Site icon Vistara News

Sita Ramam Film | ಸೀತಾ ರಾಮಂ ಪ್ರೀ ರಿಲೀಸ್‌ ಇವೆಂಟ್‌: ಚಿತ್ರಮಂದಿರ ದೇವಸ್ಥಾನ ಇದ್ದಂತೆ ಎಂದ ಪ್ರಭಾಸ್‌

Sita Ramam Film

ಬೆಂಗಳೂರು: ಮಾಲಿವುಡ್ ಸೂಪರ್ ಹೀರೊ ದುಲ್ಖರ್‌ ಸಲ್ಮಾನ್‌ ಅವರ ಹೊಸ ಚಿತ್ರ ಸೀತಾ ರಾಮಂ (Sita Ramam Film) ಸಿನಿಮಾದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಬುಧವಾರ (ಆ.3) ನಟ ಪ್ರಭಾಸ್‌ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಇದೇ ವೇಳೆ ಅವರು ೧೦೦ ರೂಪಾಯಿ ಕೊಟ್ಟು ಸಿನಿಮಾದ ಮೊದಲ ಟಿಕೆಟ್‌ ಅನ್ನು ಖರೀದಿ ಮಾಡಿದರು.

ಸೀತಾ ರಾಮಂ ಸಿನಿತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಪ್ರಭಾಸ್‌, ʻಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ದುಲ್ಕರ್ ಅವರು ದೇಶದ ಅತ್ಯಂತ ಸುಂದರ ನಾಯಕರಲ್ಲಿ ಒಬ್ಬರು. ಅವರೊಬ್ಬ ಸೂಪರ್ ಸ್ಟಾರ್. ‘ಮಹಾನಟಿ’ ಎಂತಹ ಅದ್ಭುತ ಚಿತ್ರ. ದುಲ್ಕರ್ ಮತ್ತು ಮೃಣಾಲ್ ಅಭಿನಯವನ್ನು ಎಲ್ಲರೂ ಹೊಗಳುತ್ತಿದ್ದಾರೆ. ನಾನು ಈ ಚಿತ್ರವನ್ನು ನೋಡುತ್ತೇನೆ. ಇಷ್ಟೊಂದು ಪ್ಯಾಶನ್ ಮತ್ತು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಚಿತ್ರದಲ್ಲಿ ಲವ್ ಸ್ಟೋರಿ ಜತೆಗೆ ವಾರ್ ಸೀಕ್ವೆನ್ಸ್ ಇರಲಿದೆಯಂತೆ. ಇದು ಕೇವಲ ಲವ್ ಸ್ಟೋರಿ ಅಲ್ಲ, ಚಿತ್ರದಲ್ಲಿ ಇತರ ಅಂಶಗಳಿವೆ. ಹನು ರಾಘವಪುಡಿ ಅವರ ಸಿನಿಮಾ ನೋಡಿದ್ದೇನೆ. ಅವರೊಬ್ಬ ಒಳ್ಳೆಯ ನಿರ್ದೇಶಕ. ಅವರು ಸಿನಿಮಾ ತೋರಿಸುವ ರೀತಿ ಕವನದಂತಿದೆ” ಎಂದು ಹೇಳಿದರು.

ಇದನ್ನೂ ಓದಿ | Sita Ramam Film | ದುಲ್ಖರ್‌ ಸಲ್ಮಾನ್‌ ಜತೆ ನಟಿಸಲಿದ್ದಾರೆ ಕ್ರಶ್ಮಿಕಾ

‘ʻಸುಮಂತ್ ಈ ಸಿನಿಮಾದಲ್ಲಿ ನಟಿಸಿರುವುದರಿಂದ ಅವರ ಪಾತ್ರದಲ್ಲಿ ಏನಾದರೂ ವಿಶೇಷತೆ ಇರಬೇಕು. ಅದು ಏನೆಂದು ತಿಳಿಯಬೇಕು. ತೆಲುಗಿನಲ್ಲಿ ಅಶ್ವಿನಿ ದತ್ತಾ ಅವರಂತಹ ನಿರ್ಮಾಪಕರು ಸಿಕ್ಕಿರುವುದು ನಮ್ಮ ಅದೃಷ್ಟ. ಕಳೆದ ಐವತ್ತು ವರ್ಷಗಳಿಂದ ಚಲನಚಿತ್ರಗಳನ್ನು ನಿರ್ಮಿಸುವುದು ದೊಡ್ಡ ವಿಷಯವಾಗಿದೆ. ಅಲ್ಲದೆ, ಅವರು ಅದನ್ನು ಸಾಬೀತುಪಡಿಸಿದ್ದಾರೆ. ನಾನು ಯಾರನ್ನಾದರೂ ಮರೆತಿದ್ದರೆ ಕ್ಷಮಿಸಿ. ಕೆಲವು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ಮಾತ್ರ ನೋಡಬೇಕು. ‘ಸೀತಾ ರಾಮಂ’ ಸಿನಿಮಾ ಆ ಸಾಲಿಗೆ ಸೇರಲಿದೆ. ಮನೆಯಲ್ಲಿ ಪೂಜಾ ಕೋಣೆ ಇದ್ದರೂ ನಾವು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ. ಅಂತೆಯೇ ನಮ್ಮ ಸಿನಿಮಾ ಕ್ಷೇತ್ರದಲ್ಲಿ ರಂಗಭೂಮಿ ಎಂದರೆ ದೇವಸ್ಥಾನ. ಇದೆಲ್ಲವೂ ನಿಮ್ಮಿಂದಾಗಿ, ನೀವು ಕೊಟ್ಟಿದ್ದೀರಿ. ನಾವು ಈ ಚಿತ್ರವನ್ನು ಥಿಯೇಟರ್‌ಗಳಲ್ಲಿ ನೋಡಬೇಕು” ಎಂದು ಪ್ರಭಾಸ್‌ ಹೇಳಿದರು.

ಮೊದಲ ಟಿಕೆಟ್‌ ಕೊಂಡುಕೊಂಡ ಪ್ರಭಾಸ್‌

ಸಿನಿಮಾವನ್ನು ತಾವೂ ಸಹ ನೋಡುವುದಾಗಿ ಹೇಳಿದ ಪ್ರಭಾಸ್‌ ಬಳಿಕ ವೇದಿಕೆಯಲ್ಲಿಯೇ 100 ರೂಪಾಹಿ ಕೊಟ್ಟು ʻಸೀತಾ ರಾಮಂʼ ಸಿನಿಮಾದ ಮೊದಲ ಟಿಕೆಟ್‌ ಅನ್ನು ಕೊಂಡುಕೊಂಡರು. ಈ ಚಿತ್ರ ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ತೆರೆಕಾಣಲಿದ್ದು, ಶುಕ್ರವಾರ (ಆ.೫ರಂದು) ಎಲ್ಲೆಡೆ ಪ್ರದರ್ಶನಗೊಳ್ಳಲಿದೆ. ಸಿನಿಮಾದ ಟೀಸರ್​ ನೋಡಿದರೆ ಯೋಧನ ಬಗ್ಗೆ ಹೆಣೆದ ಕತೆ ಇರುವಂತೆ ಕಾಣುತ್ತಿದೆ. ನಟ ದುಲ್ಖರ್ ಸಲ್ಮಾನ್ ಈ ಸಿನಿಮಾದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ದುಲ್ಖರ್‌ ಲೆಫ್ಟಿನೆಂಟ್‌ ರಾಮ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಸೀತಾ ಪಾತ್ರದಲ್ಲಿ ಮೃಣಾಲ್ ಠಾಕೂರ್ ಅಭಿನಯಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವುದು ವಿಶೇಷ.

ಸೌತ್ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಹನು ರಾಘವಪುಡಿ. ಈ ಚಿತ್ರವನ್ನು ಕಾಶ್ಮೀರ ಕಣಿವೆಯಲ್ಲಿ ಚಿತ್ರೀಕರಿಸಿರುವುದು ವಿಶೇಷ. ಅದರಲ್ಲೂ ಪಿ.ಎಸ್. ವಿನೋದ್ ಅವರ ಸಿನಿಮಾಟೋಗ್ರಫಿಯು ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣಿಸುತ್ತಿದೆ. ಇನ್ನು ಚಿತ್ರದಲ್ಲಿ ಯೋಧನ ನಿರೀಕ್ಷೆಗಳು, ಪ್ರೀತಿಯ ಹುಡುಕಾಟವನ್ನು ನಿರೀಕ್ಷಿಸಬಹುದು. ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ನಿರ್ಮಾಣ ಚಿತ್ರಕ್ಕಿದೆ. ಆಗಸ್ಟ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ | Dulquer Salmaan | ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್‌ಗೆ ಜನುಮದಿನದ ಸಂಭ್ರಮ

Exit mobile version