Site icon Vistara News

Sidharth Kiara Wedding: ಸಿದ್ಧಾರ್ಥ್-ಕಿಯಾರ ಮದುವೆಯಲ್ಲಿ ಏನೆಲ್ಲ ವಿಶೇಷತೆಗಳಿರಲಿವೆ?

Sidharth Kiara Wedding

ಬೆಂಗಳೂರು: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ (Sidharth Kiara Wedding) ಫೆಬ್ರವರಿ 6 ರಂದು ವಿವಾಹವಾಗಲಿದ್ದಾರೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ. ಸಿದ್ ಮತ್ತು ಕಿಯಾರಾ ಮದುವೆಗೆ ಆಪ್ತರಿಗಷ್ಟೇ ಆಹ್ವಾನ ಮಾಡಲಾಗಿದ್ದು, ವಧು ವರರ ಉಡುಗೆಯನ್ನು ಮನೀಶ್ ಮಲ್ಹೋತ್ರಾ ಅವರು ಡಿಸೈನ್‌ ಮಾಡಿದ್ದಾರೆ ಎಂದು ವರದಿಯಾಗಿದೆ.

ಮನೀಶ್ ಮಲ್ಹೋತ್ರಾ ಮಾಧ್ಯಮವೊಂದರಲ್ಲಿ, ಮದುವೆಯಲ್ಲಿ ಐವರಿ ಅಥವಾ ಕೆಂಪು ಬಣ್ಣ, ಈ ಎರಡು ಬಣ್ಣಗಳ ಬಟ್ಟೆಗಳನ್ನು ಬಳಸಲಿದ್ದಾರೆ ಎನ್ನಲಾಗಿದೆ. ಕಿಯಾರ ಕೆಂಪು ಬಣ್ಣದ ಸಾಂಪ್ರದಾಯಿಕ ಲೆಹೆಂಗಾವನ್ನು ಧರಿಸಿ, ಮದುವೆಯ ವೈಬ್ ಅನ್ನು ಹೆಚ್ಚಿಸಲಿದ್ದಾರೆ. ಮತ್ತೊಂದೆಡೆ, ಸಿದ್ಧಾರ್ಥ್ ಶೇರ್ವಾನಿ ಧರಿಸಲಿದ್ದಾರೆ ಎಂದು ವರದಿಯಾಗಿದೆ. ಜೋಡಿ ಕ್ಲಾಸಿ ಲುಕ್‌ನಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: Kiara Advani and Sidharth Malhotra | ಇಲ್ಲಿವೆ ಬಾಲಿವುಡ್‌ ಲವ್‌ ಬರ್ಡ್ಸ್‌ ಕಿಯಾರಾ – ಸಿದ್ಧಾರ್ಥ್ ಫೋಟೊಗಳು

ಸಿದ್-ಕಿಯಾರಾ ಅವರು 5ರಂದು ಮಧ್ಯಾಹ್ನ ತಮ್ಮ ಮೆಹೆಂದಿ ಸಮಾರಂಭವನ್ನು ಆಯೋಜಿಸಲಿದ್ದಾರೆ, ನಂತರ 6 ರಂದು ಸಂಗೀತ, 3 ರಿಂದ ಸೂರ್ಯಗಢ್ ಹೋಟೆಲ್‌ಗೆ ಅತಿಥಿಗಳು ಬರಲು ಪ್ರಾರಂಭಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಡೆಸರ್ಟ್ ಸಫಾರಿ, ಆಹಾರ ಮಳಿಗೆಗಳು, ಜಾನಪದ ಪ್ರದರ್ಶನಗಳು ಇರಲಿವೆ. ಆರತಕ್ಷತೆಯನ್ನು ದೆಹಲಿ ಹಾಗೂ ಮುಂಬೈನಲ್ಲಿ ಜೋಡಿ ಆಯೋಜಿಸಿದ್ದು, ಮದುವೆ ದಿನದಂದು ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರಿಗೂ ಮದುವೆಗೆ ಆಹ್ವಾನವನ್ನು ನೀಡಲಾಗಿದೆ.

ಇದನ್ನೂ ಓದಿ: Kiara Advani: ಫೆ.6ಕ್ಕೆ ಹಸೆಮಣೆ ಏರಲಿದ್ದಾರಾ ಕಿಯಾರ-ಸಿದ್ಧಾರ್ಥ್? ವಿಡಿಯೊದಲ್ಲಿ ಏನಿದೆ?

‘ಷೇರ್ ಶಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಅಭಿಮಾನಿಗಳು ಸಹ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

Exit mobile version