ಬೆಂಗಳೂರು: ಬಾಲಿವುಡ್ ʻಶೇರ್ ಶಾʼ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Kiara Wedding) ಅಂತಿಮವಾಗಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇದೀಗ ಸಿದ್ ದಂಪತಿಯ ಮದುವೆ ಪತ್ರಿಕೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ʻʻಈಗ ನಮ್ಮ ಪರ್ಮನೆಂಟ್ ಬುಕ್ಕಿಂಗ್ ಆಗಿದೆ. ನಮ್ಮ ಪ್ರೀತಿ ಹಾಗೂ ಮುಂದಿನ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆʼಎಂದು ಕಿಯಾರಾ ಹಾಗೂ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಸಿದ್ ದಂಪತಿಯ ಮದುವೆ ಪತ್ರಿಕೆ ಹೇಗಿತ್ತು ಎಂಬುದು ಕೂಡ ರಿವೀಲ್ ಆಗಿದೆ. ಸಿದ್ಧಾರ್ಥ್ -ಕಿಯಾರಾ ಮದುವೆ ಪತ್ರಿಕೆ ಸರಳವಾಗಿ ಮೂಡಿ ಬಂದಿದೆ. ಪತ್ರಿಕೆ ಸುತ್ತ ಕಪ್ಪು ಮತ್ತು ಕಂದು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಮಧ್ಯಭಾಗದಲ್ಲಿ ಜೋಡಿಯ ಮೊದಲ ಅಕ್ಷರವನ್ನು ಕೆ ಮತ್ತು ಎಸ್ ಅನ್ನು ಹೈಲೈಟ್ ಮಾಡಲಾಗಿದೆ. ಫೆ.5ರಿಂದ 7ರವರೆಗೆ ಮದುವೆ ಸಂಭ್ರಮವಾಗಿದ್ದು, ಸೂರ್ಯಗಢ ಜೈಸಲ್ಮೇರ್‌ನಲ್ಲಿ ಮದುವೆ ಎಂಬುದನ್ನು ಬರೆಯಲಾಗಿದೆ.
ಇದನ್ನೂ ಓದಿ: Sidharth Kiara Wedding: ಕಿಯಾರ- ಸಿದ್ಧಾರ್ಥ್ ಜೋಡಿಗೆ ರಾಮ್ ಚರಣ್ ಪತ್ನಿ ಉಪಾಸನಾ ಕ್ಷಮೆಯಾಚಿಸಿದ್ದು ಏಕೆ?
ಇದನ್ನೂ ಓದಿ: Sidharth Kiara Wedding: ಸತಿ-ಪತಿಯಾದ್ರು ಲವ್ ಬರ್ಡ್ಸ್ ಕಿಯಾರಾ-ಸಿದ್ಧಾರ್ಥ್
ಫೆಬ್ರವರಿ 10 ರಂದು ಜೋಡಿ ಮುಂಬೈಗೆ ಮರಳುವ ನಿರೀಕ್ಷೆಯಿದೆ ಮತ್ತು ಫೆಬ್ರವರಿ 12 ರಂದು ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎನ್ನಲಾಗಿದೆ. ಮನೀಶ್ ಮಲ್ಹೋತ್ರಾ, ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್ ಮತ್ತು ಜೂಹಿ ಚಾವ್ಲಾ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ವರುಣ್ ಧವನ್ ಮತ್ತು ರೋಹಿತ್ ಶೆಟ್ಟಿ ಮದುವೆಗೆ ಹಾಜರಾಗಿದ್ದಾರೆ. ಮನೀಶ್ ಮಲ್ಹೋತ್ರಾ ಅವರು ಸಿದ್ಧಾರ್ಥ್ ಮತ್ತು ಕಿಯಾರಾ ಅವರ ಮದುವೆಯ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ.