ಬೆಂಗಳೂರು: ʻಸಿಂಗಂ ಅಗೇನ್ʼ(Singham Again ) ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಸೇರಿದಂತೆ ಬಾಲಿವುಡ್ ಪ್ರಮುಖ ತಾರೆಗಳು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರುಗಳ ಲುಕ್ ಪೋಸ್ಟರ್ಗಳು ಔಟ್ ಆಗಿವೆ. ಇದೀಗ ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಮತ್ತೊಂದು ಬಿಗ್ ಅಪ್ಡೇಟ್ ಹಂಚಿಕೊಂಡಿದೆ. ಕರೀನಾ ಕಪೂರ್ ಅವರ ಲುಕ್ವನ್ನು ಹಂಚಿಕೊಂಡಿದೆ. ʻಅವನಿʼ ಸಿಂಗಂ ಆಗಿ ರಗಡ್ ಲುಕ್ನಲ್ಲಿ ಕಂಡಿದ್ದಾರೆ ಕರೀನಾ.
ಕರೀನಾ ಅವರು ರೋಹಿತ್ ಶೆಟ್ಟಿ ಅವರ ಪೋಸ್ಟ್ ರೀ ಪೋಸ್ಟ್ ಮಾಡಿ ʻʻಅವನಿ ಬಾಜಿರಾವ್ ಸಿಂಗಂ ನನ್ನ ಪಾತ್ರ ಈಗ. ರೋಹಿತ್ ಹಾಗೂ ನಾನು 2007ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವು. ಗೋಲ್ಮಾಲ್ ರಿಟರ್ನ್ಸ್, ಗೋಲ್ಮಾಲ್ 3, ಸಿಂಗಮ್ ರಿಟರ್ನ್ಸ್. ಇದೀಗ ಇದು ನಮ್ಮ ನಾಲ್ಕನೇ ಪ್ರಾಜೆಕ್ಟ್. 16 ವರ್ಷಗಳ ಸುದೀರ್ಘ ಒಡನಾಟ. ಏನೂ ಬದಲಾಗಿಲ್ಲʼʼಎಂದು ಬರೆದುಕೊಂಡಿದ್ದಾರೆ.
ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್ ಮತ್ತು ದೀಪಿಕಾ ಪಡುಕೋಣೆ ಅವರ ಪೋಸ್ಟರ್ಗಳ ನಂತರ, ಕರೀನಾ ಅವರು ಅವನಿ ಸಿಂಗಂ ಆಗಿ ಕಂಡಿದ್ದಾರೆ. ಅಜಯ್ ದೇವಗನ್ ಕೂಡ ಈ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ಅರ್ಜುನ್ ಕಪೂರ್ ಕೂಡ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇರುವುದರಿಂದ ಸಹಜವಾಗಿಯೇ ಹೈಪ್ ಸೃಷ್ಟಿ ಆಗಿದೆ.
ಇದನ್ನೂ ಓದಿ: Tiger Shroff: ʻಸಿಂಗಂ ಅಗೇನ್ʼನಲ್ಲಿ ಟೈಗರ್ ಶ್ರಾಫ್; ಶರ್ಟ್ಲೆಸ್ ಫೋಟೊಗೆ ಫುಲ್ ಮಾರ್ಕ್ಸ್!
ಈ ಹಿಂದೆ ಪೋಸ್ಟರ್ಗಳನ್ನು ಹಂಚಿಕೊಂಡ ಟೈಗರ್, “ಎಸಿಪಿ ಸತ್ಯ ರಿಪೋರ್ಟಿಂಗ್ ಆನ್ ಡ್ಯೂಟಿ ಸಿಂಗಂ ಸರ್ #ಸಿಂಗಮ್ ಅಗೇನ್” ಎಂದು ಬರೆದುಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೀಗ ದೀಪಿಕಾ ಅವರ ಫಸ್ಟ್ ಲುಕ್ ಪೋಸ್ಟರ್ ಈ ಹಿಂದೆ ಅನಾವರಣಗೊಳಿಸಿತ್ತು. ಶಕ್ತಿ ಶೆಟ್ಟಿ ಪಾತ್ರದ ಹೆಸರು.
ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್ ಲುಕ್ ಕೊಟ್ಟಿದ್ದರು ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡಿದ್ದವು.