Site icon Vistara News

Lisa Marie Presley | ಅಮೆರಿಕನ್‌ ಖ್ಯಾತ ಗಾಯಕ ಎಲ್ವಿಸ್ ಪ್ರೀಸ್ಲಿ ಪುತ್ರಿ, ಸಂಗೀತಗಾರ್ತಿ ಲಿಸಾ ಮೇರಿ ಪ್ರೀಸ್ಲಿ ನಿಧನ

Lisa Marie Presley

ಬೆಂಗಳೂರು : ಅಮೆರಿಕದ ʻದಿ ಕಿಂಗ್ ಆಫ್ ರಾಕ್ ಆ್ಯಂಡ್ ರೋಲ್ʼ ಖ್ಯಾತಿಯ ಎಲ್ವಿಸ್ ಪ್ರೀಸ್ಲಿ ಅವರ ಏಕೈಕ ಪುತ್ರಿ ಸಂಗೀತಗಾರ್ತಿ ಲಿಸಾ ಮೇರಿ ಪ್ರೀಸ್ಲಿ (Lisa Marie Presley ) ನಿಧನರಾಗಿದ್ದಾರೆ. ಲಿಸಾ ಮೇರಿ ಪ್ರೀಸ್ಲಿಗೆ 54 ವರ್ಷ ವಯಸ್ಸಾಗಿತ್ತು. ವರದಿ ಪ್ರಕಾರ ಲಿಸಾ ಹೃದಯಾಘಾತಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿದೆ.

ಲಿಸಾ ಮೇರಿ ಪ್ರೀಸ್ಲಿ ತಾಯಿ ಮಾಧ್ಯಮದವರೊಂದಿಗೆ ʻʻನನ್ನ ಮಗಳು ಲಿಸಾ ಮೇರಿ ನಮ್ಮನ್ನು ಅಗಲಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ. ವರದಿ ಪ್ರಕಾರ ಕುಟುಂಬ ಮಾಹಿತಿಯಂತೆ ʻʻಅಮೆರಿಕದ ಲಾಸ್ ಏಂಜಲೀಸ್ ಉಪನಗರ ಕ್ಯಾಲಬಾಸಾಸ್‌ನಲ್ಲಿರುವ ತಮ್ಮ ಮನೆಯಲ್ಲಿಯೇ ಲಿಸಾ ಹೃದಯಾಘಾತಕ್ಕೆ ಒಳಗಾಗಿದ್ದರು. ಗುರುವಾರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಉಳಿಯಲಿಲ್ಲʼʼ ಎನ್ನಲಾಗಿದೆ.

ಇದನ್ನೂ ಓದಿ | ಹಿರಿಯ ಪತ್ರಕರ್ತ, ಕನ್ನಡ ಪ್ರಭದ ಮಾಜಿ ಸಂಪಾದಕ ಕೆ. ಸತ್ಯನಾರಾಯಣ ನಿಧನ

1968ರಲ್ಲಿ ಲಿಸಾ ಮೇರಿ ಪ್ರೀಸ್ಲಿ ಜನಸಿದ್ದಾರೆ. ಜನಪ್ರಿಯ ಪ್ರವಾಸಿ ಆಕರ್ಷಣೆಯಾದ ಮೆಂಫಿಸ್‌ನಲ್ಲಿರುವ ತಮ್ಮ ತಂದೆಯ ಗ್ರೇಸ್‌ಲ್ಯಾಂಡ್ ಮಹಲಿನ ಮಾಲೀಕರಾಗಿದ್ದರು. 1977ರಲ್ಲಿ ಗ್ರೇಸ್‌ಲ್ಯಾಂಡ್‌ನಲ್ಲಿ ಎಲ್ವಿಸ್ ನಿಧನರಾದಾಗ ಲಿಸಾ ಮೇರಿ ಪ್ರೀಸ್ಲಿ ಅವರಿಗೆ ಒಂಬತ್ತು ವರ್ಷ. ಸಂಗೀತ ವೃತ್ತಿಜೀವನವು 2003ರ ಚೊಚ್ಚಲ ಆಲ್ಬಂ “ಟು ಹೂಮ್ ಇಟ್ ಮೇ ಕನ್ಸರ್ನ್”ನೊಂದಿಗೆ ಪ್ರಾರಂಭವಾಯಿತು. ಅದರ ನಂತರ 2005 ರ “ನೌ ವಾಟ್,” ಬಿಲ್ಬೋರ್ಡ್ 200 ಆಲ್ಬಮ್ ಚಾರ್ಟ್‌ನಲ್ಲಿ ಟಾಪ್‌ 10ರಲ್ಲಿ ಅಗ್ರ ಸ್ಥಾನವನ್ನು ಪಡೆಯಿತು. ಮೂರನೇ ಆಲ್ಬಂ, “ಸ್ಟಾರ್ಮ್ ಆ್ಯಂಡ್ ಗ್ರೇಸ್,” 2012ರಲ್ಲಿ ಬಿಡುಗಡೆಯಾಯಿತು.

ಇದನ್ನೂ ಓದಿ | Sanjay Chouhan | `ಪಾನ್ ಸಿಂಗ್ ತೋಮರ್’ ಸಿನಿಮಾದ ಖ್ಯಾತ ಚಿತ್ರಕಥೆಗಾರ ಸಂಜಯ್ ಚೌಹಾಣ್ ವಿಧಿವಶ

Exit mobile version