ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ, ಅಜಯ್ ದೇವಗನ್ ನಟನೆಯಲ್ಲಿ ಮೂಡಿಬಂದ ಸಿಂಗಂ ಸಿನಿಮಾಗಳೆರೆಡೂ ಹಿಟ್ ಆಗಿದ್ದವು. ಇದೀಗ ಸಿಂಗಂ ಅಗೇಯ್ನ್ (Singham Again) ಸಿನಿಮಾ ಮಾಡುವುದಕ್ಕೆ ರೋಹಿತ್ ಶೆಟ್ಟಿ ತಂಡ ಸಿದ್ಧವಾಗಿದೆ. ಕೆಲ ತಿಂಗಳುಗಳಲ್ಲೇ ಸೆಟ್ಟೇರಲಿರುವ ಈ ಸಿನಿಮಾ ಬೇರೆಲ್ಲಾ ಸಿನಿಮಾಗಳಿಗಿಂತ ತುಂಬಾನೇ ವಿಭಿನ್ನವಾಗಿರಲಿದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ರೋಹಿತ್ ಶೆಟ್ಟಿ ಅವರು ತಮ್ಮ ಈ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. “ಸಿಂಗಂ ಅಗೇಯ್ನ್ ಮಾಡುವುದಕ್ಕೆ ನಾವು ಕೂಡ ಉತ್ಸುಕರಾಗಿದ್ದೇವೆ. ಸಿನಿಮಾ ಸೆಟ್ಟೇರಲು ಇನ್ನೂ ಕೆಲವು ತಿಂಗಳ ಕಾಲಾವಕಾಶವಿದೆ. ಇನ್ನು ಎರಡು-ಮೂರು ತಿಂಗಳುಗಳಲ್ಲಿ ಸಿನಿಮಾ ಕೆಲಸ ಆರಂಭವಾಗಲಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ರೋಗಿಗೆ ಬೈದು, ಒಂದೇಟು ಹೊಡೆದ ವೈದ್ಯ; ನೆಟ್ಟಿಗರಿಂದ ಛೀಮಾರಿ
ಹಾಗೆಯೇ, “ಈ ಸಿಂಗಂ ಅಗೇಯ್ನ್ ಬೇರೆ ಎಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿರಲಿದೆ. ಸ್ಕ್ರಿಪ್ಟ್ ಕೆಲಸ ಈಗಾಗಲೇ ಆಗಿದೆ. ಇದು ಅತ್ಯಂತ ದೊಡ್ಡ ಕಥೆಯಾಗಿದೆ. ಈ ಸಿಂಗಂ ಪಾತ್ರ ಎಲ್ಲರಿಗಿಂತ ವಿಭಿನ್ನವಾಗಿದೆ ಮತ್ತು ಅತಿ ಹೆಚ್ಚು ಜನರ ಪ್ರೀತಿಗೆ ಪಾತ್ರವಾಗಲಿದೆ ಎನ್ನುವ ನಂಬಿಕೆ ನನಗಿದೆ. ಈ ಸಿನಿಮಾ ಮೂಲಕ ಅಜಯ್ ದೇವಗನ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವುದಕ್ಕೆ ನನಗೆ ಹೆಚ್ಚಿನ ಉತ್ಸಾಹವಿದೆ. ಸೂರ್ಯವಂಶಿ ಸಿನಿಮಾವನ್ನೇ ನಾವು ವಿಭಿನ್ನವಾಗಿ ಮಾಡಿದ್ದೆವು. ಆದರೆ ಇದೀಗ ಸಿಂಗಂ ಅಗೇಯ್ನ್ ಸಿನಿಮಾ ಅದರ ಹತ್ತು ಪಟ್ಟಿದೆ” ಎಂದು ತಿಳಿಸಿದ್ದಾರೆ ರೋಹಿತ್ ಶೆಟ್ಟಿ.
ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರೊಂದಿಗೆ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ವಿಕ್ಕಿ ಕೌಶಲ್ ಕೂಡ ನಟಿಸಲಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ್ದ ರಣವೀರ್ ಅವರು, ” ನಾನು ಈ ಸಿನಿಮಾದ ಕಥೆಯನ್ನು ನನ್ನ ವ್ಯಾನ್‌ನಲ್ಲಿ ಕುಳಿತು ಕೇಳಿದೆ. ಕಥೆ ಮುಗಿಯುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ಹೊಡೆಯಬೇಕಿನಿಸಿತು. ಕಥೆಯ ವಿವರಣೆ ಕೇಳಿದಾಕ್ಷಣ ಯಾವಾಗ ಈ ಚಿತ್ರೀಕರಣಕ್ಕೆ ಹೋಗುತ್ತೇನೋ ಎನ್ನುವ ಉತ್ಸಾಹ ಮೂಡಿತು” ಎಂದು ಹೇಳಿದ್ದರು.