Site icon Vistara News

Kiara Advani | ಹೊಸ ವರ್ಷವನ್ನು ಒಟ್ಟಿಗೆ ಆಚರಿಸಲಿದ್ದಾರಾ ಕಿಯಾರಾ-ಸಿದ್ಧಾರ್ಥ್?ವಿಡಿಯೊ ವೈರಲ್‌!

Kiara Advani

ಬೆಂಗಳೂರು: ನಟಿ ಕಿಯಾರಾ ಆಡ್ವಾಣಿ (Kiara Advani ) ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿಯು ತಮ್ಮ ಸಂಬಂಧವನ್ನು ಈಗಾಗಲೇ ಅನೇಕ ಕಡೆಗಳಲ್ಲಿ ಖಚಿತಪಡಿಸಿದೆ. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಹೊಸ ವರ್ಷವನ್ನು ಇಬ್ಬರೂ ಒಟ್ಟಿಗೆ ಆಚರಿಸಲಿದ್ದಾರಾ ಎಂಬ ಗಾಸಿಪ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಕಿಯಾರಾ ಆಡ್ವಾಣಿ ಶೀಘ್ರದಲ್ಲೇ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಖ್ಯಾತ ಛಾಯಾಗ್ರಾಹಕ ವರಿಂದರ್ ಛಾವ್ಲಾ ಅವರ ಕ್ಯಾಮೆರಾದಲ್ಲಿ ಈ ಜೋಡಿ ವಿಮಾನ ನಿಲ್ದಾಣ ಆವರಣದಲ್ಲಿ ಸೆರೆಯಾಗಿತ್ತು. ಆ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಛಾವ್ಲಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Actor Siddharth | ʻಹೃದಯದ ರಾಜಕುಮಾರಿʼ ಅದಿತಿ ಎಂದು ವಿಶ್‌ ಮಾಡಿದ ನಟ ಸಿದ್ಧಾರ್ಥ್‌: ವೈರಲ್‌ ಆಯ್ತು ಪೋಸ್ಟ್‌!

ಈ ಹಿಂದೆ ಸಿದ್ಧಾರ್ಥ್ ಬಾಲಿವುಡ್‌ನ ಜನಪ್ರಿಯ ನಿರ್ಮಾಪಕರಾದ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿಯೂ ಮದುವೆಯಾಗುವ ಸುಳಿವು ನೀಡಿದ್ದರು. ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದೆ. ಆದರೆ ಮದುವೆ ಯಾವಾಗ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ.

‘ಷೇರ್ ಶಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಅಭಿಮಾನಿಗಳು ಸಹ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

ನಟಿ ಕಿಯಾರಾ ಆಡ್ವಾಣಿ ಶೀಘ್ರದಲ್ಲಿಯೇ ‘ಗೋವಿಂದ ನಾಮ್ ಮೇರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ‘ಇಂಡಿಯನ್ ಪೊಲೀಸ್ ಫೋರ್ಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ʻಮಿಷನ್‌ ಮಜ್ನುʼ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ.

ಇದನ್ನೂ ಓದಿ | ಸಿದ್ದಾರ್ಥ್​-ಕಿಯಾರಾ ಜೊತೆ ಜೊತೆಯಲಿ

Exit mobile version