ಮುಂಬಯಿ: ಬಾಲಿವುಡ್ ಸ್ಟಾರ್ ದಂಪತಿ ಸಿದ್ದಾರ್ಥ್ ಮಲ್ಹೋತ್ರಾ- ಕಿಯಾರ ಅಡ್ವಾಣಿ (Sidharth Malhotra- Kiara Advani wedding) ತಮ್ಮ ಮದುವೆಯ ಫೋಟೊಗಳನ್ನು ಮಂಗಳವಾರ ಸಂಜೆ (ಫೆಬ್ರವರಿ7ರಂದು) ಹಂಚಿಕೊಂಡಿದ್ದಾರೆ. ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದ ನವ ಜೋಡಿ ಎಲ್ಲರೂ ಹಾರೈಸುವಂತೆ ಕೋರಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಫೋಟೋ ಶೇರ್ ಮಾಡಿರುವ ಕಿಯಾರ ಅಡ್ವಾಣಿ, ನಾವಿಬ್ಬರು ಕಾಯಂ ಒಂದಾದೆವು, ಮುಂದಿನ ನಮ್ಮ ಪ್ರಯಾಣಕ್ಕೆ ನೆಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ಇರಲಿ ಎಂದು ಬರೆದುಕೊಂಡಿದ್ದಾರೆ.
ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರ ಅಡ್ವಾಣಿ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ವಿವಾಹವಾಗಿದ್ದಾರೆ. ಅದ್ಧೂರಿಯಾಗಿರುವ ನಡೆದಿರುವ ವಿವಾಯ ಕಾರ್ಯಕ್ರಮಕ್ಕೆ ಬಾಲಿವುಡ್ ಸೇರಿದಂತೆ ನಾನಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಿದ್ದರು. ಮೆಹೆಂದಿ, ಸಂಗೀತ್, ಹಲ್ದಿ ಸೇರಿದಂತೆ ನಾನಾ ಸಾಂಪ್ರದಾಯಿಕ ಕಾರ್ಯಕ್ರಮಗಲೂ ಮದುವೆ ಹಿನ್ನೆಲೆಯಲ್ಲಿ ನಡೆದವು.
ಸಿದ್ಧಾರ್ಥ್ ಮತ್ತು ಕಿಯಾರ 2021ರಲ್ಲ ಬಿಡುಗಡೆಯಾದ ಶೇರ್ಷಾ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಆ ಬಳಿಕದಿಂದ ಅವರಿಬ್ಬರು ಜತೆಯಾಗಿ ಓಡಾಡುತ್ತಿದ್ದರು. 2023 ಹೊಸ ವರ್ಷಚಾರಣೆಯನ್ನೂ ಅವರು ದುಬೈನಲ್ಲಿ ಮಾಡಿದ್ದರು. ಏತನ್ಮಧ್ಯೆ, ತಮ್ಮಿಬ್ಬರ ಸಂಬಂಧವನ್ನು ಬಹಿರಂಗಗೊಳಿಸಿದ್ದರು.