ಬೆಂಗಳೂರು: ಬಾಲಿವುಡ್ ಪ್ರೇಮ ಪಕ್ಷಿಗಳು ಎಂದೇ ಖ್ಯಾತಿ ಪಡೆದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ (Sidharth Kiara Wedding) ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ ಫೆಬ್ರವರಿ 7 ಮಧ್ಯಾಹ್ನ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಜೋಡಿ ಸಪ್ತಪದಿ ತುಳಿದಿದೆ.
ಸೋಮವಾರದಿಂದ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಮಂಗಳವಾರ, ಬೆಳಗ್ಗೆ ಹಳದಿ ಸಮಾರಂಭದೊಂದಿಗೆ ಮದುವೆಯ ಸಂಭ್ರಮವು ಪ್ರಾರಂಭವಾಗಿದ್ದು, ಮಧ್ಯಾಹ್ನ ಜೋಡಿ ಮದುವೆಯಾಗಿದೆ. ಜೋಡಿ ತಮ್ಮ ಕುಟುಂಬಗಳೊಂದಿಗೆ ಶನಿವಾರ ಜೈಸಲ್ಮೇರ್ ಹೋಟೆಲ್‌ಗೆ ಬಂದಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಅತಿಥಿಗಳು ವಿಮಾನ ನಿಲ್ದಾಣಕ್ಕೆ ಧಾವಿಸುತ್ತಿರುವುದು ಕಂಡುಬಂದಿತ್ತು.
ಇದನ್ನೂ ಓದಿ: Sidharth Kiara Wedding: ಶುರುವಾಯ್ತು ಕಿಯಾರಾ-ಸಿದ್ಧಾರ್ಥ್ ಮದುವೆಯ ಸಂಭ್ರಮ: ಫೋಟೊಗಳು ಇಲ್ಲಿವೆ!
ಮನೀಶ್ ಮಲ್ಹೋತ್ರಾ, ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್ ಮತ್ತು ಜೂಹಿ ಚಾವ್ಲಾ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ವರುಣ್ ಧವನ್ ಮತ್ತು ರೋಹಿತ್ ಶೆಟ್ಟಿ ಮದುವೆಗೆ ಹಾಜರಾಗಿದ್ದಾರೆ. ಮನೀಶ್ ಮಲ್ಹೋತ್ರಾ ಅವರು ಸಿದ್ಧಾರ್ಥ್ ಮತ್ತು ಕಿಯಾರಾ ಅವರ ಮದುವೆಯ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ. ಬಳಿಕ ಮುಂಬೈನಲ್ಲಿ ಈ ಜೋಡಿ ಆರತಕ್ಷತೆ ನಡೆಯಲಿದೆ.
ಇದನ್ನೂ ಓದಿ: Sidharth Kiara Wedding: ಕಿಯಾರ ಮದುವೆ ಫೋಟೊ ವೈರಲ್; ಮಂಗಳವಾರ ಹಸೆಮಣೆ ಏರಲಿದೆ ʻಶೇರ್ ಶಾʼ ಜೋಡಿ?