ಬೆಂಗಳೂರು: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Kiara Wedding) ಜೋಡಿ ಫೆಬ್ರವರಿ 7ರಂದು ಜೈಸಲ್ಮೇರ್ನ ಸೂರ್ಯಗಢ ಅರಮನೆಯಲ್ಲಿ ಹಸೆಮಣೆ ಏರಲಿದೆ ಎಂದು ವರದಿ ಆಗಿದೆ. ಫೆಬ್ರವರಿ4 ರಂದು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಗರಕ್ಕೆ ಬಂದಿದ್ದ ಜೋಡಿ, ಫೆಬ್ರವರಿ 5ರಂದು ಪ್ರೀ ವೆಡ್ಡಿಂಗ್ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿದೆ ಎಂದು ವರದಿಯಾಗಿದೆ. ಕಿಯಾರಾ ಅಡ್ವಾಣಿ ಬ್ರೈಡಲ್ ಲುಕ್ನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೊದಲ್ಲಿ, ಕಿಯಾರಾ ರಾಜಸ್ಥಾನಿ ವಧುವಿನಂತೆ ಕಾಣುತ್ತಿದ್ದಾರೆ.
ವಧು ಕಿಯಾರಾ ಅಡ್ವಾಣಿ ಫೋಟೊವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಫೋಟೊದಲ್ಲಿ, ಕಿಯಾರಾ ರಾಜಸ್ಥಾನಿ ವಧುವಿನಂತೆ ಕಾಣುತ್ತಿದ್ದಾರೆ. ಕಿಯಾರಾ ಅಡ್ವಾಣಿ ಕೈಯಲ್ಲಿ ರಾಜಸ್ಥಾನಿ ಶೈಲಿಯ ಬಳೆಗಳನ್ನು ಧರಿಸಿದ್ದು, ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಫೋಟೊ ಫೇಕ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಜಾಹಿರಾತುವೊಂದರ ಫೋಟೊ ಇದಾಗಿದೆ ಎನ್ನಲಾಗುತ್ತಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ವಿವಾಹದ ಆಚರಣೆಗಳನ್ನು ಮಾಡುತ್ತಿದ್ದಾರೆ. ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ.
ಇದನ್ನೂ ಓದಿ: Sidharth Kiara Wedding: ಸಿದ್ಧಾರ್ಥ್-ಕಿಯಾರಾ ಮದುವೆ ವಿಡಿಯೊ ಒಟಿಟಿಯಲ್ಲಿ ಲಭ್ಯ? ಆಪ್ತರು ಹೇಳುವುದೇನು?
ಇದನ್ನೂ ಓದಿ: Sidharth Kiara Wedding: ಸಿದ್-ಕಿಯಾರ ಮದುವೆ ಇಲ್ಲಿಯೇ ಎಂದು ಖಚಿತಪಡಿಸಿದ ಜೈಸಲ್ಮೇರ್ ಸೂರ್ಯಗಢ್ ಪ್ಯಾಲೇಸ್!
ಸಿದ್ಧಾರ್ಥ್ ಮತ್ತು ಕಿಯಾರಾ ಅವರ ವಿವಾಹಕ್ಕೆ ಸುಮಾರು 100 ಜನ ಅತಿಥಿಗಳಷ್ಟೇ ಭಾಗಿಯಾಗಲಿದ್ದು, ಆಪ್ತರಿಗಷ್ಟೇ ಆಹ್ವಾನ ಮಾಡಲಾಗಿದೆ ಎನ್ನಲಾಗಿದೆ. ಶಾಹಿದ್ ಕಪೂರ್, ಮೀರಾ ರಜಪೂತ್, ಕರಣ್ ಜೋಹರ್, ಮನೀಶ್ ಮಲ್ಹೋತ್ರಾ ಅವರು ಆಹ್ವಾನಿಸಿದವರಲ್ಲಿ ಸೇರಿದ್ದಾರೆ. ‘ಶೇರ್ ಶಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಅಭಿಮಾನಿಗಳು ಸಹ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.