ಬೆಂಗಳೂರು: ʻಸೌಂತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ (ಸೈಮಾ 2022)(SIIMA 2022) ಇದೇ ಮೊದಲ ಬಾರಿ ಸೆ.10 ಹಾಗೂ ಸೆ.11ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುತ್ತಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಲವರಿಗೆ ಹಲವು ಅವಾರ್ಡ್‌ಗಳು ಅರಸಿ ಬಂದಿದೆ.
ಶನಿವಾರದಂದು ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಪೂಜಾ ಹೆಗ್ಡೆ, ರಾಕಿಂಗ್ ಸ್ಟಾರ್ ಯಶ್ ಮುಂತಾದ ತಾರೆಯರು ಭಾಗಿಯಾಗಿದ್ದರು. ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಪ್ರಶಸ್ತಿಗಳು ಶನಿವಾರ ರಾತ್ರಿ ಪ್ರಕಟಗೊಂಡಿದ್ದು, ಭಾನುವಾರ (ಸೆ.11) ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಪ್ರಶಸ್ತಿಗಳು ಪ್ರಕಟಗೊಳ್ಳುತ್ತಿವೆ.
ಸೈಮಾ 2012ರಲ್ಲಿ ಪ್ರಾರಂಭಗೊಂಡಿದ್ದು, ಈ ಬಾರಿ 10ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಪ್ರಶಸ್ತಿ ಅಡಿಯಲ್ಲಿ ಬರುತ್ತವೆ. ಪ್ರತಿ ಭಾಷೆಯಲ್ಲಿ ಸುಮಾರು 10 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿ | Pushpa 2: The Rule | ಅಲ್ಲುಅರ್ಜುನ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೆಟ್ಟೇರಲು ಸಜ್ಜಾದ ಪುಷ್ಪರಾಜ್!
ಈ ಬಾರಿ ಅಲ್ಲು ಅರ್ಜುನ್ ನಟನೆಯ ಪುಷ್ಪ: ದಿ ರೈಸ್ ಸಿನಿಮಾ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಸಿನಿಮಾಗೆ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಸಂದರೆ, ಅತ್ಯುತ್ತಮ ಸಿನಿಮಾ ಪ್ರಶಸ್ತಿಯೂ ಲಭ್ಯವಾಗಿದೆ. ಹಾಗೇ ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿದೆ. ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಕೂಡ ‘ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಿಂದಿ ತಾರೆ’ ಆಗಿ ಹೊರಹೊಮ್ಮಿದ್ದಾರೆ.
ತೆಲುಗು ಸಿನಿಮಾ ಪ್ರಶಸ್ತಿಗಳ ಸುರಿಮಳೆ!
- ಅತ್ಯುತ್ತಮ ಚಿತ್ರ: ಪುಷ್ಪ: ದಿ ರೈಸ್
- ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್)
- ಅತ್ಯುತ್ತಮ ನಟ ಕ್ರಿಟಿಕ್ಸ್, ಲೀಡಿಂಗ್ ರೋಲ್: ನವೀನ್ ಪೋಲಿಶೆಟ್ಟಿ
- ಅತ್ಯುತ್ತಮ ನಟಿ: ಪೂಜಾ ಹೆಗ್ಡೆ (ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾ)
- ಅತ್ಯುತ್ತಮ ನಿರ್ದೇಶಕ: ಸುಕುಮಾರ್ (ಪುಷ್ಪ: ದಿ ರೈಸ್ )
- ಅತ್ಯುತ್ತಮ ಛಾಯಾಗ್ರಹಣ: ರಾಮಪ್ರಸಾದ್ (ಅಖಂಡ)
- ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿಶ್ರೀ ಪ್ರಸಾದ್ (ಪುಷ್ಪ: ದಿ ರೈಸ್)
- ಅತ್ಯುತ್ತಮ ಗೀತ ರಚನೆಕಾರ: ಚಂದ್ರಬೋಸ್ (ಪುಷ್ಪ: ದಿ ರೈಸ್ , ಶ್ರೀ ವಲ್ಲಿ ಹಾಡಿಗಾಗಿ)
- ಯೂತ್ ಐಕಾನ್ ಪ್ರಶಸ್ತಿಗೆ ಪೂಜಾ ಹೆಗ್ಡೆ ಹಾಗೂ ವಿಜಯ್ ದೇವರಕೊಂಡ ಭಾಜನರಾಗಿದ್ದಾರೆ.
ಇದನ್ನೂ ಓದಿ | Rocking Star Yash | ರಾಕಿ ಬಾಯ್ ಯಶ್ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!