Site icon Vistara News

Singham Again : ಅಜಯ್ ದೇವಗನ್‌ ಅಭಿನಯದ ಸಿಂಗಂ ಅಗೇಯ್ನ್‌ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌

#image_title

ಮುಂಬೈ: ಬಾಲಿವುಡ್‌ನಲ್ಲಿ ನಿರ್ದೇಶಕ ರೋಹಿತ್‌ ಶೆಟ್ಟಿ ಮತ್ತು ನಟ ಅಜಯ್‌ ದೇವಗನ್‌ ಅವರದ್ದು ಹಿಟ್‌ ಕಾಂಬಿನೇಷನ್‌ ಎಂದೇ ಹೇಳಬಹುದು. ಸಿಂಗಂ ಸಿನಿಮಾಗಳ ಮೂಲಕ ಹಿಟ್‌ ಮೇಲೆ ಹಿಟ್‌ ಕೊಟ್ಟಿರುವ ಈ ಜೋಡಿ ಇದೀಗ ʼಸಿಂಗಂ ಅಗೇಯ್ನ್‌ʼ (Singham Again) ಸಿನಿಮಾದ ತಯಾರಿಯಲ್ಲಿದೆ. ಅಂದ ಹಾಗೆ ಈ ಸಿನಿಮಾ ಮುಂದಿನ ವರ್ಷ ದೀಪಾವಳಿ ಉಡುಗೊರೆಯಾಗಿ ಸಿಗಲಿದೆ ಎನ್ನುವ ಮಾಹಿತಿ ಇದೀಗ ಹೊರಬಿದ್ದಿದೆ.

ಇದನ್ನೂ ಓದಿ: MS Dhoni: ಸಿಂಗಂ-3 ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಎಂ.ಎಸ್​. ಧೋನಿ; ಫೋಟೊ ವೈರಲ್​
ಸಿನಿಮಾ ವಿಶ್ಲೇಷಕರಾಗಿರುವ ತರುಣ್‌ ಆದರ್ಶ್‌ ಅವರು ಸಿಂಗಂ ಅಗೇಯ್ನ್‌ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾ 2024ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಈ ಸಿನಿಮಾದ ಚಿತ್ರೀಕರಣವು ಇದೇ ಜುಲೈನಿಂದ ಆರಂಭವಾಗಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.


ಈ ಹಿಂದೆ ಜನವರಿಯಲ್ಲಿ ರೋಹಿತ್‌ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದ ಅಜಯ್‌ ದೇವಗನ್‌ ಅವರು, ಸಿಂಗಂ ಅಗೇಯ್ನ್‌ ಸಿನಿಮಾದ ಕಥೆ ಕೇಳಿದ್ದಾಗಿ ಬರೆದುಕೊಂಡಿದ್ದರು. ತಮ್ಮಿಬ್ಬರ ಜೋಡಿಯಲ್ಲಿ 11ನೇ ಸಿನಿಮಾ ಬರಲಿದೆ ಎಂದು ಅಧಿಕೃತ ಮಾಹಿತಿ ಕೊಟ್ಟಿದ್ದರು.

Exit mobile version