ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ʻಗುಡ್ ಬೈʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆದರೆ ಈ ಸಿನಿಮಾ ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. 30 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ರಶ್ಮಿಕಾ ಅಭಿನಯದ ಗುಡ್ ಬೈ ಸಿನಿಮಾ 9.66 ಕೋಟಿ ಕಲೆಕ್ಷನ್ ಮಾಡಿ, ದೊಡ್ಡ ನಷ್ಟ ಅನುಭವಿಸಿತ್ತು. ಹೀಗೆ ಮೊದಲ ಹಿಂದಿ ಚಿತ್ರದಲ್ಲೇ ಹಿನ್ನಡೆ ಅನುಭವಿಸಿದ್ದ ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ಹಿಂದಿ ಚಿತ್ರವೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಅದೃಷ್ಟವನ್ನು ಕೈತಪ್ಪಿಸಿಕೊಂಡಿದೆ. ಇದೀಗ ನೆಟ್ಟಿಗರು ಈ ವಿಷಯವನ್ನಿಟ್ಟುಕೊಂಡು ರಶ್ಮಿಕಾ ಕಾಲೆಳೆದಿದ್ದಾರೆ.
ಶಂತನು ಬಾಗ್ಚಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʻಮಿಷನ್ ಮಜ್ನುʼ (mission majnu) ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ಅಭಿನಯಿಸಿದ್ದಾರೆ. ಮೇ 13ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಆನಂತರದಲ್ಲಿ ಜೂನ್ 10ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಹಂಚಿಕೊಂಡಿತ್ತು. ಇದೀಗ ಸಿನಿಮಾ ಜನವರಿ 18ರಂದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್: ನಟ ನಂದಮೂರಿ ಬಾಲಕೃಷ್ಣ
ಈ ಕುರಿತು ರಶ್ಮಿಕಾ ಮಂದಣ್ಣ ಅವರಿಗೆ ನೆಟ್ಟಿಗರು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಮೊದಲ ಹಿಂದಿ ಸಿನಿಮಾ ಬೆನ್ನಲ್ಲೇ ಎರಡನೇ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಕಮೆಂಟ್ ಮೂಲಕ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಈ ನಡುವೆ ಅನೇಕ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಅದರಲ್ಲಿಯೂ ಅಕ್ಷಯ್‌ಕುಮಾರ್ ಅಭಿನಯದ ʻಕಟ್‌ಪುಟ್ಲಿʼ, ವಿಕ್ಕಿ ಕೌಶಾಲ್ ಅಭಿನಯದ ʻʻಗೋವಿಂದ್ ನಾಮ್ ಮೇರಾʼʼ ಹೀಗೆ ಅನೇಕ ಸಿನಿಮಾಗಳು ಬಿಡುಗಡೆಯಾಗಿವೆ.
ಇದನ್ನೂ ಓದಿ | Rashmika Mandanna | ನನಗೊಂದು ಗೊಂಬೆ ಕೊಡಿಸಲು ಅಪ್ಪ ಕಷ್ಟಪಡುತ್ತಿದ್ದರು: ರಶ್ಮಿಕಾ ಮಂದಣ್ಣ