ಬೆಂಗಳೂರು: ಈ ಬಾರಿ SIIMA (ಸೈಮಾ ಅವಾರ್ಡ್) 11ನೇ ಆವೃತ್ತಿಯು ದುಬೈನಲ್ಲಿ ಸೆಪ್ಟೆಂಬರ್ 15 ಮತ್ತು 16 ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ . ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದ ಪ್ರಮುಖ ತಾರೆಯರು ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ 1 ರಂದು, SIIMA 2023ರ ನಾಮಿನೇಟ್ ಆದ ಸಿನಿಮಾಗಳ ಬಗ್ಗೆ ಘೋಷಿಸಲಾಯಿತು. ‘ಆರ್‌ಆರ್‌ಆರ್’, ‘ಕೆಜಿಎಫ್ 2’, ‘ಕಾಂತಾರ’ ಮತ್ತು ‘ಪೊನ್ನಿಯನ್ ಸೆಲ್ವನ್ 2’ ಹಲವಾರು ಸಿನಿಮಾಗಳು ಈ ಬಾರಿ ನಾಮಿನೇಟ್ ಆಗಿವೆ.
ಕನ್ನಡ ಸಿನಿಮಾಗಳು
ರಿಷಬ್ ಶೆಟ್ಟಿ ಅವರ ‘ಕಾಂತಾರ’ ಮತ್ತು ಯಶ್ ಅವರ ‘ಕೆಜಿಎಫ್ 2’ ತಲಾ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’, ‘ಲವ್ ಮಾಕ್ಟೇಲ್ 2’ ಮತ್ತು ‘ವಿಕ್ರಾಂತ್ ರೋಣ’ ಅತ್ಯುತ್ತಮ ಚಿತ್ರಕ್ಕೆ ನಾಮನಿರ್ದೇಶನಗೊಂಡ ಚಿತ್ರಗಳಾಗಿವೆ.
ತೆಲುಗು ಸಿನಿಮಾಗಳು
SIIMA 2023 ರಲ್ಲಿ ‘RRR’ 11 ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಸೀತಾ ರಾಮಂ’ 10 ವಿಭಾಗಳಲ್ಲಿ ನಾಮಿನೇಟ್ ಆಗಿದೆ. ‘ಡಿಜೆ ಟಿಲ್ಲು’, ‘ಕಾರ್ತಿಕೇಯ 2’ ಮತ್ತು ‘ಮೇಜರ್’ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಚಿತ್ರಗಳಾಗಿವೆ.
ತಮಿಳು ಸಿನಿಮಾಗಳು
ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್: ಭಾಗ 1’ 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಒಂಬತ್ತು ನಾಮನಿರ್ದೇಶನಗಳೊಂದಿಗೆ ಲೋಕೇಶ್ ಕನಕರಾಜ್ ಅವರ ‘ವಿಕ್ರಂ’ ಇದ್ದರೆ,’ಲವ್ ಟುಡೇ’, ‘ತಿರುಚಿತ್ರಾಂಬಲಂ’ ಮತ್ತು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಅತ್ಯುತ್ತಮ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡ ಸಿನಿಮಾಗಳು.
ಇದನ್ನೂ ಓದಿ:Happy Birthday Dhanush : ಬಾಣಸಿಗ ಆಗಲು ಬಯಸಿದ್ದ ಧನುಷ್! ಇಲ್ಲಿವೆ ಕುತೂಹಲಕರ 40 ಸಂಗತಿಗಳು
ಮಲಯಾಳಂ ಸಿನಿಮಾಗಳು
ಅಮಲ್ ನೀರದ್ ನಿರ್ದೇಶನದ ಮಮ್ಮುಟ್ಟಿ ಅಭಿನಯದ ʻಭೀಷ್ಮ ಪರ್ವಂʼ ಎಂಟು ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಪಡೆದರೆ, ಟೋವಿನೋ ಥಾಮಸ್ ಅವರ ‘ತಳ್ಳುಮಾಲ’ ಏಳು ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. ‘ಹೃದಯಂ’, ‘ಜಯ ಜಯ ಜಯ ಜಯ ಹೇ’, ‘ನನ್ನ ತಾನ್ ಕೇಸ್ ಕೊಡು’ ಮತ್ತು ‘ಜನ ಗಣ ಮನ’ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸುತ್ತಿವೆ.