Site icon Vistara News

Actor Siddharth: ಹ್ಯಾಪಿ ಬರ್ತ್‌ಡೇ ಪಾರ್ಟ್ನರ್‌; ಅದಿತಿ ರಾವ್​ ಹೈದರಿಗೆ ಸಿದ್ಧಾರ್ಥ್ ಕ್ಯೂಟ್‌ ವಿಶ್!

Siddharth Aditi on birthday

ಬೆಂಗಳೂರು: ನಟ ಸಿದ್ಧಾರ್ಥ್ (Actor Siddharth) ಅವರು ಅದಿತಿ ರಾವ್ ಹೈದರಿ ಅವರಿಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ. Jio MAMI ಚಲನಚಿತ್ರೋತ್ಸವದಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು ಜೋಡಿ. ಅದಿತಿ ರಾವ್​ ಹೈದರಿಯನ್ನು ‘ಪಾರ್ಟ್ನರ್​’ ಎಂದು ಕರೆಯುವ ಮೂಲಕ ಸಿದ್ದಾರ್ಥ್ (Siddharth)​ ಅವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಚಿತ್ರವನ್ನು ಒಳಗೊಂಡಿರುವ ಪೋಸ್ಟ್‌ನೊಂದಿಗೆ ಶುಭ ಹಾರೈಸಿದ್ದಾರೆ.ʻ ʻʻಜನ್ಮದಿನದ ಶುಭಾಶಯಗಳು ‘ಪಾರ್ಟ್ನರ್‌; ಎಂದು ತಮ್ಮಿಬ್ಬರ ಫೋಟೋವನ್ನು ಹಂಚಿಕೊಂಡು, ಅದಕ್ಕೆ ಕವನದ ರೀತಿಯಲ್ಲಿ ಕ್ಯಾಪ್ಷನ್​ ಬರೆದಿದ್ದಾರೆ.

ದಿಯಾ ಮಿರ್ಜಾ, ಪತ್ರಲೇಖಾ ಅವರು ಅದಿತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅದಿತಿ ಅವರಿಗೆ ಈಗ 37 ವರ್ಷ ವಯಸ್ಸು .ಏಪ್ರಿಲ್ 7ರಂದು ಅಮೇಜಾನ್​ ಪ್ರೈಂ ವಿಡಿಯೊ ಮೂಲಕ ರಿಲೀಸ್ ಆಗಿರುವ ‘ಜ್ಯುಬಿಲಿ’ ವೆಬ್​ ಸಿರೀಸ್​ನಲ್ಲಿ ಅದಿತಿ ರಾವ್​ ಹೈದರಿ ನಟಿಸಿದ್ದರು. ಹಾಗಾಗಿ ಪ್ರೀಮಿಯರ್​ ಶೋಗೆ ಅವರ ಜತೆ ಸಿದ್ದಾರ್ಥ್​ ಕೂಡ ಆಗಮಿಸಿದ್ದರು. ಇವರೆಗೂ ಅದಿತಿ ಮತ್ತು ಸಿದ್ಧಾರ್ಥ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿರಲಿಲ್ಲ. ಆದರೀಗ ಪಾರ್ಟ್ನರ್‌ ಎಂಬ ಪದವನ್ನು ಬಳಿಸಿದ್ದಾರೆ.

ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ʻಮಹಾ ಸಮುದ್ರಮ್‌ʼ ಚಿತ್ರದಲ್ಲಿ ಸಿದ್ಧಾರ್ಥ್‌ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು. ಈ ಹಿಂದೆ ರಾಜಕುಮಾರ್‌ ರಾವ್‌ ಅವರ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್‌ ಹುಟ್ಟುಹಬ್ಬಕ್ಕೆ ಅತ್ಯಂತ ಪ್ರೀತಿಯಿಂದ ಹಾರೈಸಿದ್ದರು ಅದಿತಿ. ನಟಿ ಸಂಜಯ್ ಲೀಲಾ ಬನ್ಸಾಲಿಯವರ ‘ಹೀರಾಮಂಡಿ’ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಸಿದ್ಧಾರ್ಥ್, ‘ನುವ್ವೋಸ್ತಾನಂಟೆ ನೆನೊಡ್ಡಂಟಾನಾ’, ರಂಗ್ ದೇ ಬಸಂತಿ’ ಮತ್ತು ‘ಬೊಮ್ಮರಿಲ್ಲು’ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಖ್ಯಾತಿ ಪಡೆದಿದ್ದರು.

ಇದನ್ನೂ ಓದಿ: Actor Siddharth: ಶಿವಣ್ಣ, ಪ್ರಕಾಶ್‌ ರಾಜ್‌ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದ ನಟ ಸಿದ್ಧಾರ್ಥ್‌!

ಈ ಮೊದಲು ಅದಿತಿ ರಾವ್​ ಹೈದರಿ ಅವರು ನಟ ಸತ್ಯದೀಪ್​ ಮಿಶ್ರಾ ಜತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ದಾರ್ಥ್​ ಕೂಡ ಮೇಘನಾ ನಾರಾಯಣ್​ ಜತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್​ ಪಡೆದರು.

Exit mobile version