ಬೆಂಗಳೂರು: ನಟ ನಟಿಯರನ್ನು ಆದರ್ಶದಂತೆ ಕಾಣುವ ಅಭಿಮಾನಿಗಳಿರುತ್ತಾರೆ. ಆದರೆ ಕೆಲವೊಮ್ಮೆ ಅದೇ ನಟ ನಟಿಯರ ಬದುಕೇ ಮೂರಾಬಟ್ಟೆ ಆಗಿಬಿಟ್ಟಿರುತ್ತದೆ. ಅತ್ತೆ ಸೊಸೆ ಜಗಳ ನಮ್ಮ ಭಾರತದಲ್ಲಿ ಸಾಮಾನ್ಯ. ಈ ಜಗಳ ಕನ್ನಡದ ಕಿರುತೆರೆಯ ಹಿರಿಯ ನಟಿಯ ಮನೆಗೂ ಒಕ್ಕರಿಸಿಕೊಂಡಿದೆ. ಸ್ವಂತ ಮಗ-ಸೊಸೆಯಿಂದಲೇ ನಿತ್ಯ ಟಾರ್ಚರ್‌ಗೆ ಒಳಗಾಗುತ್ತಿರುವ ನಟಿಯೊಬ್ಬರು ಇದೀಗ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಯ (Sandalwood News) ಮೆಟ್ಟಿಲೇರಿದ್ದಾರೆ.
ಹಿರಿಯ ನಟಿ ಶ್ಯಾಮಲಾದೇವಿ ಅವರನ್ನು ನೀವು ಅನೇಕ ಸಿನಿಮಾಗಳಲ್ಲಿ ನೋಡಿರಬಹುದು. ಅವರು ಖ್ಯಾತ ನಿರ್ದೇಶಕ ದಿವಂಗತ ಸಿದ್ದಲಿಂಗಯ್ಯ ಅವರ ಪತ್ನಿಯೂ ಹೌದು. ಇದೀಗ ಇದೇ ನಟಿ ಮಗ ಸೊಸೆ ವಿರುದ್ಧ ದೂರನ್ನಿಟ್ಟುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮಗ ಮತ್ತು ಸೊಸೆಯ ಟಾರ್ಚರ್‌ನಿಂದ ನನಗೆ ಮುಕ್ತಿ ಕೊಡಿಸಿ ಎಂದು ಪೊಲೀಸರ ಎದುರು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: Video Viral: ಎಂಥಾ ಅದೃಷ್ಟಾರೀ… 110 ಕಿಮೀ ಸ್ಪೀಡ್‌ನಲ್ಲಿ ಹೋಗುತ್ತಿದ್ದ ರೈಲಿನಿಂದ ಬಿದ್ರೂ ಏನು ಆಗಿಲ್ಲ!
ಶ್ಯಾಮಲಾದೇವಿ ಅವರ ಹೆಸರಿನಲ್ಲಿ ಮನೆಯಿದ್ದು, ಆ ಆಸ್ತಿಗಾಗಿ ಮಗ ಮತ್ತು ಸೊಸೆ ಟಾರ್ಚರ್ ನೀಡುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ತನಗೆ ಅಗತ್ಯ ಸೌಲಭ್ಯಗಳನ್ನೂ ಕೊಡದೆ ಸತಾಯಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಂದಲೂ ಪ್ರತಿನಿತ್ಯ ಇದೇ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದೂ ನಟಿ ದೂರಿನಲ್ಲಿ ಹೇಳಿದ್ದಾರೆ.
ಈ ಕುರಿತಾಗಿ ಶ್ಯಾಮಲಾದೇವಿ ಅವರು ಪೊಲೀಸ್ ಕಮಿಷನರ್ ಬಳಿ ದೂರು ನೀಡಿದ್ದಾರೆ. ದೂರನ್ನು ಬಸವನಗುಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತಾಗಿ ತನಿಖೆಯನ್ನು ಆರಂಭಿಸಲಾಗಿದೆ.