ಬೆಂಗಳೂರು; ಗಾಯಕ-ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಬಿಗ್ಬಾಸ್ ಸೀಸನ್ 7 ಮೂಲಕ ಮನೆಮಾತಾದರು. ಇದೀಗ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಬಹುಕಾಲದ ಗೆಳತಿಯನ್ನು ಅವರು ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ. ಬಿಗ್ ಬಾಸ್ ಸೀಸನ್ 7 ಬಳಿಕ ಗಾಯಕ-ಸಂಗೀತ ನಿರ್ದೇಶಕ ವಾಸುಕಿ ವೈಭವ್ ಜತೆ ನಟಿ, ಡ್ಯಾನ್ಸರ್ ಚಂದನಾ ಅನಂತಕೃಷ್ಣ ಹೆಸರು ತಳುಕು ಹಾಕಿಕೊಂಡಿತ್ತು. ಹಿಂದಿನ ವರ್ಷ ದೀಪಾವಳಿ ವಿಶೇಷ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ಈ ವೇಳೆ ವಾಸುಕಿ ಫ್ಯಾನ್ಸ್ ಇವರಿಬ್ಬರು ಒಂದಾಗಲಿ ಎಂದು ಹಾರೈಸಿದ್ದರು.
ಚಂದನಾ ಜತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ವಾಸುಕಿ ಅವರಿಗೆ ಸಾಲು ಸಾಲು ಕಮೆಂಟ್‌ಗಳು ಬರಲಾರಂಭಿಸಿದ್ದವು. ಇಂಥ ಕಮೆಂಟ್ಗಳನ್ನು ನೋಡಿದ ಬಳಿಕ ವಾಸುಕಿ ವೈಭವ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ ‘ನನ್ನ ಹೊಸ ಪೋಸ್ಟ್ ನೋಡಿ ಅನೇಕರು ಹ್ಯಾಪಿ ಮ್ಯಾರೀಡ್ ಲೈಫ್ ಎನ್ನುತ್ತಿದ್ದಾರೆ. ಆದರೆ ಇದು ಕೇವಲ ದೀಪಾವಳಿ ಫೋಟೋಶೂಟ್ ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ಮಾಧ್ಯಮವೊಂದರ ವರದಿ ಪ್ರಕಾರ ಬಹುಕಾಲದ ಗೆಳತಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ನವೆಂಬರ್ 16ರಂದು ವಾಸುಕಿಯ ʼಗಟ್ಟಿಮೇಳʼ ಎನ್ನುತ್ತಿದೆ ಮೂಲ. ಆದರೆ ಹುಡುಗಿ ಯಾರು? ಮದುವೆ ಎಲ್ಲಿ ಎಂಬ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗೆ ವಾಸುಕಿ ನಟನೆಯ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾರ್ವಜನಿಕವಾಗಿ ವಾಸುಕಿ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ವೃತ್ತಿಜೀವನವನ್ನು ರಂಗಭೂಮಿಯಿಂದ ಪ್ರಾರಂಭಿಸಿದ್ದರು. ಈಗಲೂ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ವಾಸುಕಿ ವೈಭವ್ ಈಗ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಖ್ಯಾತಿ ಪಡೆಯುತ್ತಿದ್ದಾರೆ. 2016ರಲ್ಲಿ ತೆರೆಗೆ ಬಂದ ʼಊರ್ವಿʼ ಚಿತ್ರದ ಮೂಲಕ ಅವರು ನಟನೆಯನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ: Kamal Haasan: ಕಮಲ್ ಹಾಸನ್-ಮಣಿರತ್ನಂ ಕಾಂಬೋ ಸಿನಿಮಾ; ಫಸ್ಟ್ ಲುಕ್ ಔಟ್!
ವಸುಂಧರಾ (2014), ಪಟ್ಟಾಭಿಷೇಕ (2015), ರಾಮ ರಾಮ ರೇ (2016) , ಹ್ಯಾಪಿ ನ್ಯೂ ಇಯರ್ (2017) , ವಿಸ್ಮಯ ಹೀಗೆ ಹಲವಾರು ಚಿತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಚೂರಿಕಟ್ಟೆ (2018) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಹರಿಕಥೆ ಅಲ್ಲ ಗಿರಿಕಥೆ’, ‘ತತ್ಸಮ ತದ್ಭವʼ ಇವರ ಸಂಗೀತ ಸಂಯೋಜನೆಯ ಪ್ರಮುಖ ಚಿತ್ರಗಳು.