Site icon Vistara News

Sidharth Kiara Wedding: ಸಾರ್ವಜನಿಕವಾಗಿ ಕಾಣಿಸಿಕೊಂಡ ನವದಂಪತಿ ಕಿಯಾರಾ-ಸಿದ್ಧಾರ್ಥ್

Sidharth Kiara Wedding make first appearance as husband and wife

ಬೆಂಗಳೂರು: ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಬಾಲಿವುಡ್‌ ಪ್ರೇಮ್‌ ಪಕ್ಷಿಗಳಾದ ಕಿಯಾರ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅಂತಿಮವಾಗಿ ವಿವಾಹವಾದರು. ಕಿಯಾರಾ ಆಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Kiara Wedding) ಮಂಗಳವಾರ ಫೆಬ್ರವರಿ 7 ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಕುಟುಂಬ ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಜೈಸಲ್ಮೇರ್ ವಿಮಾನ ನಿಲ್ದಾಣದಲ್ಲಿ ಗಂಡ ಮತ್ತು ಹೆಂಡತಿಯಾಗಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ವರದಿ ಪ್ರಕಾರ ಜೋಡಿ ನವದೆಹಲಿಯಲ್ಲಿರುವ ಸಿದ್ಧಾರ್ಥ್ ಅವರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಫೆಬ್ರವರಿ 9 ರಂದು ದೆಹಲಿಯಲ್ಲಿ ಆರತಕ್ಷತೆ ನಡೆಯಲಿದೆ ಎನ್ನಲಾಗಿದೆ. ಫೆಬ್ರವರಿ 10 ಕ್ಕೆ ಜೋಡಿ ಮುಂಬೈಗೆ ತೆರಳಲಿದ್ದು, ಫೆಬ್ರವರಿ 12 ರಂದು ಅಲ್ಲಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ ಎನ್ನಲಾಗಿದೆ.

ಮದುವೆ ಸಮಾರಂಭದಲ್ಲಿ ಕಬೀರ್ ಸಿಂಗ್, ಸಹ-ನಟ ಶಾಹಿದ್ ಕಪೂರ್ , ಕಿಯಾರಾ ಅವರ ಬಾಲ್ಯದ ಗೆಳತಿ ಇಶಾ ಅಂಬಾನಿ ಜತೆಗೆ ಪತಿ ಆನಂದ್ ಪಿರಾಮಳ್ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು. ಕಿಯಾರಾ ಅಡ್ವಾಣಿ ಅವರ ಕುಟುಂಬದ ಸ್ನೇಹಿತೆಯಾಗಿರುವ ಜೂಹಿ ಚಾವ್ಲಾ ಅವರು ಪತಿ ಜಯ್ ಮೆಹ್ತಾ ಅವರೊಂದಿಗೆ ಹಾಜರಿದ್ದರು. ಕರಣ್ ಜೋಹರ್ ಸಹ ಭಾಗವಹಿಸಿದ್ದರು.

ಇದನ್ನೂ ಓದಿ: Sidharth Kiara Wedding: `ಶೇರ್‌ ಶಾ’ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ವೈರಲ್‌!

ಇದನ್ನೂ ಓದಿ: Sidharth Kiara Wedding: `ಶೇರ್‌ ಶಾ’ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ವೈರಲ್‌!

ಕಿಯಾರಾ ಆಡ್ವಾಣಿ ಕೊನೆಯದಾಗಿ ಧರ್ಮ ಪ್ರೊಡಕ್ಷನ್ಸ್‌ನ ʻಗೋವಿಂದ ನಾಮ್ ಮೇರಾʼದಲ್ಲಿ (govind naam mera) ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಜತೆ ಕಾಣಿಸಿಕೊಂಡಿದ್ದರು. ನಿರ್ದೇಶಕ ಎಸ್ ಶಂಕರ್ ಅವರ ಹೆಸರಿಡದ ಚಿತ್ರದಲ್ಲಿ ಕಿಯಾರಾ ಅವರು ರಾಮ್ ಚರಣ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರು ರಶ್ಮಿಕಾ ಮಂದಣ್ಣ ಜತೆ ಕೊನೆಯದಾಗಿ ಮಿಷನ್ ಮಜ್ನುದಲ್ಲಿ (mission majnu) ಕಾಣಿಸಿಕೊಂಡಿದ್ದರು. ಚಿತ್ರ ಕಳೆದ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Exit mobile version