Site icon Vistara News

Silence 2 review: ಕುತೂಹಲ ಕೆರಳಿಸುವ ಕತೆ; ಮನೋಜ್ ಬಾಜಪೇಯಿ ಮನೋಜ್ಞ ಅಭಿನಯ!

Silence 2

ಬೆಂಗಳೂರು: ಸೈಲೆನ್ಸ್ 2 (Silence 2) ಚಿತ್ರ ಒಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಮುಂಬೈ ನ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣದಿಂದ ಪ್ರಾರಂಭವಾಗುತ್ತದೆ. ಅಂದು ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ನಲ್ಲಿ ಹಲವಾರು ಮಂದಿ ಸಾವನಪ್ಪಿದ ನಂತರ ತನಿಖೆಗಾಗಿ ವಿಶೇಷ ಅಪರಾಧ ತಂಡವನ್ನು ಕರೆಯಲಾಗುತ್ತದೆ. ತನಿಖೆ ಮುಂದುವರಿಯುತ್ತಿದ್ದಂತೆ ಪ್ರಕರಣದಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದಿದೆ ಎಂದು ತೋರುತ್ತದೆ.

ಎಸಿಪಿ ಅವಿನಾಶ್ ವರ್ಮಾ (ಮನೋಜ್ ಬಾಜಪೇಯಿ) ಮತ್ತು ಅವರ ತಂಡ ಮುಂಬೈ ನ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣ ತನಿಖೆಯನ್ನು ವಹಿಸಿಕೊಳ್ಳುತ್ತಾರೆ. ಅವರು ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡಿದಷ್ಟು ಅದರ ದಿಕ್ಕು ಬದಲಾಗುತ್ತಾ ಹೋಗುತ್ತದೆ. ಈ ಶೂಟೌಟ್ ಪ್ರಕರಣ ಮೊದಲ ನೋಟಕ್ಕೆ ರಾಜಕೀಯ ಪ್ರೇರಿತ ಎಂದು ಭಾವಿಸಲಾಗಿದ್ದರೂ ಹೆಚ್ಚಿನ ವಿವರಗಳು ಬಹಿರಂಗಗೊಂಡಂತೆ ಗುರಿ ಬೇರೆ ಯಾರೋ ಎಂದು ಶಂಕೆ ಎಸಿಪಿಗೆ ಹುಟ್ಟಿಕೊಳ್ಳುತ್ತದೆ.

ಆ ರಾತ್ರಿ ನಡೆದ ಶೂಟೌಟ್ ಪ್ರಕರಣದಲ್ಲಿ ಸಾವನಪ್ಪಿದ ಬಲಿಪಶುಗಳಲ್ಲಿ ಒಬ್ಬರಾದ ಅಜ್ಮಾ ಖಾನ್ ಅವರ ಮೇಲೆ ಗುಂಡು ಹಾರಿಸಿದ ರೀತಿ ತನಿಖಾ ಅಧಿಕಾರಿಗಳ ಜೊತೆಗೆ ಪ್ರೇಕ್ಷಕರ ಆಸಕ್ತಿಯನ್ನು ಕೆರಳಿಸುತ್ತದೆ. ಶೀಘ್ರದಲ್ಲಿಯೇ ಎಸಿಪಿ ಅವಿನಾಶ್ ವರ್ಮಾ ನೇತೃತ್ವದ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ರಹಸ್ಯವನ್ನು ಬಿಚ್ಚಿಡಲು ಪ್ರಾರಂಭಿಸುತ್ತದೆ. ತನಿಖೆಯನ್ನು ಹೆಚ್ಚಿಸಿದಾಗ ಇನ್ನೂ ಕೆಲವು ಪಾತ್ರಗಳು ಅನಾವರಣಗೊಳ್ಳುತ್ತದೆ.

ಸೈಲೆನ್ಸ್ 2 ಚಿತ್ರದ ಮುಖ್ಯ ಪಾತ್ರದಾರಿ ಮನೋಜ್ ಬಾಜಪೇಯಿ ಆಗಿದ್ದರಿಂದ ಚಿತ್ರದ ಹೆಚ್ಚಿನ ಭಾಗ ಅವರಿಗೆ ಸಂಬಂಧಿಸಿದಾಗಿದೆ. ಇವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಮತ್ತು ಆಗಾಗ ಪ್ರೇಕ್ಷಕರು ಹಾಸ್ಯದಲ್ಲಿ ಮುಳುಗುವಂತೆ ಮಾಡುವಂತಹ ಆಕರ್ಷಕ ಸಂಭಾಷಣೆಗಳು ಅವರ ಬಾಯಿಂದ ಕೇಳಿಬರುತ್ತದೆ. ಆರತಿ ಪಾರುಲ್ ಗುಲಾಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಮತ್ತು ಖಳನಾಯಕನಾದ ಅರ್ಜುನ್ ಪಾತ್ರದಲ್ಲಿ ದಿನಕರ್ ಶರ್ಮಾ ಉತ್ತಮವಾಗಿ ನಟಿಸಿದ್ದಾರೆ.

ಇದನ್ನೂ ಓದಿ: Ram Navami 2024: ರಾಮ ನವಮಿಯನ್ನು ವಿಶೇಷವಾಗಿ ಆಚರಿಸುವ ಟಾಪ್‌ 5 ಸ್ಥಳಗಳಿವು

ನೀವು ಕೊಲೆಯ ರಹಸ್ಯವನ್ನು ಬಯಸಿದರೆ ಸೈಲೆನ್ಸ್ 2 ಚಿತ್ರವನ್ನು ಖಂಡಿತವಾಗಿಯೂ ವೀಕ್ಷಿಸಬಹುದು. ಕೆಲವು ಸಣ್ಣಪುಟ್ಟ ನ್ಯೂನತೆಗಳ ಹೊರತಾಗಿ ಈ ಚಿತ್ರವನ್ನೊಮ್ಮೆ ವೀಕ್ಷಿಸಬಹುದಾಗಿದೆ. ಈ ಚಿತ್ರ ಜಿ 5 ಒಟಿಟಿಯಲ್ಲಿ ಲಭ್ಯ ಇದೆ.

Exit mobile version