎಂಬ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರವು ಬಾಂಗ್ಲಾದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನಾಧರಿತ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shyam Benegal: ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಎರಡೂ ಕಿಡ್ನಿ ಫೇಲ್‌, ಆರೋಗ್ಯ ಸ್ಥಿತಿ ಗಂಭೀರ

ಶ್ಯಾಮ್ ಬೆನಗಲ್ ತಮ್ಮ ವೃತ್ತಿಜೀವನದಲ್ಲಿ ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಮೊದಲ ರಾಷ್ಟ್ರೀಯ ಪ್ರಶಸ್ತಿಯು ಅವರ ಅಂಕುರ್ ( Ankur) (1974) ಚಿತ್ರಕ್ಕಾಗಿ, ಇದು ಶಬಾನಾ ಅಜ್ಮಿ ಮತ್ತು ಅನಂತ್ ನಾಗ್ ಅವರ ಚೊಚ್ಚಲ ಚಿತ್ರವಾಗಿದೆ. ನಿಶಾಂತ್ (Nishant) (1975), ಮಂಥನ್ (Manthan ) (1976), ಭೂಮಿಕಾ: ದಿ ರೋಲ್ ( Bhumika: The Role ) (1977), ಜುನೂನ್ (Junoon) (1978), ಆರೋಹನ್ Arohan) (1982), ನೇತಾಜಿ ಸುಭಾಸ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (Netaji Subhas Chandra Bose: The Forgotten Hero) (2004) ಮತ್ತು ವೆಲ್ ಡನ್‌ ಅಬ್ಬಾ (Well Done Abba)ಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: Neena Gupta: ನಿರ್ದೇಶಕ ಶ್ಯಾಮ್ ಬೆನಗಲ್ ಬಗ್ಗೆ ಅಸಮಾಧಾನ ಹೊರ ಹಾಕಿದ ನಟಿ ನೀನಾ ಗುಪ್ತಾ

ಪ್ರಶಸ್ತಿಗಳು

ರಾಷ್ಟ್ರಪ್ರಶಸ್ತಿಗಳನ್ನು ಗೆಲ್ಲುವುದರ ಜತೆಗೆ, ಶ್ಯಾಮ್ ಅವರು ಕೆಲವು ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಇವುಗಳಲ್ಲಿ 1976ರಲ್ಲಿ ಪದ್ಮಶ್ರೀ, 1991 ರಲ್ಲಿ ಪದ್ಮಭೂಷಣ ಮತ್ತು 2005 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿವೆ. ಚಲನಚಿತ್ರ ನಿರ್ಮಾಣದ ಜತೆಗೆ, ಶ್ಯಾಮ್ ಬೆನಗಲ್ ಅವರ ಬರವಣಿಗೆಯ ಕೆಲಸಕ್ಕೂ ಹೆಸರುವಾಸಿಯಾಗಿದ್ದಾರೆ. ಅವರು ಮೂರು ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ, ದಿ ಚರ್ನಿಂಗ್ ವಿತ್ ವಿಜಯ್ ತೆಂಡೂಲ್ಕರ್ (The Churning with Vijay Tendulkar ೦ (1984), ಸತ್ಯಜಿತ್ ರೇ ( Satyajit Ray ) (1988) ಮತ್ತು ದಿ ಮಾರ್ಕೆಟ್‌ಪ್ಲೇಸ್ ( The Marketplace ) (1989).

Exit mobile version