Site icon Vistara News

SIIMA 2023; ಅತ್ಯುತ್ತಮ ನಟ, ನಟಿ ಜ್ಯೂ.ಎನ್‌ಟಿಆರ್‌, ಶ್ರೀಲೀಲಾ; ತೆಲುಗು ವಿಜೇತರ ಕಂಪ್ಲೀಟ್‌ ಲಿಸ್ಟ್‌!

J NTR Sreeleela

ಬೆಂಗಳೂರು: ಸೌತ್‌ ಇಂಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ 2023 (SIIMA 2023) ಈವೆಂಟ್ ದುಬೈನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 15ರಂದು ಕನ್ನಡ ಜತೆಗೆ ತೆಲುಗಿನ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಗಿದೆ. ‘RRR’ ಚಿತ್ರದ ನಟನೆಗಾಗಿ ಜ್ಯೂ. ಎನ್‌ಟಿಆರ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಕೂಡ ಪ್ರಶಸ್ತಿ ಸ್ವೀಕರಿಸಿದರು. ಪ್ರೇಕ್ಷಕರ ನಿರೀಕ್ಷೆಯಂತೆ ಆರ್‌ಆರ್‌ಆರ್‌ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚಿತ್ರರಂಗದಲ್ಲಿ ರಾಷ್ಟ್ರಪ್ರಶಸ್ತಿ, ಫಿಲ್ಮ್‌ಫೇರ್ ಬಳಿಕ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: SIIMA 2023: ದುಬೈನಲ್ಲಿ ಸೈಮಾ ಅವಾರ್ಡ್‌; ನಾಮಿನೇಟ್‌ ಆದ ಕನ್ನಡ ಸಿನಿಮಾಗಳ ಕಂಪ್ಲೀಟ್‌ ಲಿಸ್ಟ್‌!

ಕನ್ನಡ ನಟಿ ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಮಿಂಚಿದ್ದಾರೆ. ಸೈಮಾ ಪ್ರಶಸ್ತಿ 11 ನೇ ವರ್ಷಕ್ಕೆ ಕಾಲಿಟ್ಟಿದೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಟಿ ಶ್ರೀಲೀಲಾ ಚಿತ್ರರಂಗಕ್ಕೆ ಕಾಲಿಟ್ಟರು. ರಶ್ಮಿಕಾ ಮಂದಣ್ಣ ರೀತಿ ಶ್ರೀಲೀಲಾ ತೆಲುಗಿನಲ್ಲಿ ಹೆಸರು ಮಾಡುತ್ತಿದ್ದಾರೆ. ನಟಿಯ ಕೈಯಲ್ಲಿ ಬರೋಬ್ಬರಿ ಎಂಟು ಸಿನಿಮಾಗಳಿವೆ. ಶ್ರೀಲೀಲಾ ಡ್ಯಾನ್ಸ್‌ ಮತ್ತು ನಟನೆಗೆ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಬಹುತೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೆ, ಇನ್ನು ಕೆಲವು ಚಿತ್ರೀಕರಣ ಹಂತದಲ್ಲಿವೆ. ʻಪೆಲ್ಲಿ ಸಂದಡಿʼ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಶ್ರೀಲೀಲಾ. ಮಾಸ್ ಮಹಾರಾಜ ರವಿತೇಜ್ ಅಭಿನಯದ ʻಧಮಾಕಾʼ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ.

Exit mobile version