Site icon Vistara News

Sidharth Malhotra: ನಾಳೆ ಬೋಲ್ಡ್‌ ಅನೌನ್ಸ್‌ಮೆಂಟ್ ಇರಲಿದೆ ಎಂದ ಸಿದ್ಧಾರ್ಥ್: ʻಕಿಯಾರ ಜತೆ ಮದುವೆʼ ಅಂದ್ರು ನೆಟ್ಟಿಗರು!

Sidharth Malhotra 'BOLD' ANNOUNCEMENT

ಬೆಂಗಳೂರು: ʻಮಿಷನ್ ಮಜ್ನುʼ ಸಿನಿಮಾ ಸಕ್ಸೆಸ್‌ ಬೆನ್ನಲ್ಲೇ ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಸೋಷಿಯಲ್‌ ಮೀಡಿಯಾದಲ್ಲಿ ನಾಳೆ ಬೋಲ್ಡ್‌ ಅನೌನ್ಸ್‌ಮೆಂಟ್ ಇರಲಿದೆ ಎಂದು ಘೋಷಣೆ ಮಾಡಿದ್ದಾರೆ. ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಕಿಯಾರಾ ಅಡ್ವಾಣಿಯೊಂದಿಗೆ ನಟ ಮದುವೆ ಅನೌನ್ಸ್‌ ಮಾಡಲಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಹೇಳುತ್ತಿದ್ದಾರೆ.

ಸಿದ್ಧಾರ್ಥ್ ಇತ್ತೀಚೆಗೆ ಮಿಷನ್ ಮಜ್ನುದಲ್ಲಿ ಕಾಣಿಸಿಕೊಂಡರು. ರಶ್ಮಿಕಾ ಮಂದಣ್ಣ ಅವರನ್ನೂ ಒಳಗೊಂಡಿರುವ ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಅಭಿನಯಕ್ಕಾಗಿ ಸಿದ್ಧಾರ್ಥ್ ಮೆಚ್ಚುಗೆ ಗಳಿಸಿದ್ದಾರೆ. ಇದರ ಬೆನ್ನಲ್ಲೇ ಸಿದ್ಧಾರ್ಥ್ ಮಲ್ಹೋತ್ರಾ ಪೋಸ್ಟ್‌ ಹಂಚಿಕೊಂಡಿದ್ದು ʻʻನಾಳೆ ಬೋಲ್ಡ್‌ ಮತ್ತು ರೋಮಾಂಚನಾಕರಿಯಾದ ಒಂದು ಘೋಷಣೆ ಇದೆ. ಕಾಯಿರಿʼ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಕಿಯಾರ ಜತೆ ಮದುವೆ ಅನೌಂನ್ಸ್‌ ಮಾಡಲಿದ್ದಾರೆ ಏಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಜೈಸಲ್ಮೇರ್‌ನಲ್ಲಿ ಜೋಡಿ ಹಸೆಮಣೆ ಏರಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Sushanth Singh | ದಿನಕ್ಕೆ ಎರಡೇ ತಾಸು ನಿದ್ರೆ ಮಾಡುತ್ತಿದ್ದ ಸುಶಾಂತ್‌! ನಟಿ ಕಿಯಾರಾ ಬಿಚ್ಚಿಟ್ಟ ಸತ್ಯ

ನಟಿ ಕಿಯಾರಾ ಆಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿಯು ತಮ್ಮ ಸಂಬಂಧವನ್ನು ಈಗಾಗಲೇ ಅನೇಕ ಕಡೆಗಳಲ್ಲಿ ಖಚಿತಪಡಿಸಿದೆ. ‘ಷೇರ್ ಶಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಅಭಿಮಾನಿಗಳು ಸಹ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Kiara Advani and Sidharth Malhotra | ಇಲ್ಲಿವೆ ಬಾಲಿವುಡ್‌ ಲವ್‌ ಬರ್ಡ್ಸ್‌ ಕಿಯಾರಾ – ಸಿದ್ಧಾರ್ಥ್ ಫೋಟೊಗಳು

ಸಿದ್ಧಾರ್ಥ್ ಇತ್ತೀಚೆಗೆ ಮಿಷನ್ ಮಜ್ನು ಯಶಸ್ಸಿನ ಬೆನ್ನಲ್ಲೇ ರೋಹಿತ್ ಶೆಟ್ಟಿ ಅವರ ʻಇಂಡಿಯನ್‌ ಪೊಲೀಸ್‌ ಫೋರ್ಸ್‌ʼ ಸಿರೀಸ್‌ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೆಬ್‌ ಸಿರೀಸ್‌ ಒಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಶಿಲ್ಪಾ ಶೆಟ್ಟಿ ಮತ್ತು ವಿವೇಕ್ ಒಬೆರಾಯ್ ಕೂಡ ನಟಿಸಿದ್ದಾರೆ.

Exit mobile version